ʻಕಾಂಗ್ರೆಸ್ ಪಕ್ಷ ಇರುವುದೇ ಮುಸ್ಲಿಮರಿಗಾಗಿ, ಹಿಂದೂಗಳಿಗಲ್ಲ!ʼ
ಕಾಂಗ್ರೆಸ್ ಪಕ್ಷ ಇರುವುದೇ ಮುಸ್ಲಿಮರಿಗಾಗಿ ಎಂದು ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ವಿವಿಧ ವಿಚಾರಗಳ ಬಗ್ಗೆ ಮಾತನಾಡಿರುವ ಅವರು ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಎಲ್ಲಿಯವರೆಗೆ ತಾಯಗಂ*ರು ಇರುತ್ತಾರೆ ಅಲ್ಲಿಯವರೆಗೆ ಭಾರತದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಂದೂಗಳ ಪಕ್ಷವೇ ಅಲ್ಲ. ಅದು ಇರುವುದೇ ಮುಸ್ಲಿಮ್‌ರಿಗಾಗಿ. ಎಲ್ಲಿಯವರಗೆ ದೇಶದಲ್ಲಿ ಮುಸ್ಲಿಮರು ಮತ್ತು ತಾಯ** ಇರುತ್ತಾರೋ ಅಲ್ಲಿವರೆಗೆ ಅವರು ಕಲ್ಲು ಹೊಡೆಯೋರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನ ಏಜೆಂಟ್ ಇದ್ದಂತೆ. ಅವರು ಬೇಕಾದರೆ ಪಾಕಿಸ್ತಾನಕ್ಕೆ ಹೋಗಿ ಪ್ರಧಾನಿ ಆಗಲಿ. ಯಾರು ಬೇಡ ಅಂತಾರೇ ಎಂದು ಹರಿಹಾಯ್ದರು. ಸಚಿವ ಸಂತೋಷ ಲಾಡ್ ಮೋದಿ ಮುಂದೆ ಬಚ್ಚಾ. ಅವರ ಬಗ್ಗೆ ಹೀಯಾಳಿಸಿ ಮಾತನಾಡಿದರೆ ಸೋನಿಯಾ ಹಾಗೂ ರಾಹುಲ್ ಗಾಂಧಿ ಖುಷಿಯಾಗುತ್ತಾರೆ. ತನ್ನ ಸಚಿವ ಸ್ಥಾನ ಉಳಿಯುತ್ತೆ ಅಂತ ಈ ರೀತಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಎನ್ನುವುದೇ ಇಲ್ಲ ಎಂದು ಕುಟುಕಿದ್ದಾರೆ.

ಡಾ.ಬಿ ಆರ್. ಅಂಬೇಡ್ಕರ್ ಅವರು ಹೇಳಿದ್ದು ನೋಡಿದರೆ ಒಬ್ಬ ದಲಿತ ಕೂಡ ಕಾಂಗ್ರೆಸ್‌ಗೆ ಮತ ಹಾಕಬಾರದು. ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ, ಕುಂಕುಮ, ಜನಿವಾರ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರೇ ಈ ರೀತಿ ಮಾಡಿದರು ಕೂಡ ಅದು ತಪ್ಪೆ. ಮಂಗಳಸೂತ್ರ, ಕುಂಕುಮಕ್ಕೆ ಕೈ ಹಾಕಿದವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಶಾಸಕರ ವಜಾ ರದ್ದಗೊಳಿಸಲು ಬಿಜೆಪಿ ರಾಜ್ಯಪಾಲರಿಗೆ ಮನವಿ ವಿಚಾರವಾಗಿ, ಶಾಸಕರು ಸಭಾಧ್ಯಕ್ಷರ ಅಂಕಣಕ್ಕೆ ಹೋಗಿ ದಾಂಧಲೆ ಮಾಡು ಅಂತ ಹೇಳಿದವರೇ ವಿಜಯೇಂದ್ರ. ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ಈ ರೀತಿ ಸೂಚನೆ ನೀಡಿದ್ದೆ ಅವರು. ಅಪ್ರಭುದ್ದ ವ್ಯಕ್ತಿಯನ್ನು ಅಧ್ಯಕ್ಷ ಮಾಡಿದ್ದೇ ತಪ್ಪು. ವಿಧಾನಸಭೆ ಅಧ್ಯಕ್ಷರ ಕುರ್ಚಿ ಬಳಿ ಹೋಗಿ ಯಾರು ಹೋರಾಟ ಮಾಡಿದರು ತಪ್ಪೇ. ಸದನದ ಬಾವಿಯಲ್ಲಿ ಮಾತ್ರ ಶಾಸಕರು ಹೋರಾಟ ನಡೆಸಬೇಕು ಎಂದು ಸಭಾಧ್ಯಕ್ಷರ ಕ್ರಮ ಸಮರ್ಥಿಸಿಕೊಂಡರು.
ಪಾಕಿಸ್ತಾನವು ಅಣುಬಾಂಬ್ ದಾಳಿ ಮಾಡುವುದಾಗಿ ಹೇಳಿಕೆ ಕುರಿತು, ನಮ್ಮಲ್ಲಿರುವ ಅಣು ಬಾಂಬ್‌ಗಳು ಪಟಾಕಿ ಹಚ್ಚಲು ಅಲ್ಲ. ಪಾಕಿಸ್ತಾನ ಮೇಲೆ ನಮ್ಮಲ್ಲಿರುವ ನಾಲ್ಕು ಒಗೆದರೆ ಸಾಕು ಅವರು ಸರ್ವನಾಶ ಆಗುತ್ತಾರೆ. ಭಾರತದ ಶಕ್ತಿಯನ್ನು ಯಾರು ಹಗುರವಾಗಿ ಪರಿಗಣಿಸಬಾರದು. ನೆಹರು ಇದ್ದ ಕಾಲದ ಭಾರತ ಈಗಿಲ್ಲ. ವಿಶ್ವದಲ್ಲೇ ಬಲಿಷ್ಠವಾಗಿದೆ ಎಂದರು. ಮುಂದುವರಿದು ಈ ಬಾರಿ ಪಾಕಿಸ್ತಾನ ಅಂತ್ಯವಾಗಬೇಕು. ಭಾರತದಲ್ಲಿ ಹಿಂದೂ ತಾಯ** ಹೆಚ್ಚಾಗಿದ್ದಾರೆ. ಹೀಗಾಗಿ ದೇಶವು ಒಳಗಿನಿಂದ ಮತ್ತು ಹೊರಗಿನಿಂದ ವೈರಿಗಳನ್ನು ಎದುರಿಸಬೇಕಿದೆ. ಯುದ್ಧವಾದರೆ, ಅವರ ಅಸಲಿತನ ಹೊರಗೆ ಬರುತ್ತದೆ. ಪಾಕಿಸ್ತಾನ ಜೊತೆ ಬಾಂಗ್ಲಾದೇಶ ಸಹ ನಾಶವಾಗಬೇಕು. ಅವೆರಡು ಭಾರತದೊಳಗೆ ಸೇರಬೇಕು ಎಂದರು.
ವಿಜಯಪುರದಲ್ಲಿ ತಮ್ಮ ವಿರುದ್ಧ ಪ್ರತಿ ಘಟನೆ ವಿಚಾರವಾಗಿ, ಕರ್ನಾಟಕದಲ್ಲಿ ನಾನು ಹಿಂದೂ ಪರ ಮಾತನಾಡಿದ್ದು ಅವರಿಗೆ ಬ್ಯಾನಿ ಆಗಿದೆ. ಹಿಂದೂಗಳಲ್ಲಿ ಕೂಡ ಕೆಲವರು ನಂಬಿಕೆ ದ್ರೋಹಿಗಳು ದೇಶದಲ್ಲಿದ್ದಾರೆ. ನನ್ನನ್ನು ಏನು ಒದ್ದು ಒಳಗೆ ಹಾಕುತ್ತಾರೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ತಡೆ ನೀಡಿದೆ ಎಂದರು.












Click it and Unblock the Notifications