ಶಿವಾಜಿ ವಿರುದ್ಧ ಮಾತನಾಡಿದ ನಾರಾಯಣಗೌಡ ವಿರುದ್ಧ ಪ್ರತಿಭಟನೆ

Posted By: ವಿಜಯಪುರ ಪ್ರತಿನಿಧಿ
Subscribe to Oneindia Kannada

ವಿಜಯಪುರ, ಜನವರಿ 04: ವಿಜಯಪುರದಲ್ಲಿ ಮರಾಠಾ ಸಮಾಜದ ಸದಸ್ಯರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅವರ ವಿರುದ್ಧ ಪ್ರತಿಭಟನೆ ಮಾಡಿದರು.

ನಾರಾಯಣಗೌಡರು ಇತ್ತೀಚೆಗೆ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮರಾಠಾ ಛತ್ರಪತಿ ಶಿವಾಜಿ ಅವರನ್ನು ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದುದರ ವಿರುದ್ಧ ಪ್ರತಿಭಟನೆ ಮಾಡಿದ ಮಾರಾಠಾ ಸಮಾಜದ ಸದಸ್ಯರು ನಾರಾಯಣಗೌಡರ ಪ್ರತಿಕೃತಿ ಧಹಿಸಿ ಆಕ್ರೋಶ ವ್ಯಕ್ತಪಡಿಸಿದರು.

Protest against Kannada activist Narayanagowda.

ಎಂಇಎಸ್, ಶಿವಸೇನೆ ಸಂಘಟನೆಗಳ ಕುರಿತು ನಾರಾಯಣಗೌಡ ಅವರು ಏನಾದರೂ ಮಾತನಾಡಲಿ ಆದರೆ, ಮರಾಠಿಗರು, ಛತ್ರಪತಿ ಶಿವಾಜಿ ಕುರಿತು ಅವಹೇಳನಕಾರಿಯಾಗಿದ್ದು ಮಾತನಾಡಿರುವುದು ಅಕ್ಷಮ್ಯ ಎಂದು ಮರಾಠಾ ಮುಖಂಡರ ಹೇಳಿದರು.

ಮರಾಠಾ ಸಮಾಜದ ಮುಖಂಡರಾದ ರಾಹುಲ ಜಾಧವ, ಜ್ಯೋತಿರಾಮ ಪವಾರ ಪ್ರತಿಭಟನೆಯ ನೇತೃತ್ವವಹಿಸಿದ್ದರು. ನಾರಾಯಣಗೌಡ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಛತ್ರಪತಿ ಶಿವಾಜಿ ಪರ ಜೈಕಾರಗಳನ್ನು ಹಾಕಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Maratha Samaja members did protest in Vijayapura against Kannada activist Krnataka Rakshana Vedike state president Narayanagowda for talking against King Shivaji

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ