• search

ಶೀರೂರು ಶ್ರೀಗಳ ಆಪ್ತೆ ಪರಾರಿಯಾಗಲು ಯತ್ನಿಸಿದ್ದು ಯಾಕೆ ಗೊತ್ತಾ?

By ಉಡುಪಿ ಪ್ರತಿನಿಧಿ
Subscribe to Oneindia Kannada
For udupi Updates
Allow Notification
For Daily Alerts
Keep youself updated with latest
udupi News
    Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳ ಅಸಹಜ ಸಾವಿನ ಪ್ರಕರಣ : ಮಹಿಳೆ ಬಿಚ್ಚಿಟ್ಟ ಸ್ಪೋಟಕ ಮಾಹಿತಿ

    ಉಡುಪಿ, ಜುಲೈ. 25: ಶೀರೂರು ಶ್ರೀಗಳ ಸಾವಿನಲ್ಲಿ ಹೊಸ ಎಂಟ್ರಿ ಕೊಟ್ಟ ಮಹಿಳೆಯೋರ್ವರು ಇದೀಗ ಇನ್ನೊಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಶ್ರೀಗಳ ಆಪ್ತೆ ಹಾಗೂ ಶ್ರೀಗಳ ಜೊತೆ ಹೆಚ್ಚಿನ ನಂಟು ಬೆಳೆಸಿದ್ದ ಆ ಮಹಿಳೆ ಶ್ರೀಗಳ ಸಾವಿನ ಪ್ರಕರಣದ ದಿಕ್ಕಿಗೆ ಇನ್ನೊಂದು ದಾರಿ ಒದಗಿಸಿದ್ದಾರೆ.

    ಶಿರೂರು ಶ್ರೀ ಸಾವು : ಬುರ್ಖಾ ಧರಿಸಿ ಪರಾರಿಗೆ ಯತ್ನ, ಮಹಿಳೆ ವಶಕ್ಕೆ

    ಆ ಮಹಿಳೆ ಕಳೆದ ಎರಡು ವರ್ಷಗಳ ಹಿಂದೆ ಶ್ರೀಗಳಿಗೆ ಪರಿಚಯವಾಗಿದ್ದು, ಖಾಸಗಿ ಆಸ್ಪತ್ರೆಯೊಂದರಲ್ಲಿ. ಚಿಕಿತ್ಸೆಗೆ ಹೋದ ವೇಳೆ ಪರಿಚಯವಾಗಿದ್ದರು. ಬಳಿಕ ಆಕೆಯನ್ನು ಮಠಕ್ಕೆ ಬರುವಂತೆ ಶ್ರೀಗಳು ಕೇಳಿದ್ದರಂತೆ.

    ಈ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗಳು ನಡೆಯುತ್ತಿದ್ದು, ತನಿಖೆ ನಡೆಸುತ್ತಿರುವ ಪೊಲೀಸರಿಗೆ ಕೂಡ ಭಾರೀ ಸವಾಲಾಗಿ ಪರಿಣಮಿಸಿದೆ. ಊಹಾಪೋಹಗಳು ಸತ್ಯಾ ಸತ್ಯತೆಗಳೊಂದಿಗೆ ಯುದ್ಧಕ್ಕಿಳಿದಂತೆ ಸುದ್ದಿಗಳು ಹೊರಬೀಳುತ್ತಿವೆ.

    ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿರುವ ಮಹಿಳೆ ಪ್ರಮುಖ ಕೊಂಡಿಯಾಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ. ಇದಕ್ಕೆ ಪೂರಕವೆಂಬಂತೆ ಆಕೆ ಬುರ್ಖಾ ಹಾಕಿಕೊಂಡು ಪರಾರಿಯಾಗಲು ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಪ್ರಕರಣಕ್ಕೆ ಮತ್ತಷ್ಟು ರೋಚಕತೆ ತಂದಿದೆ. ಮುಂದೆ ಓದಿ...

    ಪರಾರಿಯಾಗಲು ಯತ್ನ

    ಪರಾರಿಯಾಗಲು ಯತ್ನ

    ಹಿಂದೆ ಶ್ರೀಗಳ ಆರೈಕೆಗೆ ದಿನನಿತ್ಯ ಬರುತ್ತಿದ್ದ ಆ ಮಹಿಳೆ ಕಳೆದ 6 ತಿಂಗಳಿನಿಂದ ವಾರಕ್ಕೊಂದು ಸಲ ಬಂದು ಹೋಗುತ್ತಿದ್ದಳು. ಇದೀಗ ಸಾವಿನ ದಿನ ಅಂತ್ಯ ಸಂಸ್ಕಾರಕ್ಕೆ ಬರದೆ ತಲೆಮರೆಸಿಕೊಂಡಿದ್ದು ಇತ್ತೀಚೆಗೆ ಪರಾರಿಯಾಗಲು ಯತ್ನಿಸಿದ್ದಳು.

    ಆದರೆ ಆಕೆಯನ್ನು ಪರಾರಿಯಾಗಲು ಬಿಡದೆ, ಬೆಳ್ತಂಗಡಿ ಬಳಿಯ ಆಳದಂಗಡಿಯ ಸತ್ಯದೇವತೆ ತಾನದ ಬಳಿ ವಶಕ್ಕೆ ಪಡೆದುಕೊಂಡಿದ್ದರು. ಈ ಸಂದರ್ಭ ಆಕೆ ಬುರ್ಖಾ ಧರಿಸಿದ್ದಳು ಎಂಬ ಮಾಹಿತಿ ಕೂಡ ಲಭಿಸಿದೆ. ಆದರೆ ಆಕೆ ಪರಾರಿಯಾಗಲು ಯತ್ನಿಸಿದ್ದರ ಬೆನ್ನಹಿಂದೆ ಕುತೂಹಲಕಾರಿ ವಿಷಯವೊಂದು ಅಡಗಿದೆ.

    ಮಾಸ್ಟರ್ ಪ್ಲಾನ್ ಮಾಡಿದ ಮಹಿಳೆ

    ಮಾಸ್ಟರ್ ಪ್ಲಾನ್ ಮಾಡಿದ ಮಹಿಳೆ

    ಆ ಮಹಿಳೆ ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸಿದ್ದ ವೇಳೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಆಕೆ ಬಂದಿದ್ದು ಒರ್ವ ಮುಸ್ಲಿಂ ವ್ಯಕ್ತಿ ಜೊತೆಗೆ. ಆಕೆಗೂ ಆತನಿಗೂ ಏನು ಸಂಬಂಧ?

    ಏನಕ್ಕೆ ಆಕೆ ಬುರ್ಖಾ ಧರಿಸಿದ್ದು? ಹೌದು, ಇಕ್ಬಾಲ್ ಆ ಮಹಿಳೆಯ ಆಪ್ತ. ಮುಂಬೈನಲ್ಲಿ ಮಹಿಳೆಗೆ ಪರಿಚಯವಾಗಿದ್ದ ಇಕ್ಬಾಲ್ ಆಹ್ಮದ್ ಪರಸ್ಪರ ಹೆಚ್ಚು ಹೊಂದಾಣಿಕೆ ಬೆಳೆಸಿಕೊಂಡಿದ್ದ. ಮಹಿಳೆ ಇಕ್ಬಾಲ್ ಜೊತೆ ಓಡಿಹೋಗಲು ಯತ್ನಿಸಿದ ವೇಳೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದರು.

    ಇದೀಗ ಆಕೆಗೆ ಸಹಾಯ ಹಸ್ತನಾದ ಇಕ್ಬಾಲ್ ಹಾಗೂ ಆತನ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಕ್ಬಾಲ್ ಮೂಲತಃ ಉಡುಪಿಯ ಕಾಪು ನಿವಾಸಿ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಇಕ್ಬಾಲ್ ನನ್ನು ವಶಕ್ಕೆ ಪಡೆದಿದ್ದು, ಮುಂದೆ ಶ್ರೀಗಳ ಸಾವಿನ ಪ್ರಕರಣ ಅದ್ಯಾವ ಹಾದಿ ಹಿಡಿಯಲಿದೆ ಎಂದು ಕುತೂಹಲ ಮುಡಿಸಿದೆ.

    ನಾಪತ್ತೆಯಾದ ಚಿನ್ನಾಭರಣ

    ನಾಪತ್ತೆಯಾದ ಚಿನ್ನಾಭರಣ

    ಶೀರೂರು ಶ್ರೀಗಳ ಅಸಹಜ ಸಾವಿನ ತನಿಖೆ ಪೊಲೀಸರು ಚುರುಕುಗೊಳಿಸಿದ್ದಾರೆ. ಆದರೆ ಈಗ ಬಂದಿರುವ ಪ್ರಶ್ನೆ ಕೇವಲ ಶ್ರೀಗಳ ಸಾವಿಗೆ ಸಂಚು ಹಾಕದೇ ಅವರಲ್ಲಿದ್ದ ಸೊತ್ತುಗಳಿಗೂ ಕಣ್ಣು ಹಾಕಿದ್ದರ ಎಂಬುದು. ಶ್ರೀಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡವರು.

    ಅತೀ ಹೆಚ್ಚು ಚಿನ್ನಾಭರಣ ಧರಿಸುವ ಮೂಲಕ ಒಂದು ರೀತಿಯ ಚಿನ್ನಾಭರಣ ಪ್ರಿಯರಾಗಿದ್ದರು. ಆದರೆ ಶ್ರೀಗಳು ಆಸ್ಪತ್ರೆ ಸೇರುವ ಸಮಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣಗಳು ಈಗ ನಾಪತ್ತೆಯಾಗಿವೆ.

    ಶ್ರೀಗಳ ಚಿನ್ನಾಭರಣಗಳ ಮೇಲೆ ಕಣ್ಣು ?

    ಶ್ರೀಗಳ ಚಿನ್ನಾಭರಣಗಳ ಮೇಲೆ ಕಣ್ಣು ?

    ಇದ್ದಕ್ಕಿದ್ದಂತೆ ಶೀರೂರು ಶ್ರೀಗಳ ಚಿನ್ನಾಭರಣಗಳು ನಾಪತ್ತೆಯಾಗಿವೆ. ಆಸ್ಪತ್ರೆ ಸೇರಿದ ಬಳಿಕ ನಾಪತ್ತೆಯಾದ ಶಂಕೆ ವ್ಯಕ್ತವಾಗುತ್ತಿದೆ. ಶ್ರೀಗಳು ಸರಿ ಸುಮಾರು 3 ಕೆಜಿಯಷ್ಟು ಚಿನ್ನಾಭರಣ ಹೊಂದಿದ್ದು, ಪ್ರತಿದಿನವೂ ಚಿನ್ನಾಭರಣ ಧರಿಸುತ್ತಿದ್ದರು. ಕೆಜಿಯಷ್ಟು ಚಿನ್ನಾಭರಣ ಧರಿಸುವ ಶ್ರೀಗಳ ಸರ ಹಾಗೂ ಕೈಯಲ್ಲಿದ್ದ ಕಡಗಗಳು ಇದೀಗ ನಾಪತ್ತೆಯಾಗಿವೆ.

    ಸ್ತ್ರೀ ಮೋಹ ಶ್ರೀಗಳ ವೀಕ್ ನೆಸ್ ಆಗಿದ್ದು, ಶ್ರೀಗಳ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯ ದೇಹದಲ್ಲೂ ಶ್ರೀಗಳ ಚಿನ್ನಾಭರಣವಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

    ಆಕೆ ಶ್ರೀಗಳ ಚಿನ್ನಾಭರಣಗಳ ಮೇಲೆ ಕಣ್ಣಿಟ್ಟಿದ್ಲಾ? ಅಥವಾ ಶ್ರೀಗಳ ಆಪ್ತ ವಲಯದಲ್ಲೇ ಶ್ರೀಗಳ ಚಿನ್ನಾಭರಣದ ಮೋಹ ಕಾಡಿತ್ತಾ? ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿವೆ. ಈ ಬಗ್ಗೆ ಪೊಲೀಸ್ ಕೂಡ ತನಿಖೆ ನಡೆಸುತ್ತಿದ್ದು, ಶ್ರೀಗಳ ಚಿನ್ನಾಭರಣದ ಬಗ್ಗೆನೂ ಮಾಹಿತಿ ಕಲೆಹಾಕುತ್ತಿದ್ದಾರೆ.

    ಇನ್ನಷ್ಟು ಉಡುಪಿ ಸುದ್ದಿಗಳುView All

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Woman has now expelled another explosive information. Woman was introduced to Shiruru Shri Lakshmivara Theertha two years ago in a private hospital.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more