ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ವಿಜಯಪುರದಲ್ಲಿ ಮತ್ತೆ ಭೂಕಂಪನ, 3.9 ತೀವ್ರತೆ ದಾಖಲೆ

|
Google Oneindia Kannada News

ವಿಜಯಪುರ, ಆಗಸ್ಟ್ 26: ವಿಜಯಪುರದಲ್ಲಿ ಮತ್ತೆ ಮತ್ತೆ ಭೂಕಂಪನ ವರದಿಯಾಗುತ್ತಲೇ ಇದೆ. ಗುರುವಾರ ತಡರಾತ್ರಿ ಮತ್ತೊಂದು ಭೂಕಂಪ ವರದಿಯಾಗಿದೆ.

ಮಧ್ಯರಾತ್ರಿ 2 ಗಂಟೆಗೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಕವಲಗಿ ಗ್ರಾಮದಲ್ಲಿ 10 ಕಿ.ಮೀ ಆಳದಲ್ಲಿದೆ.

ಇದು ಕಳೆದ 1 ವಾರದಲ್ಲಿ ವರದಿಯಾದ 10 ನೇ ಭೂಕಂಪವಾಗಿದೆ.

ಜಿಲ್ಲೆಯಲ್ಲಿ ಸತತ ಒಂದು ವಾರದಿಂದ ಭೂಮಿ ಕಂಪಿಸುತ್ತಲೇ ಇದೆ. ಇದರಿಂದಾಗಿ ಗುಮ್ಮಟ ನಗರಿಯ ಜನರಲ್ಲಿ ಆತಂಕ ಮನೆ ಮಾಡಿದೆ.

Earthquake of 3.9 magnitude jolts Vijayapura District

ಕಳೆದ ಸೋಮವಾರ ಸಾಯಂಕಾಲ 4:26ಕ್ಕೆ ಕೂಡ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲಾಗಿತ್ತು. ನಗರದ ರೈಲ್ವೆ ಸ್ಟೇಷನ್ ಏರಿಯಾ, ಗೋಳಗುಮ್ಮಟ ಏರಿಯಾ ಸೇರಿದಂತೆ ಬಹುತೇಕ ಕಡೆಗಳಲ್ಲಿ‌ ಭೂಮಿಯಲ್ಲಿ ಸದ್ದು ಕೇಳಿಬಂದಿತ್ತು.

ಕವಲಗಿ ಗ್ರಾಮದಲ್ಲಿ ವರದಿಯಾಗಿರುವಂತೆಯೇ ಭೂಮಿಯ 10 ಕೀಮೀ ಆಳದಲ್ಲಿ ತರಂಗಗಳು ಸೃಷ್ಟಿಯಾಗಿವೆ ಎಂದು ಜಿಲ್ಲಾಡಳಿತ ವರದಿ ಮಾಡಿತ್ತು. ಸೋಮವಾರ ರಾತ್ರಿ 9.22ರ ವೇಳೆಗೂ ಕೆಲ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿರುವ ವರದಿ ಬಂದಿದೆ.

ವಿಜಯಪುರ ನಗರ, ಸಿಂದಗಿ, ಇಂಡಿ, ಬಸವನಬಾಗೇವಾಡಿ, ನೆರೆಯ ಬಾಗಲಕೋಟೆಯ ಜಮಖಂಡಿ ಹಾಗೂ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲೂ ಕಂಪನದ ಅನುಭವ ಉಂಟಾಗಿದೆ.

ಪದೇ ಪದೇ ಭೂಮಿ ಕಂಪಿಸುತ್ತಿರುವುದರಿಂದ ಜಿಲ್ಲೆಗೆ ವಿಜ್ಞಾನಿ ತೆರಳಿ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ.

ಕಳೆದ ವಾರ ವಿಜಯಪುರ ‌ಜಿಲ್ಲೆಯ ತಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ ತಾಲೂಕುಗಳು ಸೇರಿದಂತೆ ಇತರೆ ಭಾಗಗಳಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ಭೂಕಂಪನ ಅನುಭವವಾಗುತ್ತಿದ್ದಂತೆ ಜನರು ಆತಂಕದಿಂದ ಮನೆಯಿಂದ ಆಚೆ ಬಂದಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಈವರೆಗೆ 19ನೇ ಬಾರಿ ಭೂಕಂಪಿಸಿದೆ. ಮೇಲಿಂದ ಮೇಲೆ ಭೂಕಂಪನ ಆಗುತ್ತಿರೋದಕ್ಕೆ ಜನ ಭಯಭೀತರಾಗಿದ್ದಾರೆ.

English summary
serial earthquake in vijayapura: Earthquake of 3.9 magnitude jolts Vijayapura District. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X