ಕೊಲೆ ಮಾಡ ಹೊರಟಿದ್ದು ಯಾರನ್ನೋ, ಹೋಯಿತು ಅಮಾಯಕನ ಪ್ರಾಣ
ವಿಜಯಪುರ, ಏ.1: ಕೊಲೆಯಾಗಬೇಕಾದವನು ಅದೃಷ್ಟವಶಾತ್ ಬದುಕುಳಿದ ಆದರೆ, ಕೃತ್ಯಕ್ಕೆ ಅಮಾಯಕ ಬಲಿಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರದ ಸಿಂದಗಿ ತಾಲೂಕಿನ ಗ್ರಾಮ ಒಂದರಲ್ಲಿ ಸಹೋದರರನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದರು. ಆದರೆ ಓರ್ವ ಸಹೋದರನನ್ನು ಕೊಂದಿದ್ದಾರೆ ಆದರೆ ಅವನೊಂದಿಗಿದ್ದವನು ಮತ್ತೊಬ್ಬ ಸಹೋದರ ಅಂದುಕೊಂಡು ಸ್ನೇಹಿತನನ್ನು ಕೊಲೆ ಮಾಡಿದ್ದಾರೆ.
ಚಾಂದಕವಟೆ ಗ್ರಾಮದ ನಿವಾಸಿಗಳಾದ ಪರಮಾನಂದ ದರಿಕಾರಿ (22) ಮತ್ತು ಅಶೋಕ್ ಬಿರಾದರ (25) ಹತರಾದವರು. ಇವರಿಬ್ಬರೂ ಸ್ನೇಹಿತರಾಗಿದ್ದು, ಭಾನುವಾರ ರಾತ್ರಿ ಇಬ್ಬರೂ ಒಟ್ಟಿಗೆ ಮಲಗಿದ್ದರು ಎಂದು ಸಿಂಧಗಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ತೋಟದ ಮನೆಯಲ್ಲಿ ಸಹೋದರರು ಮಲಗಿದ್ದಾಗ, ದಾಳಿ ಮಾಡಿ ಅವರನ್ನು ಕೊಲ್ಲಬೇಕು ಎಂಬುದು ದುಷ್ಕರ್ಮಿಗಳ ಯೋಜನೆಯಾಗಿತ್ತು ಆದರೆ ಓರ್ವ ಸಹೋದರ ಅದೃಷ್ಟವಶಾತ್ ಪಾರಾಗಿದ್ದಾರೆ.
ಪರಮಾನಂದ ದರಿಕಾರಿ ಮತ್ತು ಸಿದ್ದು ದರಿಕಾರಿ ಅಣ್ಣತಮ್ಮಂದಿರು. ಇವರಿಬ್ಬರಿಗೂ ಹಾಗೂ ಇವರ ದಾಯಾದಿಗಳ ನಡುವೆ ಆಸ್ತಿ ಕಲಹ ಇತ್ತು. ಈ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಅಣ್ಣತಮ್ಮಂದಿರನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಆದರೆ ಅವರ ಜಗಳದಲ್ಲಿ ಅಮಾಯಕರೊಬ್ಬರು ಬಲಿಯಾಗಿದ್ದಾರೆ.












Click it and Unblock the Notifications