ದೇವರಹಿಪ್ಪರಗಿ ಕೆರೆಯಲ್ಲಿ ಈಜಲು ಹೋಗಿ ಮೂವರು ನೀರು ಪಾಲು
ವಿಜಯಪುರ, ಡಿಸೆಂಬರ್ 20 : ಕೆರೆಗೆ ಈಜಲು ಹೋಗಿ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಬುಧವಾರ ನಡೆದಿದೆ.
ವಿಜಯಪುರ ಜಿಲ್ಲೆಯ ಸಿಂಗಿ ತಾಲೂಕಿನ ದೇವರಹಿಪ್ಪರಗಿ ಕೆರೆಯಲ್ಲಿ ಈ ಘಟನೆ ನಡೆದಿದ್ದು, ಜುಬೇರ ಮನಿಯಾರ್(15) ಸಲೀಂ ಇನಾಮದಾರ್(13) ಅರ್ಬಜ್ ಸಯ್ಯದ್ (14) ಸಾವನ್ನಪ್ಪಿದ ಬಾಲಕರು. ಸ್ಥಳಕ್ಕೆ ದೇವರಹಿಪ್ಪರಗಿ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ಭೇಟಿ ನೀಡಿದ್ದಾರೆ.

ನಡಹಳ್ಳಿ ಮೃತರ ಕುಟುಂಬಕ್ಕೆ ವಯಕ್ತಿಕವಾಗಿ ತಲಾ 25 ಸಾವಿರ ರೂ. ಪರಿಹಾರ ನೀಡಿದ್ದಾರೆ. ದೇವ ಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.












Click it and Unblock the Notifications