ಸಿಎಂ ಆಗುವ ಆಸೆ ಇದೆ : ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್

Posted By:
Subscribe to Oneindia Kannada
   ಸಚಿವ ಎಂ ಬಿ ಪಾಟೀಲ್ ರಿಗೆ ಸಿ ಎಂ ಆಗಬೇಕೆಂಬ ಬಯಕೆ ಇದೆಯಂತೆ | Oneindia Kannada

   ವಿಜಯಪುರ, ಡಿಸೆಂಬರ್ 07: ಮುಖ್ಯಮಂತ್ರಿ ಆಗಬೇಕೆಂಬ ತಮ್ಮ ಮನದಾಸೆಯನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಹೊರಹಾಕಿದ್ದಾರೆ. ಹಾಗೆಂದು ಅವರು ಸಿದ್ದರಾಮಯ್ಯ ಅವರ ಕುರ್ಚಿ ಮೇಲೆ ಕಣ್ಣು ಹಾಕಿಲ್ಲ. ಇನ್ನು ಬಹಳ ಸಮಯದ ನಂತರ ಸಿ.ಎಂ ಆಗುತ್ತೇನೆ ಅಂದಿದ್ದಾರೆ.

   ವಿಜಯಪುರದಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಬಾರಿ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ. ನನಗೂ ಸಿ.ಎಂ ಆಗುವ ಆಸೆ ಇದೆ ಆದರೆ ಅದಕ್ಕಿನ್ನೂ ಸಾಕಷ್ಟು ಸಮಯ ಇದೆ ಎಂದರು. ನನಗೆ ಸಿ.ಎಂ ಆಗುವ ಆಸೆ ಇದೆ, ದುರಾಸೆ ಇಲ್ಲ ಎಂದರು.

   ಪ್ರಜ್ಞಾವಂತ ಮತದಾರ ತಲೆತಗ್ಗಿಸುವಂತಹ ಹೇಳಿಕೆ ನೀಡಿದ ಸಚಿವ ಪಾಟೀಲ್

   ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಸಿದ್ದರಾಮಯ್ಯ ಅವರ ಆಡಳಿತವನ್ನು ಹೊಗಳಿದ ಬಗ್ಗೆ ಮಾತನಾಡಿದ ಅವರು '4 ವರ್ಷದಲ್ಲಿ ಯಾವುದೆ ಕಪ್ಪು ಚುಕ್ಕೆ ಇಲ್ಲದೆ ನನ್ನಂತೆ ಸಿದ್ಧರಾಮಯ್ಯ ಕೆಲಸ ಮಾಡಿದ್ದಾರೆಂದು ದೇವರಗೌಡರೇ ಹೊಗಳಿದ್ದಾರೆ' ಆದರೆ ಕುಮಾರಸ್ವಾಮಿ ಅವರು ಇದನ್ನು ಸಹಿಸಲಾರದೆ 'ದೇವೇಗೌಡರು ಸಿದ್ದರಾಮಯ್ಯ ಅವರನ್ನು ಗೇಲಿ ಮಾಡಲು ಹಾಗೆ ಮಾತನಾಡಿದ್ದಾರೆ' ಎಂದಿದ್ದಾರೆ, ಒಂದು ವೇಳೆ ದೇವೇಗೌಡರು ಗೇಲಿ ಮಾಡಿದ್ದರೆ ಅದು ದೇವೇಗೌಡರಿಗೂ ಅನ್ವಯವಾಗುತ್ತದೆ ಎಂದರು.

   Minister M.B.Patil opens up about his desire to become CM

   ಪ್ರತಾಪ್ ಸಿಂಹ ವಿವಾದದ ಬಗ್ಗೆ ಮಾತನಾಡಿದ ಎಂ.ಬಿ.ಪಾಟೀಲ್ 'ಪ್ರತಾಪ್ ಸಿಂಹ್ ಅವರು ಇದು ಮೊದಲೇ ಬಾರಿ ಅಲ್ಲ ಹೀಗೆ ಮಾಡುತ್ತಿರುವುದು, ಅವರಿಗೆ ಮಾತಿನ ಮೇಲೆ ಹಿಡಿತ ಇಲ್ಲ, ಕಿತ್ತೂರಾಣಿ ಚೆನ್ನಮ್ಮ, ಒನಕೆ ಓಬವ್ವ ಅವರಂತಹಾ ಸ್ವತಂತ್ರ ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಿದ್ದರು, ಪ್ರತಾಪ್ ಸಿಂಹ್ ಬೇಕಂತಲೇ ಗಲಭೆ ಎಬ್ಬಿಸುತ್ತಿದ್ದಾರೆ, ಅವರ ಉದ್ದೇಶ ಸರಿಯಿಲ್ಲ' ಎಂದರು.

   ಮುಂದಿನ ದಿನಗಳಲ್ಲಿ ಪ್ರತಾಪ್ ಸಿಂಹ್ ನಡವಳಿಕೆಯಿಂದ ಬಿಜೆಪಿಗೆ ಹೊಡೆತ ಬೀಳುತ್ತೆ ಎಂದು ಅವರು ಎಚ್ಚರಿಸಿದರು.

   ಸಚಿವ ಎಂ.ಬಿ.ಪಾಟೀಲ್ ಪ್ರತಿಕೃತಿಗೆ ಚಪ್ಪಲಿ ಹಾರ

   ಗುಜರಾತ್ ಚುನಾವಣೆ ಬಗ್ಗೆ ಮಾತನಾಡಿದ ಅವರು ಗುಜರಾತ್ ಚುನಾವಣೆಯಲ್ಲಿ ಈ ಬಾರಿ ಜಯ ಕಾಂಗ್ರೆಸ್ ನದ್ದೇ ಎಂದು ಭವಿಷ್ಯ ನುಡಿದರು. ' ಮೋದಿ ರ್ಯಾಲಿನು ನೋಡಿದ್ದಿರಿ, ರಾಹುಲ್ ಗಾಂಧಿ ಮತ್ತು ನಮ್ಮ ಹಾರ್ದಿಕ್ ಪಟೇಲ್ ರ್ಯಾಲಿಯನ್ನೂ ನೋಡಿದ್ದಿರಿ, + 4% ಅಥವಾ - 4% ಆದರೆ ಒಂದು ಸರ್ಕಾರ ಬದಲಾಗತ್ತೆ, ಆದರೆ ಇದನ್ನು ಯಾವ ಮಾಧ್ಯಮವು ಇದನ್ನ ಹೇಳುತ್ತಿಲ್ಲ ಎಂದು ಗುಜರಾತ್ ರಾಜಕೀಯ ವಿಶ್ಲೇಷಿಸಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Minister M.B.Patil opens up about his desire to become CM. MB Patil said i want to became CM but not now, This time Siddaramaiah will become CM again.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ