ವಿಜಯಪುರ: ಭೀಕರ ಅಪಘಾತ, ಐದು ಮಂದಿ ಸಾವು
ವಿಜಯಪುರ, ಫೆಬ್ರವರಿ 08: ಆಟೋ (ಟಾಂ-ಟಾಂ) ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿಜಯಪುರ ತಾಲ್ಲೂಕಿನ ಬರಟಗಿ ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿ 12ರಲ್ಲಿ ಇಂದು ಸಂಜೆ ವೇಳೆಗೆ ಅಪಘಾತ ಸಂಭವಿಸಿದೆ. ಢಿಕ್ಕಿ ಆದ ರಭಸಕ್ಕೆ ಆಟೋ ಹೆದ್ದಾರಿಯಿಂದ ದೂರ ಹೋಗಿ ಬಿದ್ದಿದೆ.
ಢಿಕ್ಕಿಯಲ್ಲಿ ಆಟೋ ಚಾಲಕ ಸೇರಿ, ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೃತರೆಲ್ಲರೂ ಡೋಣೂರು ಗ್ರಾಮದವರು ಎನ್ನಲಾಗಿದೆ.

ಡೋಣೂರು ಗ್ರಾಮದಿಂದ ತಿಡಗುಂದಿ ಕಡೆಗೆ ಪ್ರಯಾಣ ಮಾಡಬೇಕಾದರೆ ಲಾರಿ ಜೊತೆ ಢಿಕ್ಕಿ ಆಗಿದೆ. ಲಾರಿಗೂ ಸ್ವಲ್ಪ ಹಾನಿ ಆಗಿದೆ. ಘಟನೆ ಬಗ್ಗೆ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications