ಜ. 11ರಿಂದ ಹುಬ್ಬಳ್ಳಿ-ವಿಜಯಪುರ ಇಂಟರ್ ಸಿಟಿ ರೈಲು ಆರಂಭ

ವಿಜಯಪುರ, ಜನವರಿ 10; ವಿಜಯಪುರ-ಹುಬ್ಬಳ್ಳಿ ನಡುವೆ ಇಂಟರ್ ಸಿಟಿ ರೈಲು ಸಂಚಾರ ಜನವರಿ 11ರಿಂದ ಆರಂಭವಾಗಲಿದೆ. ಆಲಮಟ್ಟಿ ಭಾಗದಿಂದ ಹುಬ್ಭಳ್ಳಿಗೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಈ ರೈಲು ಸಹಕಾರಿಯಾಗಲಿದೆ.

ರೈಲು ಸಂಖ್ಯೆ 07329/07330 ವಿಜಯಪುರ- ಹುಬ್ಬಳ್ಳಿ ನಡುವೆ ಸಂಚಾರ ನಡೆಸಲಿದೆ. ಜನವರಿ 11ರಂದು ಹುಬ್ಬಳ್ಳಿಯಿಂದ ರೈಲು ಹೊರಡಲಿದ್ದು, ಜನವರಿ 12ರಿಂದ ಎರಡೂ ನಗರಗಳಿಂದ ಈ ರೈಲು ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಈ ರೈಲು ಐದು ಎರಡನೇ ದರ್ಜೆ ಸ್ಲೀಪರ್ ಬೋಗಿ, ಆರು ಸಾಮಾನ್ಯ ಬೋಗಿ, ಎರಡು ಲಗೇಜ್ ಸೇರಿ 13 ಬೋಗಿಗಳನ್ನು ಒಳಗೊಂಡಿದೆ. ಹುಬ್ಬಳ್ಳಿ ರೈಲ್ವೆ ಪ್ರಯಾಣಿಕರ ವೇದಿಕೆ ಸಹ ಈ ರೈಲು ಸಂಚಾರ ಆರಂಭಕ್ಕೆ ಹರ್ಷ ವ್ಯಕ್ತಪಡಿಸಿದೆ.

Vijayapura Hubballi Intercity Train From January 11 Schedule

ರೈಲು ವೇಳಾಪಟ್ಟಿ; ವಿಜಯಪುರದಿಂದ ಬೆಳಗ್ಗೆ 5.45ಕ್ಕೆ ಹೊರಡುವ ರೈಲು ಹುಬ್ಬಳ್ಳಿಗೆ ಬೆಳಗ್ಗೆ 10ಕ್ಕೆ ತಲುಪಲಿದೆ. ಸಂಜೆ 4.45ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು ವಿಜಯಪುರಕ್ಕೆ ರಾತ್ರಿ 10.10ಕ್ಕೆ ತಲುಪಲಿದೆ.

ವಿಜಯಪುರದಿಂದ ಹೊರಡುವ ರೈಲು ಇಬ್ರಾಹಿಂಪುರ ಗೇಟ್ (5.53), ಬಸವನಬಾಗೇವಾಡಿ ರೋಡ್ (6.25), ಆಲಮಟ್ಟಿ (6.44), ಬಾಗಲಕೋಟೆ (7.23), ಗುಳೇದಗುಡ್ಡ ರೋಡ್ (7.36), ಬಾದಾಮಿ (7.50), ಹೊಳೆಆಲೂರ (8.09), ಮಲ್ಲಾಪುರ (8.27), ಗದಗ (9.20)ಕ್ಕೆ ಆಗಮಿಸಲಿದೆ.

ಹುಬ್ಬಳ್ಳಿಯಿಂದ ಹೊರಡು ರೈಲು ಗದಗ (5.55), ಮಲ್ಲಾಪುರ (6.30), ಹೊಳೆ ಆಲೂರ (6.47), ಬಾದಾಮಿ (7.09), ಗುಳೇದಗುಡ್ಡ ರೋಡ್ (7.22), ಬಾಗಲಕೋಟೆ (7.40), ಆಲಮಟ್ಟಿ (8.14), ಬಸವನಬಾಗೇವಾಡಿ ರೋಡ್ (9.20)ಕ್ಕೆ ತಲುಪಲಿದೆ.

ನಕಲಿ ಜಾಹೀರಾತು ಬಗ್ಗೆ ಎಚ್ಚರಿಕೆ; ರೈಲ್ವೆ ರಕ್ಷಣಾ ಪಡೆ ನೇಮಕಾತಿ ಕುರಿತು ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ನೈಋತ್ಯ ರೈಲ್ವೆ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ.

ಕೆಲವು ಸಾಮಾಜಿಕ ಜಾಲತಾಣಗಳು ಭಾರತೀಯ ರೈಲ್ವೆಯ ರೈಲ್ವೆ ರಕ್ಷಣಾ ಪಡೆಯು 2022ರ ಕಾನ್ಸ್‌ಟೇಬಲ್ ಹುದ್ದೆಯ ನೇಮಕಾತಿ ಪರೀಕ್ಷೆಗೆ ಅರ್ಜಿಗಳನ್ನು ಕರೆದಿದೆ ಎಂದು ನಕಲಿ ಜಾಹೀರಾತು ಪ್ರಕಟಿಸಿವೆ.

ರೈಲ್ವೆ ಸಚಿವಾಲಯ ಈ ಬಗೆಯ ನೇಮಕಾರಿ ಕುರಿತಾಗಿ ಯಾವುದೇ ರೀತಿಯ ಅಧಿಸೂಚನೆಯನ್ನು ಹೊರಡಿಸಿಲ್ಲ ಎಂದು ಈ ಮೂಲಕ ತಿಳಿಸಲಾಗುತ್ತದೆ.

ಸಾರ್ವಜನಿಕರು ಈ ಬಗೆಯ ಯಾವುದೇ ರೀತಿಯ ವಂಚನೆಯ ಜಾಹೀರಾತುಗಳಿಗೆ ಬಲಿಯಾಗದೇ ಉದ್ಯೋಗ ನೇಮಕಾತಿಯ ಪ್ರಕಟಣೆ ಅಥವ ಮಾಹಿತಿಗಾಗಿ ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ಜಾಲತಾಣದ ಮೂಲಕ ಪರಿಶೀಲಿಸಬೇಕೆಂದು ಕೋರಲಾಗಿದೆ.

Recommended Video

      Jammu and Kashmir: ಹಿಮಪಾತದ ನಡುವೆ ಗರ್ಭಿಣಿಯ ರಕ್ಷಣೆಗಾಗಿ ಭಾರತೀಯ ಸೇನೆ ಮಾಡಿದ ಕೆಲಸ ನೋಡಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+