ವೈದ್ಯರ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪತ್ರಕರ್ತರ ಬಂಧನ

ವಿಜಯಪುರ, ಮಾರ್ಚ್ 27: ನಗರದ ಖ್ಯಾತ ವೈದ್ಯರೊಬ್ಬರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯ ಜಿಲ್ಲಾ ವರದಿಗಾರರಾಗಿರುವ ಪ್ರಸನ್ನ ದೇಶಪಾಂಡೆ, ಕ್ಯಾಮೆರಾಮನ್ ಸಂಗಮೇಶ್ವರ ಮತ್ತು ಟ್ಯಾಬ್ಲಾಯ್ಡ್ ಪತ್ರಿಕೆಯೊಂದರ ವರದಿಗಾರನನ್ನು ಪೊಲೀಸರು ಬಂಧಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆರೋಪಿಗಳು ಖಾಸಗಿ ವೈದ್ಯರೊಬ್ಬರನ್ನು ಬ್ಲಾಕ್ ಮೇಲ್ ಮಾಡಿ ಅವರ ವಿರುದ್ಧ ವರದಿಯನ್ನು ಟಿವಿಯಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿ 50 ಲಕ್ಷ ಹಣ ಕೊಡುವಂತೆ ಬೆದರಿಕೆ ಹಾಕಿದ್ದರು.

Three journalists arrested by Vijayapura police for blackmailing doctor

ನಿಮ್ಮ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆ ಮಾಡಲಾಗುತ್ತಿದೆ, ಅದರ ಬಗ್ಗೆ ವರದಿ ಮಾಡುತ್ತೇವೆ, ವರದಿ ಮಾಡಬಾರದು ಎಂದಾದಲ್ಲಿ ಐವತ್ತು ಲಕ್ಷ ಹಣ ಕೊಡಿ ಎಂದು ಈ ವರದಿಗಾರರು ವೈದ್ಯರನ್ನು ಬೆದರಿಸಿದ್ದರು. ವೈದ್ಯರಿಂದ ಹಣ ಪಡೆಯುವಾಗ ಪೊಲೀಸರ ಬಲೆಗೆ ಬಿದ್ದಿದ್ದರು.

ಈ ಪತ್ರಕರ್ತರನ್ನು ನಿನ್ನೆ (ಮಂಗಳವಾರ) ರಾತ್ರಿಯೇ ಪೊಲೀಸರು ಬಂಧಿಸಿದ್ದಾರೆ. ಪ್ರಸನ್ನ ದೇಶಪಾಂಡೆ ಮತ್ತು ಸಂಗಮೇಶ ಎಂಬುವರನ್ನು ಸುವರ್ಣ ವಾಹಿನಿಯು ತನ್ನ ಸಂಸ್ಥೆಯಿಂದ ಕಿತ್ತೊಗೆದಿದೆ. ಈ ಬಗ್ಗೆ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+