'ಸಿದ್ದರಾಮಯ್ಯ ಅವರನ್ನು ಯಾರಾದರೂ ಕೊಲೆ ಮಾಡುತ್ತಾರೆ ಎಂಬ ಭಯ ನನಗೆ'
Recommended Video

ವಿಜಯಪುರ, ಮಾರ್ಚ್ 8: "ಇಂದು ಸಂಜೆಯೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾರಾದರೂ ಕೊಲೆ ಮಾಡುತ್ತಾರೆ ಎಂಬ ಭಯ ನನಗೆ ಇದೆ" ಎಂದು ವಿಪಕ್ಷ ನಾಯಕ- ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ ಇಲ್ಲಿ ಹೇಳಿದರು. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದರು.
ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಮೇಲೆ ಚಾಕು ಇರಿತ ಆಗಿದೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾಕೆ ಚಾಕು ಹಾಕಬಾರದು? ಕೊಲೆಗಡುಕರಿಗೆ ಕರ್ನಾಟಕ ಸ್ವರ್ಗ ಆಗಿದೆ. ಯಾರೂ- ಏನೂ ಮಾಡಲಿಕೆ ಆಗಲ್ಲ. ಗೃಹ ಇಲಾಖೆ ಸತ್ತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆಗೆ ಹೇಳೋರು- ಕೇಳೋರು ಯಾರೂ ಇಲ್ಲ. ಎಲ್ಲಿ ಬೇಕಾದರೂ ಅತ್ಯಾಚಾರ ಹಾಗೂ ಕೊಲೆ ಮಾಡಬಹುದು. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಆಗುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಜೀವ ಉಳಿಸುವುದು ಕಷ್ಟ. ಆದ್ದರಿಂದ ನಮ್ಮ ಜೀವ ಉಳಿಸಿ ಎಂದು ಸಿಎಂ ಹಾಗೂ ಗೃಹ ಸಚಿವರು ಕೇಂದ್ರ ಸರಕಾರಕ್ಕೆ, ಪ್ರಧಾನಮಂತ್ರಿಗೆ ಮನವಿ ಮಾಡಲಿ ಎಂದು ಹೇಳಿದರು.












Click it and Unblock the Notifications