Vijayapura Earthquake: ವಿಜಯಪುರ ಜಿಲ್ಲೆಯಲ್ಲಿ ಭೂಕಂಪ: 3.4 ತೀವ್ರತೆ ದಾಖಲು

ವಿಜಯಪುರ ಜಿಲ್ಲೆಯಲ್ಲಿ ಗುರುವಾರ ಮಧ್ಯರಾತ್ರಿ ಭೂಕಂಪನವಾಗಿದ್ದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಮಧ್ಯರಾತ್ರಿ 1.38 ನಿಮಿಷ 22ನೇ ಸೆಕೆಂಡ್‌ನಲ್ಲಿ ಭೂಮಿ ಕಂಪಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಮಾಹಿತಿ ನೀಡಿದೆ.

ವಿಜಯಪುರ ತಾಲೂಕಿನ ಐನಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ದಕ್ಷಿಣ-ನೈಋತ್ಯ ದಿಕ್ಕಿನಲ್ಲಿ 3 ಕಿಲೋ ಮೀಟರ್ ದೂರದಲ್ಲಿ 5 ಕಿಲೋ ಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಮಾಹಿತಿ ನೀಡಿದೆ.

Magnitude 3.4 Earthquake Recorded in Vijayapura District

ಮಧ್ಯರಾತ್ರಿಯಲ್ಲಿ ಭೂಕಂಪನ ಸಂಭವಿಸಿದ ಕಾರಣ ಗ್ರಾಮಸ್ಥರಿಗೆ ಅನುಭವಕ್ಕೆ ಬಂದಿಲ್ಲ ಎನ್ನಲಾಗಿದೆ. ಆದರೂ ಕೆಲವರಿಗೆ ಭೂಕಂಪನದ ಅನುಭವವಾಗಿದ್ದು, ಬಂಡೆಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಜರುಗಿದಂತೆ ಒಂದು ಕ್ಷಣ ಭೂಮಿ ಅಲುಗಾಡಿ ಅನುಭವ ಆಗಿದೆ ಎಂದು ಕೆಲವರು ಹೇಳಿದ್ದಾರೆ.

ಮಳೆಗಾಲದಲ್ಲಿ ಆಗಾಗ ಕಂಪಿಸುವ ಭೂಮಿ

ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಆಗಾಗ್ಗೆ ಭೂಕಂಪನದ ಅನುಭವ ಆಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಅದರಲ್ಲೂ ಮಳೆಗಾಲದಲ್ಲಿ ಈ ಭಾಗದಲ್ಲಿ ಹೆಚ್ಚಿನ ಭೂಕಂಪ ಆಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈವರೆಗೂ ಇಲ್ಲಿ ಲಘು ಭೂಕಂಪನ ಮಾತ್ರ ಸಂಭವಿಸಿದ್ದು ಯಾವುದೇ ಅನಾಹುತಗಳು ಸಂಭವಿಸಿಲ್ಲ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಇಲ್ಲಿ ಲಘು ಭೂಕಂಪನ ಸಂಭವಿಸುತ್ತಿದ್ದರೂ ಏನು ಕಾರಣ ಎಂದು ಯಾರಿಗೂ ತಿಳಿದಿಲ್ಲ. ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಕೂಡ ಭೂಕಂಪನಕ್ಕೆ ಕಾರಣವೇನು ಎನ್ನುವ ಬಗ್ಗೆ ಅಧ್ಯಯನ ನಡೆಸಲು ಹೋಗಿಲ್ಲ.

ಆತಂಕ ಪಡುವ ಅಗತ್ಯವಿಲ್ಲ!

ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಸ್ಪಷ್ಟನೆ ನೀಡಿದ್ದು, ಇದು ಲಘು ಭೂಕಂಫವಾಗಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಜನರಿಗೆ ಲಘುಕಂಪನದ ಅನುಭವವಾಗಿದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+