Peripheral Road: ಕರ್ನಾಟಕಕ್ಕೆ ಹೊಸ ಪೆರಿಫೆರಲ್ ರಿಂಗ್ ರೋಡ್‌: ಈ ಭಾಗದಲ್ಲಿ ಭೂಮಿಗೆ ಬಂಪರ್ ಬೆಲೆ!

ಕರ್ನಾಟಕದಲ್ಲಿ ಮತ್ತೊಂದು ಪೆರಿಫೆರಲ್ ರಿಂಗ್ ರೋಡ್‌ ನಿರ್ಮಾಣವಾಗುತ್ತಿದ್ದು. ಇದರಿಂದ ಕರ್ನಾಟಕದ ಈ ಭಾಗದಲ್ಲಿ ಭೂಮಿಗೆ ಬಂಪರ್ ಬೆಲೆ ಬರುವ ನಿರೀಕ್ಷೆ ಎದುರಾಗಿದೆ. ಕರ್ನಾಟಕದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಹೆದ್ದಾರಿ ಹಾಗೂ ಪೆರಿಫೆರಲ್ ರಿಂಗ್ ರೋಡ್‌ ಯೋಜನೆಗಳಿಗೆ ಸಂಬಂಧಿಸಿಂತೆ ಕೇಂದ್ರ ಬಿಜೆಪಿ ಸರ್ಕಾರವು ಅನುಮೋದನೆ ನೀಡುತ್ತಿದೆ. ಇದೀಗ ಕರ್ನಾಟಕದಲ್ಲಿ ಮತ್ತೊಂದು ಪೆರಿಫೆರಲ್ ರಿಂಗ್ ರೋಡ್‌ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ. ಇದರಿಂದ ಭೂಮಿಗೆ ಬಂಗಾರದ ಬೆಲೆ ಬರಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಯಾವ ಭಾಗದಲ್ಲಿ ಪೆರಿಫೆರಲ್ ರಿಂಗ್ ರೋಡ್‌ ನಿರ್ಮಾಣವಾಗಲಿದೆ. ಇದರಿಂದ ಯಾವೆಲ್ಲಾ ಅನುಕೂಲವಾಗಲಿದೆ ಎನ್ನುವ ಪೂರ್ಣ ವಿವರ ಇಲ್ಲಿದೆ.

ಯಾವುದೇ ಹೊಸ ಯೋಜನೆ ಜಾರಿಯಾದರೂ ಆ ಯೋಜನೆಗಳಿಂದ ಭೂಮಿ ಇರುವವರಿಗೆ ಹಾಗೂ ರಿಯಲ್‌ ಎಸ್ಟೇಟ್‌ದಾರರಿಗೆ ಬಂಪರ್ ಆಗುತ್ತದೆ. ಅದೇ ರೀತಿ ಇದೀಗ ಕರ್ನಾಟಕದಲ್ಲಿ ಮತ್ತೊಂದು ಪೆರಿಫೆರಲ್ ರಿಂಗ್ ರೋಡ್‌ ನಿರ್ಮಾಣ ಮಾಡುವುದಕ್ಕೆ ಕೇಂದ್ರ ಸರ್ಕಾರವು ಒಪ್ಪಿಗೆ ಸೂಚನೆ ನೀಡಿದ್ದು ಇದರಿಂದ ಭೂಮಿಗೆ ಬಂಗಾರದ ಬೆಲೆ ಬರಲಿದೆ ಅಂತ ಹೇಳಲಾಗುತ್ತಿದೆ.

New Peripheral Ring Road for Karnataka Land Price Boom

ಕೇಂದ್ರ ಸರ್ಕಾರವು ವಿಜಯಪುರ ಭಾಗದಲ್ಲಿ ಪೆರಿಫೆರಲ್ ರಿಂಗ್ ರೋಡ್‌ ನಿರ್ಮಾಣ ಮಾಡುವುದಕ್ಕೆ ಅನುಮತಿ ನೀಡಿದೆ. ಈ ಭಾಗದ ಮೂಲಕ ನೆರೆಯ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇವೆ. ಈ ಭಾಗದ ರಸ್ತೆಗಳಲ್ಲಿ ಭಾರೀ ವಾಹನಗಳು ಸಂಚರಿಸುತ್ತಿರುವುದರಿಂದ ಟ್ರಾಫಿಕ್‌ ಜಾಮ್‌ ಸಮಸ್ಯೆ ಹೆಚ್ಚಳವಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪೆರಿಫೆರಲ್ ರಿಂಗ್ ರೋಡ್‌ ನಿರ್ಮಾಣ ಮಾಡುವ ಅವಶ್ಯಕತೆ ಇದೆ ಎಂದು ಸಚಿವ ಎಂ.ಬಿ ಪಾಟೀಲ್‌ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಕರ್ನಾಟಕದ ಈ ಮನವಿಗೆ ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ ಎಂದು ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಪೆರಿಫೆರಲ್ ರಿಂಗ್ ರೋಡ್‌ ನಿರ್ಮಾಣದಿಂದ ವಿಜಯಪುರ, ಬೆಳಗಾವಿ ಹಾಗೂ ಕಲಬುರಗಿ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಅಲ್ಲದೇ ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ, ಸೊಲ್ಲಾಪುರಕ್ಕೂ ಮತ್ತು ಗೋವಾದ ಪ್ರಮುಖ ನಗರಗಳಿಗೂ ಸಂಪರ್ಕ ಸಿಗಲಿದ್ದು. ವಿಜಯಪುರದಲ್ಲಿ ಟ್ರಾಫಿಕ್‌ ಜಾಮ್‌ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ. ಅಲ್ಲದೇ ಪೆರಿಫೆರಲ್ ರಿಂಗ್ ರೋಡ್‌ ನಿರ್ಮಾಣವಾಗುವ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಬರಲಿದೆ ಎಂದು ಹೇಳಲಾಗಿದೆ.

ಪತ್ರ ಬರೆದು ಮನವಿ: ಇನ್ನು ಈ ಭಾಗದಲ್ಲಿ ಪೆರಿಫೆರಲ್ ನಿರ್ಮಾಣ ಮಾಡುವ ಸಂಬಂಧ ಸಚಿವ ಎಂ.ಬಿ ಪಾಟೀಲ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯಲಾಗಿತ್ತು. ಈ ಪತ್ರದಲ್ಲಿ ಸಂಚಾರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಹಾಗೂ ನಗರಾಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಭಾಗದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಲಾಗಿತ್ತು.

ದಕ್ಷಿಣ ಕರ್ನಾಟಕಕ್ಕೂ ಬಂಪರ್: ಉತ್ತರ ಕರ್ನಾಟಕ ಭಾಗಕ್ಕೆ ಬಂಪರ್‌ ಸಿಗುವುದರೊಂದಿಗೆ ದಕ್ಷಿಣ ಕರ್ನಾಟಕ ಭಾಗಕ್ಕೂ ಬಂಪರ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ವಿಜಯಪುರ ಭಾಗದಲ್ಲಿ ಪೆರಿಫೆರಲ್ ರಿಂಗ್ ರೋಡ್‌ನೊಂದಿಗೆ ಮಂಡ್ಯ ಹಾಗೂ ಹಾಸನ ಸೇರಿದಂತೆ ವಿವಿಧ ಪ್ರಮುಖ ನಗರಗಳ ಭಾಗದಲ್ಲಿ ರಿಂಗ್ ರಸ್ತೆ ನಿರ್ಮಾಣ ಮಾಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಈ ಹೆದ್ದಾರಿಗಳಿಗೆ ಸಂಪರ್ಕ: ಪೆರಿಫೆರಲ್ ರಿಂಗ್ ರೋಡ್‌ನಿಂದಾಗಿ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್-50, ಎನ್‌ಎಚ್-548 ಬಿ, ಎನ್ ಎಚ್-561ಎ, ಎನ್‌ಎಚ್-218 ಹಾಗೂ ರಾಜ್ಯ ಹೆದ್ದಾರಿ ಎಚ್‌ಚ್-34 ರಸ್ತೆಗಳಿಗೆ ಪರಸ್ಪರ ಸಂಪರ್ಕ ಸೃಷ್ಟಿಯಾಗಲಿದೆ ಎಂದು ಹೇಳಲಾಗಿದೆ.

ಭೂಮಿ ಬೆಲೆ ಹೆಚ್ಚಳ ನಿರೀಕ್ಷೆ: ಇನ್ನು ಉತ್ತರ ಕರ್ನಾಟಕದ ಈ ಭಾಗದಲ್ಲಿ ಹೊಸ ಯೋಜನೆ ಜಾರಿಯಾಗುತ್ತಿದ್ದಂತೆಯೇ ಭೂಮಿ ಬೆಲೆ ಹೆಚ್ಚಳದ ಚರ್ಚೆ ಜೋರಾಗಿ ನಡೆಯುತ್ತಿದೆ. ಬೆಂಗಳೂರು ಹಾಗೂ ಬೆಂಗಳೂರು ಕೇಂದ್ರಿತವಾಗಿ ಮಾತ್ರ ಅಭಿವೃದ್ಧಿ ಆಗುತ್ತಿದೆ ಎನ್ನುವ ಆರೋಪಗಳ ನಡುವೆ ಈ ಅಭಿವೃದ್ಧಿ ವಿಚಾರವು ವಿಜಯಪುರ ಜನರಲ್ಲಿ ಸಂತಸವನ್ನು ಉಂಟು ಮಾಡಿದೆ.

ಭೂಮಿ ಮಾರಾಟ ಹಾಗೂ ಖರೀದಿ ಲೆಕ್ಕಾಚಾರ ಜೋರಾಗಿದ್ದು. ಹೊಸ ಪೆರಿಫೆರಲ್‌ ರಿಂಗ್‌ ರೋಡ್‌ ಮಾರ್ಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+