ವೀರಶೈವ-ಲಿಂಗಾಯತ ಎರಡೂ ಒಂದೇ : ಕಾಶಿ ಜಗದ್ಗುರು

ವಿಜಯಪುರ, ನವೆಂಬರ್ 28 : ಲಿಂಗಾಯತ ಎನ್ನುವ ಧರ್ಮವೇ ಇಲ್ಲ ಇರುವುದು ವೀರಶೈವ ಧರ್ಮ ಮಾತ್ರ ಎಂದು ಕಾಶಿ ಜಗದ್ಗುರು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ವಿಜಯಪುರದಲ್ಲಿ ಮಂಗಳವಾರ(ನ.28) ಮಾತನಾಡಿದರು.

ಲಿಂಗಾಯತ ಪ್ರತ್ಯೇಕ ವಾದಿಗಳು ಬಸವೇಶ್ವರ ಅವರ ಹೆಸರಿನಲ್ಲಿ ಲಿಂಗಾಯತ ಧರ್ಮವೆಂದು ಹೇಳುತ್ತಾರೆ ಇವರು ಹೇಳುವುದು ಮುಖ್ಯವಲ್ಲ, ಬಸವೇಶ್ವರರು ಹೇಳಿದ್ದು ಮುಖ್ಯ ಕರ್ನಾಟಕ ಸರ್ಕಾರ ಮುದ್ರಿಸಿದ ಬಸವೇಶ್ವರರ ವಚನ ಸಂಪುಟದಲ್ಲಿ ಲಿಂಗಾಯತ ಅನ್ನುವ ಪದವೇ ಅದರಲ್ಲಿ ಪ್ರಯೋಗವಾಗಿಲ್ಲ ಈ ಮೂಲಕ ಪ್ರತ್ಯೇಕ ಲಿಂಗಾಯತ ಹೋರಾಟದಲ್ಲಿದ್ದವರಿಗೆ ಜಗದ್ಗುರುಗಳು ಚಾಟಿ ಬೀಸಿದರು.

There is no existence of Lingayat religion: Kashi shree

ಚುನಾಚಣೆ ಬಂದಿದೆ, ನಿಮ್ಮ ಕೆಲಸಗಳನ್ನು ಜನರಿಗೆ ಹೇಳಿ ಮತ ಪಡೆಯಿರಿ ಅದುಬಿಟ್ಟು ಸುಮ್ಮನೆ ಧರ್ಮ ತಗೊಂಡು ಕೊರಳಿಗೆ ಹಾಕಿಕೊಂಡು ವಿವಾದ ಹುಟ್ಟಿಸಿ, ಸಮಾಜದಲ್ಲಿ ಗದ್ದಲ ಮಾಡಿ, ಒಡಕು ಹುಟ್ಟಿಸುವುದು ಯಾಕೆ ಬೇಕು ಚುನಾಚಣೆ ಮುಂದಿಟ್ಟುಕೊಂಡು ಹೀಗೆ ಮಾಡುವುದು ನೋಡಿದರೆ ಇದು ಚುನಾವಣೆ ಪ್ರೇರಿತವಾಗಿದೆ.

ವೀರಶೈವ-ಲಿಂಗಾಯತ ಎಂಬುದು ಎರಡು ಅಲ್ಲ ಎರಡೂ ಒಂದೇ ವ್ಯಕ್ತಿ ಎರಡಿದ್ದರೆ ಬೇರ್ಪಡಿಸಬಹುದು, ಒರ್ವ ವ್ಯಕ್ತಿ ಹೆಸರು ಎರಡು ಇರುವುದರಿಂದ ಅದು ಆಗುವುದಿಲ್ಲ ವೀರಶೈವ ಲಿಂಗಾಯತರ ಬಗ್ಗೆ ಕಾಳಜಿ ಇದ್ದರೆ ಧರ್ಮದ ವಿಷಯ ಬಿಟ್ಟು, ಎಲ್ಲಾ ಒಳಪಂಗಡಗಳಿಗೆ ವಿಶೇಷವಾದ ಪ್ರವರ್ಗವನ್ನು ರಚನೆ ಮಾಡಿಸಿ ಕೊಡಿ ಜನರಿಗೆ ಬೇಕಾಗಿದ್ದು ಸರ್ಕಾರದ ಸವಲತ್ತುಗಳು, ಸವಲತ್ತುಗಳು ಜಾತ್ಯಾಧಾರಿತವಾಗಿ ಸಿಗುತ್ತವೆ, ಧರ್ಮಾಧಾರಿತವಾಗಿ ಅಲ್ಲ ಈ ಮೂಲಕ ಅನುಕೂಲ ಮಾಡಿ ಕೊಟ್ಟರೆ ಅದು ವೀರಶೈವರಿಗೆ ಕಲ್ಯಾಣ ಮಾಡಿದಂತಾಗುತ್ತದೆ ಅದು ರಾಜ್ಯ ಸರ್ಕಾರದ ಕೈಯಲ್ಲೆ ಇದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+