ಪೈಲಟ್ ಆಗಿ ಅತ್ಯದ್ಭುತ ಸಾಧನೆ ಮಾಡಿದ ವಿಜಯಪುರ ಜಿಲ್ಲೆಯ 18 ವರ್ಷದ ಯುವತಿ; ಹಿನ್ನೆಲೆ ಏನು ಗೊತ್ತಾ?

ವಿಜಯಪುರ, ಡಿಸೆಂಬರ್, 04: ಕೆಲವರು ಎಷ್ಟೇ ಶ್ರೀಮಂತರಿದ್ದರೂ ಕೂಡ ಯಾವುದೇ ಸಾಧನೆಗೆ ಕೈಹಾಕದೇ ಸುಮ್ಮನೆ ಜಾಲಿ ಮಾಡ್ಕೊಂಡ್‌ ಜೀವನ ಕಳೆಯುತ್ತಾರೆ. ಇನ್ನೂ ಮತ್ತೊಂದು ವರ್ಗದವರಿಗೆ ಹಣ ಇಲ್ಲದಿದ್ದರೂ ಕೂಡ ತಮಗೆ ಎಷ್ಟೇ ಕಷ್ಟವಾದರೂ ತಾವು ಕಂಡ ಕನಸ್ಸನ್ನು ಈಡೇರಿಸಿಕೊಳ್ಳುವವರಿಗೆ ಬಿಡುವುದಿಲ್ಲ. ಹಾಗೆಯೇ 18 ವರ್ಷದ ಯುವತಿಯೊಬ್ಬಳು ಇತಿಹಾಸನ ಸೃಷ್ಟಿಸಿದ ಘಟನೆ ವಿಯಪುರ ಜಿಲ್ಲೆಯಲ್ಲಿ ನಡೆದಿದೆ.

ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಉದ್ಯಮಿ ಅಮೀನ್ ಹುಲ್ಲೂರ್ ಅವರ ಪುತ್ರಿ ಸಮೈರಾ ಹುಲ್ಲೂರು (18) ಅವರು ಕಮರ್ಶಿಯಲ್ ಪೈಲಟ್ ಲೈಸನ್ಸ್ ಪಡೆಯುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲೆ ಮಾತ್ರ ಅಲ್ಲದೆ, ರಾಜ್ಯದ ಘತನೆಯನ್ನು ಹೆಚ್ಚಿಸಿದ್ದಾರೆ.

Vijayapura District s 18-Year-Old Woman Great Achieves as Pilot Know details

ಸಮೈರಾ ಅವರ ವಾಯುಯಾನ ಪ್ರಯಾಣವು ವಿನೋದ್ ಯಾದವ್ ಏವಿಯೇಷನ್ ​​​​ಅಕಾಡೆಮಿಯಲ್ಲಿ 6 ತಿಂಗಳ ತರಬೇತಿಯೊಂದಿದೆ ಪ್ರಾರಂಭ ಆಯಿತು. ಅಕಾಡೆಮಿ ಸಂಸ್ಥಾಪಕರಾದ ವಿನೋದ್ ಯಾದವ್ ಮತ್ತು ಕ್ಯಾಪ್ಟನ್ ತಪೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಎಲ್ಲಾ ಸಿಪಿಎಲ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಉತ್ತೀರ್ಣರಾದರು.

ತಮ್ಮ ಸಾಧನೆ ಬಗ್ಗೆ ಮಾತನಾಡಿದ ಸಮೈರಾ ಅವರು, ತರಬೇತಿಯು ತುಂಬಾ ಕಠಿಣ ಆಗಿತ್ತು. ಆದರೆ, ಬೋಧಕರ ನಿರಂತರ ಬೆಂಬಲ ಮತ್ತು ಮಾರ್ಗದರ್ಶನದಿಂದ ಅದು ಸುಲಭ ಆಯಿತು. ನನ್ನ ಸಾಧನೆಯ ಎಲ್ಲಾ ಶ್ರೇಯಸ್ಸು ಕ್ಯಾಪ್ಟನ್ ತಪೇಶ್ ಕುಮಾರ್ ಮತ್ತು ವಿನೋದ್ ಯಾದವ್ ಅವರಿಗ ಸಲ್ಲುತ್ತದೆ ಎಂದು ಸಮೈರಾ ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಲಿಖಿತ ಪರೀಕ್ಷೆಗಳಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಬಳಿಕ ಸಮೈರಾ ಅವರು, ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಕಾರ್ವರ್ ಏವಿಯೇಷನ್ ​​ಅಕಾಡೆಮಿಯಲ್ಲಿ ವಿಮಾನ ತರಬೇತಿಗೆ ಹೋಗಿದ್ದರು. ಇಲ್ಲಿನ ತರಬೇತಿ ಅವರ ಕೌಶಲ್ಯವನ್ನು ಮತ್ತಷ್ಟು ಹಚ್ಚಳ ಮಾಡಿತ್ತು. ಕಾರ್ವರ್ ಏವಿಯೇಷನ್ ​​ಅಕಾಡೆಮಿ ನನ್ನ ತಾಂತ್ರಿಕ ಪರಿಣತಿಯನ್ನು ಬಲಪಡಿಸಿತು. ಜೊತೆಗೆ ವಾಯುಯಾನ ಕುರಿತು ಮತ್ತಷ್ಟು ತಿಳಿದುಕೊಂಡಿದ್ದೆ. ಕ್ಯಾಪ್ಟನ್ ತಪೇಶ್ ಅವರ ಕಥೆಯು ದೊಡ್ಡ ಕನಸು ಕಾಣಲು ನನಗೆ ಪ್ರೇರಣೆ ನೀಡಿತು. ಬಳಿಕ ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿದೆ ಎಂದರು.

ಯಾವುದೇ ವ್ಯಕ್ತಿಯ ಯಶಸ್ಸಿನ ಹಿಂದೆ ಕುಟುಂಬದ ಬೆಂಬಲ ಯಾವಾಗಲೂ ಪ್ರಮುಖವಾಗಿರುತ್ತದೆ. ಈ ಗುರಿಯನ್ನು ಸಾಧಿಸಲು ನನ್ನ ಪೋಷಕರು ಬೆನ್ನೆಲುಬಾಗಿ ನಿಂತು ಎಲ್ಲವನ್ನೂ ಮಾಡಿದ್ದಾರೆ. ದೃಢವಾದ ಇಚ್ಛೆ ಮತ್ತು ಕುಟುಂಬದ ಬೆಂಬಲ ಇದ್ದರೆ, ಯಾವುದೇ ಹುಡುಗಿ ತಮ್ಮ ಜೀವನದಲ್ಲಿ ದೊಡ್ಡ ಗುರಿಯನ್ನು ಸಾಧಿಸಬಹುದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+