ಭೀಮಾತೀರದ ಹಂತಕ ಧರ್ಮರಾಜ ಶೂಟೌಟ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್

ವಿಜಯಪುರ , ಜೂನ್.11. ಭೀಮಾತೀರದ ಹಂತಕ ಧರ್ಮರಾಜ ಚಡಚಣ ಶೂಟೌಟ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಕೊಂಕಣಗಾಂವದಲ್ಲಿ ಸೆಪ್ಟೆಂಬರ್ 30, 2017 ರಂದು ಧರ್ಮರಾಜ ಚಡಚಣ ಶೂಟೌಟ್ ಮಾಡಲಾಗಿತ್ತು.

ಚಡಚಣ ಪಿಎಸ್ ಐ ಗೋಪಾಲ ಹಳ್ಳೂರು ನೇತೃತ್ವದಲ್ಲಿದಲ್ಲಿ ಧರ್ಮರಾಜನನ್ನು ಶೂಟೌಟ್ ಮಾಡಲಾಗಿತ್ತು. ಆದರೆ, ಆ ಹತ್ಯೆ ನಡೆದ ದಿನದಲ್ಲಿ ಹಂತಕ ಧರ್ಮರಾಜನ ತಮ್ಮ ಗಂಗಾಧರ ಕೂಡ ಜೊತೆಗೆ ಇದ್ದ ಎನ್ನಲಾಗುತ್ತಿದೆ.

ಆದರೆ, ಅಂದಿನಿಂದ ಇಲ್ಲಿಯವರೆಗೂ ಗಂಗಾಧರ ಚಡಚಣ ಕುರಿತು ಯಾವುದೇ ಮಾಹಿತಿ ಇಲ್ಲದೆ ಇರುವುದರಿಂದ ಗಂಗಾಧರ ಚಡಚಣ ತಾಯಿ ವಿಮಲಾಬಾಯಿ ಕೋರ್ಟ್ ಮೊರೆ ಹೋಗಿದ್ದಾರೆ.

Major Twist has been found in the Dharamaraja Chadachana brother case

ಗಂಗಾಧರನನ್ನು ಕೊಲೆ ಮಾಡಲಾಗಿದೆ ಎಂದು ಆತನ ತಾಯಿ ವಿಮಲಾಬಾಯಿಂದ ಚಡಚಣ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭೀಮಾತೀರದ ಹಂತಕ ಮಹಾದೇವ ಸಾಹುಕಾರ್, ಹನುಮಂತ ಪೂಜಾರಿ, ಸಿದ್ದಗೊಂಡ ತಿಕ್ಕೊಂಡಿ ಹಾಗೂ ಸಿದ್ದಗೊಂಡ ಮಡವೆ ಈ ಹತ್ಯೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಅಲ್ಲದೇ, ಒಂದು ವರ್ಷದಿಂದ ಗಂಗಾಧರ ಕುಟುಂಬದ ಸಂಪರ್ಕಕ್ಕೆ ಸಿಕ್ಕಿಲ್ಲ. ಅಲ್ಲದೆ, ನನ್ನ ಮಗನನ್ನು ಹುಡುಕಿಕೊಡಿ ಎಂದು ಚಡಚಣ ಕುಟುಂಬ ಐಜಿ ಪಿ ಅಲೋಕ ಕುಮಾರ್ ಹಾಗೂ ವಿಜಯಪುರ ಎಸ್ಪಿಗೆ ಮನವಿ ಮಾಡಿದೆ.

ಇಷ್ಟೆಲ್ಲ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ಗಂಗಾಧರನ ತಾಯಿ ವಿಮಲಾಬಾಯಿ ಕಲ್ಬುರ್ಗಿ ಕೋರ್ಟ್ ನಲ್ಲಿ ಹೆಬಿಯಸ್ ಕಾರ್ಪಸ್ ಕೇಸ್ ನ್ನು ದಾಖಲಿಸಿದ್ದಾರೆ.

ಇದೀಗ ಹೆಬಿಯಸ್ ಕಾರ್ಪಸ್ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ನಿನ್ನೆ ಸಾಹುಕಾರನ ಭಂಟ ಹನುಮಂತ ಪೂಜಾರಿ ಸೇರಿ ಇಬ್ಬರನ್ನು ಎಸ್ಪಿ ಪ್ರಕಾಶ ನಿಕ್ಕಂ ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+