"ನೀವು ಸಿಎಂ ಆಗಿರಿ, ಉಳಿದೆಲ್ಲಾ ಖಾತೆ ವಿಜಯೇಂದ್ರಗೆ ಕೊಟ್ಟು ಬಿಡಿ"

ವಿಜಯಪುರ, ಏಪ್ರಿಲ್ 2; "ಎಲ್ಲಾ ಮಂತ್ರಿಗಳು ಯಾಕೆ ಬೇಕು, ವಿಜಯೇಂದ್ರ ಮಾಡಿಬಿಡಿ. ನೀವು ಮುಖ್ಯಮಂತ್ರಿಯಾಗಿರಿ. ಉಳಿದೆಲ್ಲಾ ಖಾತೆಗಳನ್ನು ವಿಜಯೇಂದ್ರಗೆ ಕೊಟ್ಟುಬಿಡಿ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಟೀಕೆಯನ್ನು ಮುಂದುವರೆಸಿದ್ದಾರೆ. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ. ವೈ. ವಿಜಯೇಂದ್ರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.

"ಯಾವುದಕ್ಕೆ ಸಚಿವ ಸಂಪುಟ ಬೇಕು?. ಮುಖ್ಯಮಂತ್ರಿಗಳು ಎಂದರೆ ಏನು?, ನೀವು ಎಲ್ಲಾ ಇಲಾಖೆಯಲ್ಲಿಯೂ ಹಸ್ತಕ್ಷೇಪ ಮಾಡುತ್ತೀರಿ. ಎಲ್ಲರನ್ನು ತೆಗೆಯುತ್ತಿದ್ದೀರಿ" ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.

Basanagouda Patil Yatnal Verbal Attack On Yediyurappa And Vijayendra

"ಹಣಕಾಸು ಇಲಾಖೆಯಲ್ಲಿ ಒಬ್ಬರು ಕಾರ್ಯದರ್ಶಿ ಇದ್ದರು. ಅವರು ಸಿದ್ದರಾಮಯ್ಯ ಕಾಲದಲ್ಲಿ, ಕುಮಾರಸ್ವಾಮಿ ಕಾಲದಲ್ಲಿಯೂ ಇದ್ದರು. ಮುಖ್ಯಮಂತ್ರಿಗಳು ಹೇಳಿದಂತೆ ಕೇಳಿಕೊಂಡು ಅವರಿಗೆ ಹೊಂದಿಕೊಂಡು ಹೋಗುತ್ತಾರೆ" ಎಂದು ಯತ್ನಾಳ್ ದೂರಿದರು.

"10 ಕೋಟಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯ ಒಪ್ಪಿಗೆ ಬೇಕು. ನಾನು ಹಣಕಾಸು ಇಲಾಖೆ ಕಾರ್ಯದರ್ಶಿಗಳನ್ನು ಕೇಳುತ್ತೇನೆ. ಯಾವ ಆಧಾರದ ಮೇಲೆ ಹಣ ಬಿಡುಗಡೆ ಮಾಡಿದಿರಿ?" ಎಂದು ಯತ್ನಾಳ್ ಪ್ರಶ್ನಿಸಿದರು.

"ಮುಖ್ಯಮಂತ್ರಿ ಮತ್ತು ವಿಜಯೇಂದ್ರ ಹೇಳಿದರೆ ರಾತ್ರೋರಾತ್ರಿ ಹಣ ಬಿಡುಗಡೆ ಆಗುತ್ತದೆ. ಕೊಪ್ಪಳಕ್ಕೆ ಹಣ ಬಿಡುಗಡೆ ಮಾಡಿದ್ದಕ್ಕೆ ವಿಜಯೇಂದ್ರಗೆ ಅಭಿನಂದನೆ ಸಲ್ಲಿಸಲಾಗಿದೆ. ಅವರು ಯಾವ ಸಂವಿಧಾನಿಕ ಹುದ್ದೆಯಲ್ಲಿದ್ದಾರೆ?. ಅಪ್ಪ-ಮಕ್ಕಳು ಕಾವೇರಿ ಮನೆಯಲ್ಲಿ ಕೂತು ಎಲ್ಲಾ ಇಲಾಖೆಗಳನ್ನು ಡೀಲ್ ಮಾಡುತ್ತಿದೆ" ಎಂದು ಯತ್ನಾಳ್ ಗಂಭೀರ ಆರೋಪ ಮಾಡಿದರು.

"ಯಾವ ಮಂತ್ರಿಗಳಿಗೂ ತಮ್ಮ ಖಾತೆ ಬಗ್ಗೆ ಸ್ವತಂತ್ರ ತೀರ್ಮಾನ ಕೈಗೊಳ್ಳುವ ಅಧಿಕಾರವಿಲ್ಲ. 'ಡಿ' ಗ್ರೂಪ್ ನೌಕರರನ್ನು ವರ್ಗಾವಣೆ ಮಾಡಲು ಅಧಿಕಾರವಿಲ್ಲ. ಈಶ್ವರಪ್ಪ ಅವರು ಎತ್ತಿದ್ದು ಗೌರವಾನ್ವಿತ ಪ್ರಶ್ನೆಯಾಗಿದೆ. ಯಾರಿಗಾದರೂ ಹೇಳಲೇ ಬೇಕಲ್ಲ" ಎಂದು ಯತ್ನಾಳ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+