'ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಪಾಕಿಸ್ತಾನ್ ಏಜೆಂಟ್' ಅಂತೆ!
ವಿಜಯಪುರ, ಫೆಬ್ರವರಿ 25: ಸದಾ ವಿವಾದಮಯ ಹೇಳಿಕೆಗಳನ್ನು ಕೊಡುವುದರಲ್ಲಿ ಸಿದ್ದಹಸ್ತರಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈ ಸಾರಿ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಅವರ ಬಗ್ಗೆ ಮಾತನಾಡಿದ್ದಾರೆ.
ವಿಜಯಪುರದಲ್ಲಿ 'ಪಾಕ್ ಪರ ಲವ್ ಯು ಪಾಕ್ ಆರ್ಮಿ' ಎಂದು ಪೇಸ್ಬುಕ್ ಪೋಸ್ಟ್ ಹಾಕಿದ್ದರ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುವಾಗ, "ಪಾಕಿಸ್ತಾನ್ ಜಿಂದಾಬಾದ್ ಎನ್ನುವರನ್ನು ಇನ್ಮಂದೆ ಜೈಲಿಗೆ ಕಳಿಸುವುದಿಲ್ಲ. ಗುಂಡೇಟು ನೀಡಿ ಕೊಲ್ಲಲಾಗುವುದು. ಇಂತಹ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಬೆಂಗಳೂರಿನ ದೊರೆಸ್ವಾಮಿ ಅಂತಹ ಮುದುಕ ಪಾಕಿಸ್ತಾನ್ ಏಜೆಂಟ್ ಇದ್ದಂತೆ' ಎಂದು ಹೇಳಿದ್ದಾರೆ.
'ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಾಕಷ್ಟು ಜನ ಹೋರಾಟ ಮಾಡಿದ್ದಾರೆ. ದೊರೆಸ್ವಾಮಿ ಒಬ್ಬರೇ ಮಾಡಿಲ್ಲ. ಪಾಕಿಸ್ತಾನ್ ಪರ ಘೋಷಣೆ ಕೂಗುವರನ್ನು ಸಮರ್ಥಿಸಿಕೊಳ್ಳುವುದನ್ನು ನೋಡಿದರೆ ಅವರು ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿದರು. ಇನ್ಮುಂದೆ ಪಾಕಿಸ್ತಾನ್ ಪರ ಮಾತನಾಡುವರನ್ನು ನೇರವಾಗಿ ಸ್ವರ್ಗಕ್ಕೆ ಕಳಿಸುತ್ತೇವೆ, ಮತ್ತೆಲ್ಲಿಗೂ ಕಳಿಸುವುದಿಲ್ಲ' ಎಂದು ಹೇಳಿದರು.

ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಯುವಕನೊಬ್ಬ 'ಲವ್ ಯೂ ಪಾಕ್ ಆರ್ಮಿ' ಎನ್ನುವ ಫೇಸ್ಬುಕ್ ಪೋಸ್ಟ್ ಹಾಕಿರುವುದು ಬೆಳಕಿಗೆ ಬಂದಿದೆ. ಪಾಕ್ ಆರ್ಮಿ ಪರವಾಗಿ ತಾಳಿಕೋಟಿ ಯುವಕನ ಪೋಸ್ಟ್ ಹಾಕಿದ್ದಾನೆ. ತಾಳಿಕೋಟಿ ಯುವಕ ಶೇರ್ ಮಾಡಿದ ಬರಹ ಫೇಸ್ಬುಕ್ ನಲ್ಲಿ ವೈರಲ್ ಆಗಿದೆ. ಫೆ.22 ರಂದು ಎ ಟು ಝಡ್ ಖಾತೆಯಲ್ಲಿ ಲವ್ ಯೂ ಪಾಕ್ ಆರ್ಮಿ ಎಂದು ತಾಳಿಕೋಟಿಯ ಮೇರು ಬ್ಯಾಗವಾಟ್ ಬರೆದಿದ್ದ.












Click it and Unblock the Notifications