ಮುಂದಿನ ದಿನಗಳಲ್ಲಿ ಸರಕಾರದಿಂದಲೇ ಸೇವಾ ಲಾಲ್ ಜಯಂತಿ: ಸಿದ್ದು ಘೋಷಣೆ
ಬಬಲೇಶ್ವರ (ವಿಜಯಪುರ), ಡಿಸೆಂಬರ್ 20: "ವಿಜಯಪುರ ಗುಡಿಸಲುಮುಕ್ತ ಜಿಲ್ಲೆಯಾಗಲಿದೆ. ಗ್ರಾಮೀಣ ವಸತಿ ಯೋಜನೆಗಳಡಿಯಲ್ಲಿ 59,095 ಮನೆಗಳನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ" ಎಂದು ಇಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿ, ಮಾತನಾಡಿದರು. ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ.

* ಜನರು ಆಶೀರ್ವಾದ ಮಾಡಿದರೆ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು ಅಂದುಕೊಂಡಿದ್ದೆ. ಈಗ ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೀನಿ
* ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನೀರಾವರಿ ಕ್ಷೇತ್ರಕ್ಕೆ ಐವತ್ತು ಸಾವಿರ ಕೋಟಿ ರುಪಾಯಿ ನೀಡಿ, ಹದಿನೈದು ಲಕ್ಷ ಎಕರೆ ಭೂಮಿಗೆ ನೀರು ದೊರೆಯುವಂತೆ ಮಾಡಿದ್ದಾರೆ
* ಮುಂದಿನ ದಿನಗಳಲ್ಲಿ ಸರಕಾರದಿಂದಲೇ ಸೇವಾಲಾಲ್ ಜಯಂತಿ ಆಚರಣೆ
* ಇಂಡಿ ಏತ ನೀರಾವರಿ ಯೋಜನೆ ಅಡಿ 4.940 ಟಿಎಂಸಿ ಅಡಿ ನೀರು ಬಳಸಿ, 51,004 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ
* ವಿಜಯಪುರ ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡದ ರೈತರಿಗಾಗಿ ಕೊಳವೆಬಾವಿ ಕೊರೆಸಲಾಗಿದೆ. 30.45 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಇದರಿಂದ 9,384 ರೈತರಿಗೆ ಅನುಕೂಲವಾಗಿದೆ.












Click it and Unblock the Notifications