ಪಾಕ್ ಧ್ವಜ ಹಾರಿಸಿದ ಪ್ರಕರಣ: ವಿಜಯಪುರ ಕೋರ್ಟ್ ಗೆ ಹಾಜರಾದ ವಾಗ್ಮೋರೆ

Recommended Video

      ಪಾಕ್ ಧ್ವಜ ಹಾರಿಸಿದವರು ಕೋರ್ಟ್ ಗೆ ಹಾಜರ್ | Oneindia Kannada

      ವಿಜಯಪುರ, ಜುಲೈ 09: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಂಧಿತ ಆರೋಪಿ ಪರಶುರಾಮ ವಾಗ್ಮೋರೆಯನ್ನು ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಜಯಪುರ ಕೋರ್ಟ್ ಗೆ ಹಾಜರುಪಡಿಸಲಾಗಿದೆ.

      ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು, ವಾಗ್ಮೋರೆಯನ್ನು ನಿನ್ನೆ ತಡರಾತ್ರಿ ಬೆಂಗಳೂರಿನಿಂದ ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಕರೆ ತಂದಿದ್ದರು.

      ಪರಶುರಾಮ ವಾಗ್ಮೊರೆ ಮೇಲೆ ಜನವರಿ 1, 2012 ರಂದು ಸಿಂಧಗಿ ತಹಶೀಲ್ದಾರ್ ಕಚೇರಿ ಎದುರು ಪಾಕಿಸ್ತಾನ ಧ್ವಜ ಹಾರಿಸಿದ ಆರೋಪವಿತ್ತು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಗೀತಾ ಕೆ ಬಿ ಎದುರು ಆರೋಪಿ ವಾಗ್ಮೊರೆ ಹಾಜರಾಗಿದ್ದ.

      Police produced to Wagmore in Vijayapura court.

      ಕೋರ್ಟ್ ಆವರಣದಲ್ಲಿ ವಾಗ್ಮೊರೆ ತಂದೆ ಅಶೋಕ, ತಾಯಿ ಕಮಲಾಬಾಯಿ ಸೇರಿದಂತೆ ಕುಟುಂಬದ ಸದಸ್ಯರು ಬೀಡುಬಿಟ್ಟಿದ್ದರು

      ಪರಶುರಾಮ ವಾಗ್ಮೊರೆ ಸೇರಿದಂತೆ ಅನೀಲ್ ಸೊಲನಕರ್, ರಾಕೇಶ ಮಠ, ಮಲ್ಲನಗೌಡ ಪಾಟೀಲ್, ಓರ್ವ ಬಾಲ ಅರೋಪಿ, ರೋಹಿತ ನಾವಿ, ಸುನೀಲ್ ಅಗಸರ ಹಾಗೂ ಅರುಣ ವಾಗ್ಮೊರೆ ಕೋರ್ಟ್ ನಲ್ಲಿ ಹಾಜರಾಗಿದ್ದರು.

      ಇವರೆಲ್ಲರ ಮೇಲೆ ಐಪಿಸಿ ಸೆಕ್ಷನ್ 124, 153, 120 ಬಿ ಅಡಿಯಲ್ಲಿ ಕೇಸ್ ದಾಖಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+