ಸ್ವಾಮಿನಾಥನ್ ಗೆ ಬಸವ ಕೃಷಿ ಪ್ರಶಸ್ತಿ: 1 ಲಕ್ಷ ನಗದು, ಸ್ಮರಣ ಫಲಕ

Posted By: ವಿಜಯಪುರ ಪ್ರತಿನಿಧಿ
Subscribe to Oneindia Kannada

ಹಿಟ್ನಳ್ಳಿ (ವಿಜಯಪುರ ಜಿಲ್ಲೆ), ಜನವರಿ 8: 2018ನೇ ಸಾಲಿನ ಬಸವ ಕೃಷಿ ಪ್ರಶಸ್ತಿಗೆ ಡಾ.ಎಂ.ಎಸ್. ಸ್ವಾಮಿನಾಥನ್ ಅವರನ್ನು ಆಯ್ಕೆ ಮಾಡಲಾಗಿದೆ. ಜನವರಿ 24ರಂದು ತಮಿಳುನಾಡಿನ ಚೆನ್ನೈನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹಿಟ್ನಳ್ಳಿಯಲ್ಲಿ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ತಮಿಳುನಾಡಿನ ಡಾ.ಎಂ.ಎಸ್. ಸ್ವಾಮಿನಾಥನ್ ಅವರು ಈ ಪ್ರಶಸ್ತಿಗೆ ಆಯ್ಕೆ ಆಗಿದ್ದು, ಬಸವ ಕೃಷಿ ಪ್ರಶಸ್ತಿಯು ಒಂದು ಲಕ್ಷ ರುಪಾಯಿ ನಗದು, ಸ್ಮರಣ ಫಲಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.

Dr MS Swaminathan

ಪ್ರತ್ಯೇಕ ಧರ್ಮ ವರದಿಗಾಗಿ ಕಾಯೋಣ

ಆಟ ಆಡುವಾಗ ಸೋತವನು ಗೆದ್ದವನಿಗೆ ಕಚ್ಚುವ ಹಾಗೆ ವೀರಶೈವ ಲಿಂಗಾಯತರು ಮಾಡಬಾರದು. ತಾತ್ವಿಕವಾಗಿ, ಸೈದ್ಧಾಂತಿಕವಾಗಿ ಚರ್ಚೆ ಮಾಡಲಿ. ಘರ್ಷಣೆಗೆ ಒಳಗಾಗಬಾರದು. ಪ್ರತ್ಯೇಕ ಲಿಂಗಾಯತರ ತಜ್ಞರ ಸಭೆ ಹಿನ್ನೆಲೆಯಲ್ಲಿ ಅವರು ವರದಿ ಯಾವಾಗ ಕೊಡ್ತಾರೆ ಎಂದು ಕಾಯೋಣ ಎಂದರು.

900 ವರ್ಷಗಳ ಬಳಿಕ ಮೊದಲ ಬಾರಿಗೆ ಕರ್ನಾಟಕ ಸರಕಾರದ ಮಟ್ಟದಲ್ಲಿ ತಜ್ಞರು ಒಳಗೊಂಡ ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಚರ್ಚೆ ಆಗುತ್ತಾ ಇದೆ. ಅಖಿಲ ಭಾರತ ಲಿಂಗಾಯತ ಮಹಾಸಭೆ ಅಂತ ಮಾಡಲಿ. ಬಸವಣ್ಣನೇ ನಮ್ಮ ಧರ್ಮಗುರು. ವಚನವೇ ನಮ್ಮ ಧರ್ಮ ಗ್ರಂಥ ಮಾಡಿದರೆ ಅನೇಕ ಗೊಂದಲಗಳಿಗೆ ತೆರೆ ಬೀಳುತ್ತವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Basava agriculture award to Dr MS Swaminathan. On January 24th award will be distributed in Chennai, said by Panchamasali seer Jayamrutyunjaya in Hitnalli, Vijayapura.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ