ರಾಷ್ಟ್ರ ಧ್ವಜದ ಕಂಬಕ್ಕೆ ಚಪ್ಪಲಿ ಕಟ್ಟಿದ ಕಿಡಿಗೇಡಿಗಳು
ವಿಜಯಪುರ,
ನವೆಂಬರ್ 21 : ರಾಷ್ಟ್ರ ಧ್ವಜದ ಕಂಬಕ್ಕೆ ಅವಮಾನ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಎಂಭತ್ನಾಳ ಗ್ರಾಮದಲ್ಲಿ ನಡೆದಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಎಂಭತ್ನಾಳ
ಸರ್ಕಾರಿ ಪ್ರೌಢಶಾಲೆಯಲ್ಲಿರುವ ಧ್ವಜದ ಕಂಬಕ್ಕೆ ಚಪ್ಪಲಿ ಹಾಕಿ ಕಟ್ಟುವ ಮೂಲಕ ಕಿಡಿಗೇಡಿಗಳು ದೇಶಕ್ಕೆ ಅವಮಾನ ಮಾಡಿದಂತಾಗಿದೆ. ಕೈಚೀಲದಲ್ಲಿ ಚಪ್ಪಲಿಯನ್ನು ತೂಗುಹಾಕಿದ್ದಷ್ಟೇ ಅಲ್ಲದೆ ಅದರೊಂದಿಗೆ ಒಂದು ಪತ್ರವನ್ನು ಕೂಡ ಇರಿಸಿದ್ದಾರೆ. ಆ ಪತ್ರದಲ್ಲಿ ಗ್ರಾಮದ ಪ್ರಮುಖರ ಹೆಸರನ್ನು ನಮೂದಿಸಲಾಗಿದೆ. ಈಗ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. id='are-slot-2' class='oiad oi-axt oiadv'>












Click it and Unblock the Notifications