ತಾಕತ್ತಿದ್ದರೆ ಇಲಾಖೆಯ ಭ್ರಷ್ಟಾಚಾರ ದಾಖಲೆ ಬಿಡುಗಡೆ ಮಾಡಲಿ

Posted By: ವಿಜಯಪುರ ಪ್ರತಿನಿಧಿಯಿಂದ
Subscribe to Oneindia Kannada

ವಿಜಯಪುರ, ನವೆಂಬರ್ 28 : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಾಕತ್ತಿದ್ದರೆ ನನ್ನ ಇಲಾಖೆಯ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಲಿ. ಇಲ್ಲದಿದ್ದರೆ ಯಡಿಯೂರಪ್ಪ ಕಾಲದ ಹಗರಣಗಳ ದಾಖಲೆಗಳನ್ನು ನಾನೇ ಬಿಡುಗಡೆ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಬಹಿರಂಗ ಸವಾಲು ಹಾಕಿದ್ದಾರೆ.

ಪ್ರಜ್ಞಾವಂತ ಮತದಾರ ತಲೆತಗ್ಗಿಸುವಂತಹ ಹೇಳಿಕೆ ನೀಡಿದ ಸಚಿವ ಪಾಟೀಲ್

ವಿಜಯಪುರದಲ್ಲಿ ಮಂಗಳವಾರ(ನ.28)ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದ 17 ಸಚಿವರ ವಿರುದ್ಧ ಆರೋಪಗಳಿವೆ, ಬಿಎಸ್ ವೈ ಅವರ ರಾಜೀನಾಮೆ ಕೇಳಲಿ, ಬಿಎಸ್ ವೈ ಅವರು ಸಿಎಂ ಆಗಿದ್ದಾಗ ಕಮಿಷನ್ ಕೆಲಸ ಮಾಡಿದ್ದಾರೆ, ಇವರು ಇದ್ದ ಹಾಗೆ ಎಲ್ಲರೂ ಇರುತ್ತಾರೆ ಎಂದು ಕೊಂಡಿದ್ದಾರೆ.

MB Patil challenge Yeddyurappa to release documents

ಪ್ರತಿಭಟನೆ ವೇಳೆ ನೀರಾವರಿ ಇಲಾಖೆಯ ಹಗರಣಗಳ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು ಸುಮ್ಮ-ಸುಮ್ಮನೇ ಹೆಸರು ಕೆಡಿಸಲು ಸುಳ್ಳು ದಾಖಲೆ ಬಿಡುಗಡೆ ಮಾಡಿದರೆ, ಅವರನ್ನು ಕೋರ್ಟ್ ಗೆ ಎಳೆಯುತ್ತೇನೆ ರಾಜಕೀಯದಲ್ಲಿ ಬೆಳೆಯುವವರನ್ನ ಯಡಿಯೂರಪ್ಪ ಅವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಚಿವ ಎಂ.ಬಿ.ಪಾಟೀಲ್ ಪ್ರತಿಕೃತಿಗೆ ಚಪ್ಪಲಿ ಹಾರ

ಯಡಿಯೂರಪ್ಪ ವಿನಯ್ ಕುಲಕರ್ಣಿ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಬಿಜೆಪಿ ನಾಯಕರಿಗೆ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯಗಳು ಸಿಕ್ಕಿಲ್ಲ ಯೋಗೀಶ್ ಗೌಡ ಒಬ್ಬ ರೌಡಿ ಶೀಟರ್ ಅವರ ವಿರುದ್ಧ 29 ಕೇಸ್ ಗಳಿವೆ ಆತನ ಸಹೋದರ ಗುರುನಾಥ ಗೌಡ ವಿರುದ್ಧ ಸಹ 9 ಪ್ರಕರಣಗಳಿವೆ ಇವರ ಕುಟುಂಬದ ಮೇಲೆ ರೇಡ್ ಮಾಡಿದಾಗ ಶಸ್ತ್ರಾಸ್ತ್ರಗಳು ಸಿಕ್ಕಿವೆ ಎಂದರು.

ಇಂತಹ ವ್ಯಕ್ತಿಗಳು ವಿವಿಧ ಕಾರಣಗಳಿಂದ ಹತ್ಯೆಯಾಗಿರಬೇಕು ಇದಕ್ಕೂ ವಿನಯ್ ಕುಲಕರ್ಣಿಗೂ ಸಂಬಂಧ ಕಲ್ಪಿಸಲಾಗುತ್ತಿದೆ ವಿನಯ್ ಕುಲಕರ್ಣಿ ಒರ್ವ ಯುವ ನಾಯಕ ಹೈನುಗಾರಿಕೆ ಮೂಲಕ ವಿನಯ್ ಕುಲಕರ್ಣಿ ನೂರಾರು ಜನರಿಗೆ ಆಸರೆಯಾಗಿದ್ದಾರೆ ಬಿಎಸ ವೈ ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಕುತಂತ್ರ ನಡೆಸುತ್ತಿದ್ದಾರೆ. ಪ್ರಹ್ಲಾದ ಜೋಶಿ ಟೀಮ್ ವಿನಯ್ ಕುಲಕರ್ಣಿ ವಿರುದ್ದ ಕೆಟ್ಟದಾಗಿ ಪತ್ರ ಚಳುವಳಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Irrigation Minister MB Patil challenges former chief minister Yeddyurappa to release documents if he has regarding alleged scandals in the Department.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ