ವಿಜಯಪುರ: ಬಸ್ ನಲ್ಲಿ ಆಕಸ್ಮಿಕ ಬೆಂಕಿ, ತಪ್ಪಿದ ಭಾರೀ ಅನಾಹುತ
ವಿಜಯಪುರ, ಡಿಸೆಂಬರ್ 22: ವಿಜಯಪುರ ನಗರ ಸಾರಿಗೆ ಬಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಶುಕ್ರವಾರ ಸಂಸ್ಕ್ರತ ಕಾಲೋನಿದಿಂದ ರೇಲ್ವೇ ಸ್ಟೇಷನ್ ನತ್ತ ಹೊರಟಿದ್ದ ನಗರ ಸಾರಿಗೆ ಬಸ್ ದರಬಾರ ಸ್ಕೂಲ್ ಬಳಿ ಹೋಗುತ್ತಿದ್ದ ವೇಳೆ ಹಿಂಭಾಗದ ಚಕ್ರದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಚಾಲಕ ಕೂಡಲೇ ಬಸನ್ನು ನಿಲ್ಲಿಸಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.












Click it and Unblock the Notifications