Vande Bharat: ಬೆಂಗಳೂರು ವಂದೇ ಭಾರತ್, ಶತಾಬ್ಧಿ, ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಬದಲಾವಣೆ, ನಿಲುಗಡೆ ರದ್ದು
ಬೆಂಗಳೂರು: ನೈಋತ್ಯ ರೈಲ್ವೆ ವ್ಯಾಪ್ತಿಯ ಕೃಷ್ಣರಾಜಪುರಂ ಮತ್ತು ವೈಟ್‌ಫೀಲ್ಡ್ ನಡುವೆ ಇಂಜಿನಿಯರಿಂಗ್ ಕಾಮಗಾರಿಗಳು ನಡೆಯಲಿವೆ. ಈ ಸಂಬಂಧ ಬೆಂಗಳೂರು ಮೂಲಕ ಸಂಚಾರ ನಡೆಸುವ ಜನಶತಾಬ್ದಿ ಹಾಗೂ ವಂದೇ ಭಾರತ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದೆ. ಜೂನ್ 7 ಮತ್ತು 8 ರಂದು ಈ ಎರಡು ರೈಲುಗಳ ಪ್ರಯಾಣಿಕರಿಗೆ ಮಾರ್ಗ ಬದಲಾವಣೆ, ನಿಲುಗಡೆ ರದ್ದು, ವಿಳಂಬ ಸಮಸ್ಯೆ ಎದುರಾಗಲಿದೆ.
ಜೂನ್ 7 ರಂದು ಪರಿಣಾಮ ಬೀರುವ ರೈಲುಗಳು
ಜೂನ್ 7 ರಂದು ರಾತ್ರಿ 8:10ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಡಬೇಕಿದ್ದ ಕೆಎಸ್‌ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್‌ಪ್ರೆಸ್ ರೈಲು (16526) ಬೆಂಗಳೂರು ಕಂಟೋನ್ಮೆಂಟ್, ಬೈಯಪ್ಪನಹಳ್ಳಿ, ಬೈಲೂರು ರೋಡ್, ಹೊಸೂರು, ಧರ್ಮಾವರಂ ಮತ್ತು ಸೇಲಂ ಮೂಲಕ ಸಾಗಲಿದೆ. ಇದು ಕೃಷ್ಣರಾಜಪುರಂ, ವೈಟ್‌ಫೀಲ್ಡ್, ಮಾಲೂರು, ಬಂಗಾರಪೇಟೆ, ಕುಪ್ಪಂ ಮತ್ತು ತಿರುಪತ್ತೂರಿನಲ್ಲಿ ನಿಲುಗಡೆ ರದ್ದುಗೊಳಿಸಲಾಗಿದೆ.

ಜೂನ್ 7 ರಂದು ಮಧ್ಯಾಹ್ನ 3:50ಕ್ಕೆ ಚಾಮರಾಜನಗರದಿಂದ ಹೊರಡುವ ಚಾಮರಾಜನಗರ-ತಿರುಪತಿ ಎಕ್ಸ್‌ಪ್ರೆಸ್ ರೈಲು (16219) ಬೈಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ಹಿಂದೂಪುರ, ಧರ್ಮಾವರಂ, ಪಾಕಲ ಮತ್ತು ತಿರುಪತಿ ಮಾರ್ಗಕ್ಕೆ ಬದಲಾಯಿಸಲಾಗಿದೆ. ಈ ರೈಲು ಕೃಷ್ಣರಾಜಪುರಂ, ವೈಟ್‌ಫೀಲ್ಡ್, ಬಂಗಾರಪೇಟೆ, ಕುಪ್ಪಂ, ಜೋಲಾರಪೇಟೆ, ಕಾಟ್ಪಾಡಿ ಮತ್ತು ಚಿತ್ತೂರು ನಿಲ್ದಾಣಗಳಿಗೆ ನಿಲುಗಡೆ ನೀಡದೇ ಸಾಗಲಿದೆ.
ಎರ್ನಾಕುಲಂ ಜಂಕ್ಷನ್‌ನಿಂದ ಹೊರಡುವ ಎರ್ನಾಕುಲಂ ಜಂಕ್ಷನ್-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (26652) ಜೂನ್ 7 ರಂದು ಮಧ್ಯಾಹ್ನ 2:20ಕ್ಕೆ ಸೇಲಂ, ಓಮಲೂರು, ಹೊಸೂರು, ಬಿಚ್ಚುಪಲ್ಲಿ ಮತ್ತು ಬೈಯಪ್ಪನಹಳ್ಳಿ ಮಾರ್ಗವಾಗಿ ಸಂಚರಿಸಲಿದ್ದು, ಕೃಷ್ಣರಾಜಪುರಂ ನಿಲುಗಡೆ ನೀಡದೇ ಸಂಚರಿಸಲಿದೆ.
ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆ ರದ್ದು
ಕೊಯಮತ್ತೂರು-ನಿಜಾಮುದ್ದೀನ್ ಕೊಂಗು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12647) 4:30ಕ್ಕೆ ಹೊರಡಲಿದೆ. ಈ ರೈಲು ಸೇಲಂ, ತಿರುಪತ್ತೂರು, ಜೋಲಾರಪೇಟೆ, ರೇಣಿಗುಂಟಾ ಮತ್ತು ಧೋನೆ ಮೂಲಕ ಸಾಗುವಂತೆ ಮಾರ್ಗ ಬದಲಾಯಿಸಲಾಗಿದೆ. ಹೀಗಾಗಿ ಕೃಷ್ಣರಾಜಪುರಂ, ಯಲಹಂಕ, ಹಿಂದೂಪುರ, ಧರ್ಮಾವರಂ ಮತ್ತು ಅನಂತಪುರ ನಿಲುಗಡೆ ರದ್ದುಪಡಿಸಲಾಗಿದೆ.
ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್-ಹುಬ್ಬಳ್ಳಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22698) ಮಧ್ಯಾಹ್ನ 3 ಗಂಟೆಗೆ ಹೊರಡಬೇಕಿದ್ದ ಬಂಗಾರಪೇಟೆ, ಕೋಲಾರ, ಚಿಕ್ಕಬಳ್ಳಾಪುರ, ಯಲಹಂಕ, ಯಶವಂತಪುರ ಮತ್ತು ತುಮಕೂರು ಮಾರ್ಗಕ್ಕೆ ಬದಲಾಯಿಸಲಾಗಿದೆ. ವೈಟ್‌ಫೀಲ್ಡ್, ಕೃಷ್ಣರಾಜಪುರಂ ಮತ್ತು ಎಸ್‌ಎಂವಿಟಿ ಬೆಂಗಳೂರು ನಿಲುಗಡೆ ರದ್ದುಗೊಳಿಸಲಾಗಿದೆ.
ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್-ಮೈಸೂರು ವಂದೇ ಭಾರತ ಎಕ್ಸ್‌ಪ್ರೆಸ್ ರೈಲು (20664) ಅದೇ ದಿನ ಸಂಜೆ 5ಗಂಟೆಗೆ ಹೊರಡಬೇಕಿದ್ದು, ಅದರ ಮಾರ್ಗ ಬದಲಾಯಿಸಲಿದೆ. ಈ ರೈಲು ಕಾಟ್ಪಾಡಿ, ಬಂಗಾರಪೇಟೆ, ಕೋಲಾರ, ಚಿಕ್ಕಬಳ್ಳಾಪುರ, ಯಲಹಂಕ ಮತ್ತು ಕೆಎಸ್‌ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದ್ದು, ಕೃಷ್ಣರಾಜಪುರಂ ನಿಲುಗಡೆ ರದ್ದುಗೊಳಿಸಲಾಗಿದೆ.
ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ಲಾಲ್‌ಬಾಗ್ ಎಕ್ಸ್‌ಪ್ರೆಸ್ ರೈಲು (12607), ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್ ರೈಲು (12027) ಕೋಲಾರ ಮತ್ತು ಯಲಹಂಕ ಮಾರ್ಗದಲ್ಲಿ ಸಂಚರಿಸಲಿವೆ. ಈ ಎರಡೂ ರೈಲುಗಳಿಗೆ ಕೃಷ್ಣರಾಜಪುರಂ ನಿಲುಗಡೆ ರದ್ದಾಗಿದೆ.
ಎಸ್‌ಎಂವಿಟಿ ಬೆಂಗಳೂರು-ಮಾಲ್ಡಾ ಸ್ಪೆಷಲ್ ರೈಲು (06565) ಅಂದು 11:40ಕ್ಕೆ ಹೊರಟು ಯಲಹಂಕ, ಧರ್ಮಾವರಂ, ಧೋನೆ, ಗುಂಟೂರು ಮತ್ತು ವಿಜಯವಾಡ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರಪೇಟೆ, ಕಾಟ್ಪಾಡಿ, ರೇಣಿಗುಂಟಾ, ಗೂಡೂರು ಮತ್ತು ಒಂಗೋಲೆ ನಿಲುಗಡೆಗಳನ್ನು ಬಿಟ್ಟು ಸಾಗಲಿದೆ.
ಜೂನ್ 8ರಂದು ವಿವಿಧ ರೈಲುಗಳ ಸಂಚಾರ ಬದಲಾವಣೆ
ಕೆಎಸ್‌ಆರ್ ಬೆಂಗಳೂರಿನಿಂದ ಹೊರಡಬೇಕಿದ್ದ ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಜಂಕ್ಷನ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (26651) ಬೈಯಪ್ಪನಹಳ್ಳಿ, ಬೈಲೂರು ರೋಡ್, ಹೊಸೂರು, ಧರ್ಮಪುರಿ ಮತ್ತು ಸೇಲಂ ಮೂಲಕ ಸಾಗಲಿದೆ. ಈ ರೈಲು ಕೃಷ್ಣರಾಜಪುರಂ ನಿಲುಗಡೆ ರದ್ದುಗೊಳಿಸಿದೆ.
ಪುದುಚೇರಿಯಿಂದ ಹೊರಡುವ ಪುದುಚೇರಿ-ದಾದರ್ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು (11006) ಬಂಗಾರಪೇಟೆ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಯಲಹಂಕ ಮೂಲಕ ಸಂಚರಿಸಲಿದೆ. ಈ ರೈಲು ವೈಟ್‌ಫೀಲ್ಡ್, ಕೃಷ್ಣರಾಜಪುರಂ ಮತ್ತು ಎಸ್‌ಎಂವಿಟಿ ಬೆಂಗಳೂರು ನಿಲುಗಡೆ ನೀಡುವುದಿಲ್ಲ.
ಜೂನ್ 7 ರಂದು ರಾತ್ರಿ 9:15ಕ್ಕೆ ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್‌ನಿಂದ ಹೊರಡಬೇಕಿದ್ದ ಡಾ. ಎಂ.ಜಿ.ಆರ್ ಚೆನ್ನೈ ಸೆಂಟ್ರಲ್-ಅಶೋಕಪುರಂ ಕಾವೇರಿ ಎಕ್ಸ್‌ಪ್ರೆಸ್ ರೈಲು (16021) ಮಾರ್ಗ ಬದಲಾಯಿಸಲಿದೆ. ವೈಟ್‌ಫೀಲ್ಡ್ ಮತ್ತು ಕೃಷ್ಣರಾಜಪುರಂನಲ್ಲಿ ನಿಲ್ಲುವುದಿಲ್ಲ. ಇದಲ್ಲದೆ, ಈ ರೈಲನ್ನು ಎರಡು ಗಂಟೆಗಳ ಕಾಲ ಮರುಹೊಂದಾಣಿಕೆಗೊಳಿಸಿ ರಾತ್ರಿ 11:15ಕ್ಕೆ ಸಂಚಾರ ಆರಂಭಿಸಲಿದೆ.
ಜೂನ್ 7 ರಂದು ಸಂಜೆ 4:50ಕ್ಕೆ ಎರ್ನಾಕುಲಂ ಜಂಕ್ಷನ್‌ನಿಂದ ಸಂಚಾರ ಆರಂಭಿಸಬೇಕಿದ್ದ ಎರ್ನಾಕುಲಂ ಜಂಕ್ಷನ್-ಎಸ್‌ಎಂವಿಟಿ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (12683) ಬಂಗಾರಪೇಟೆ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಯಲಹಂಕ ಮೂಲಕ ಸಂಚರಿಸಲಿದೆ. ಈ ರೈಲು ಕೃಷ್ಣರಾಜಪುರಂ ನಿಲುಗಡೆ ನೀಡುವುದಿಲ್ಲ. ಈ ರೈಲಿನ ಸಂಚಾರ ಒಂದು ಗಂಟೆ ವಿಳಂಬವಾಗಲಿದೆ ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 7 ರಂದು ಬೆಳಗ್ಗೆ 10:10ಕ್ಕೆ ಕನ್ಯಾಕುಮಾರಿಯಿಂದ ಹೊರಡುವ ಕನ್ಯಾಕುಮಾರಿ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (16525) ಪ್ರಯಾಣದ ಅವಧಿಯಲ್ಲಿ ಸುಮಾರು ಒಂದು ಗಂಟೆ ಹತ್ತು ನಿಮಿಷ ವಿಳಂಬವಾಗಲಿದೆ. ಬೆಂಗಳೂರಿಗೆ ಬರುವ, ಇಲ್ಲಿಂದ ಹೊರಡುವ ರೈಲು ಪ್ರಯಾಣಿಕರು ಯಾವುದೇ ಅನಿರೀಕ್ಷಿತ ತೊಂದರೆ, ವೇಳಾಪಟ್ಟಿ ಬದಲಾವಣೆ ಗಮನಿಸಿ ಪ್ರಯಾಣ ಸಂಯೋಜಿಸುವಂತೆ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.















Click it and Unblock the Notifications