ವಿಜಯಪುರದಲ್ಲಿ ಲಂಚ ಕೇಳಿದ ಪೇದೆಗೆ ಧರ್ಮದೇಟು!

Posted By: Gururaj
Subscribe to Oneindia Kannada

ವಿಜಯಪುರ, ಅಕ್ಟೋಬರ್ 23 : 200 ರೂ. ಲಂಚ ಕೇಳಿದ ಪೊಲೀಸ್ ಪೇದೆಗೆ ಸಾರ್ವಜನಿಕರು ಥಳಿಸಿದ ಘಟನೆ ವಿಜಯಪುರದಲ್ಲಿ ನಡೆಸಿದೆ. ಲಂಚ ಕೊಡಲು ನಿರಾಕರಿಸಿದಾಗ ಪೇದೆ ದರ್ಪ ತೋರಿಸಿದ್ದು, ಇದರಿಂದ ಸಿಟ್ಟಿಗೆದ್ದ ಜನರು ಹಲ್ಲೆ ಮಾಡಿದ್ದಾರೆ.

ಸೋಮವಾರ ವಿಜಯಪುರದ ಇಟಗಿ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆಸಿದೆ. ಗಾಂಧಿ ಚೌಕ ಪೋಲಿಸ್ ಠಾಣೆಯ ಪೇದೆ ಬಸವರಾಜ ಪೂಜಾರಿಗೆ ಜನರು ಧರ್ಮದೇಟು ನೀಡಿದ್ದಾರೆ. ಬಾಗಲಕೋಟೆಯಿಂದ ವಿಜಯಪುರದ ಜಾಲಗೇರಿ ತಾಂಡಾಕ್ಕೆ ಬರುತ್ತಿದ್ದ ಟ್ರಾಕ್ಟರ್ ತಡೆದ ಪೇದೆ 200 ರೂ. ಲಂಚ ನೀಡುವಂತೆ ಒತ್ತಾಯಿಸಿದ್ದ.

ರಾಮನಗರದಲ್ಲಿ ಎಸಿಬಿ ದಾಳಿ, ಇಬ್ಬರು ಬಲೆಗೆ

Mob attack on police constable who demand for Bribe

ಲಂಚ ಕೊಡಲು ನಿರಾಕರಿಸಿದಾಗ ವಾಹನ ಸಂಚಾರಕ್ಕೆ ಅಡಿ ಪಡಿಸಿದ, ಟ್ರಾಕ್ಟರ್ ಸವಾರನ ಮೇಲೆ ದರ್ಪತೋರಿಸಿದ. ಟ್ರಾಕ್ಟರ್ ಅಡ್ಡಗಟ್ಟಿದಾಗ ಅದರಲ್ಲಿದ್ದ ಬಾಲಕಿ ಅಶ್ವಿನಿ ಪವಾರ (16) ಕಳೆಗೆ ಬಿದಿದ್ದು ಚಿಕ್ಕಪುಟ್ಟ ಗಾಯಗಳಾಗಿವೆ. ಇದರಿಂದ ರೊಚ್ಚಿಗೆದ್ದ ಜನರು ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ್ದಾರೆ.

ಲಂಚ ಕೇಳಿದ ತಿಲಕ್ ನಗರ ಠಾಣೆ ಇನ್ಸ್‌ಪೆಕ್ಟರ್ ಅಮಾನತು

Mob attack on police constable who demand for Bribe

ಜನರ ಹಲ್ಲೆಯಿಂದಾಗಿ ಪೇದೆ ಬಸವರಾಜಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಟ್ರಾಕ್ಟರ್‌ನಿಂದ ಬಿದ್ದು ಗಾಯವಾಗಿರುವ ಅಶ್ವಿನಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಗಾಂಧಿ ಚೌಕ ಪೋಲಿಸರು ಭೇಟಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vijayapura Gandi Chowka police constable was attacked by mob on October 23, 2017 when constable Basavaraj demand for bribe. ವಿಜಯಪುರದಲ್ಲಿ ಲಂಚ ಕೇಳಿದ ಪೇದೆಗೆ ಧರ್ಮದೇಟು!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ