ಬುರ್ಖಾ ಧರಿಸಿದವರನ್ನು ಕಚೇರಿಗೆ ಸೇರಿಸಲ್ಲ ಎಂದ ಶಾಸಕ ಯತ್ನಾಳ್
ವಿಜಯಪುರ, ಜೂನ್ 7:ಬುರ್ಖಾ ಧರಿಸಿರುವ ಮಹಿಳೆಯರು ನನ್ನ ಕಚೇರಿ ಸುತ್ತ ಸುಳಿಯಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಅಷ್ಟೇ ಮಾತ್ರವಲ್ಲದೆ ಬುರ್ಖಾ ಧರಿಸಿರುವ ಮಹಿಳೆಯರು ಕಚೇರಿ ಸುತ್ತ ಸುಳಿಯ ಬಾರದು ಜತೆಗೆ ಮುಸ್ಲಿಮರು ನನಗೆ ಮತ ಹಾಕಿಲ್ಲ ಕೇವಲ ಹಿಂದೂ ನನಗೆ ಮತ ಹಾಕಿದ್ದಾರೆ. ಹಿಂದೂಗಳು ಮಾತ್ರ ನನ್ನ ಕಚೇರಿಗೆ ಅವಕಾಶ ನೀಡಲಾಗುತ್ತದೆ ಎನ್ನುವ ಮೂಲಕ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ನಂತರ ರಾಜ್ಯದಲ್ಲಿ ಮತ್ತೊಬ್ಬ ಬಿಜೆಪಿ ಮುಖಂಡ ತೀವ್ರ ವಿವಾದಕ್ಕೆ ಸಿಲುಕಿದ್ದಾರೆ.
ಗುರುವಾರ ವಿಜಯಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಗೆದ್ದಿರುವುದು ಹಿಂದೂ ಮತಗಳಿಂದಲೇ ಹೊರತು ಮುಸಲ್ಮಾನರ ಮತಗಳಿಂದಲ್ಲ ಯಾರೂ ಕೂಡ ಮುಸ್ಲಿಮರ ಪರವಾಗಿ ಕೆಲಸ ಮಾಡಬೇಡಿ ಎಂದಿದ್ದಾರೆ.

ಗಡ್ಡ ಬಿಟ್ಟವರು, ಟೋಪಿ ಹಾಕಿದವರು, ಬುರ್ಖಾ ತೊಟ್ಟವರು ನನ್ನ ಆಫೀಸ್ ಮುಂದೆ ಸುಳಿಯಬಾರದು, ಮುಸ್ಲಿಮರ ಪರವಾಗಿ ಕೆಲಸ ಮಾಡಬೇಡಿ ಎಂದು ಕಾರ್ಪೊರೇಟ್‌ಗಳಿಗೆ ತಾಕೀತು ಮಾಡಿದ್ದಾರೆ.












Click it and Unblock the Notifications