ಹಸಿದುಕೊಂಡು ಮನೆಗೆ ಬಂದಿದ್ದ ನಾಗರಹಾವು ನುಂಗಿದ್ದು 7 ಮೊಟ್ಟೆ!
Recommended Video

ಹಸಿದುಕೊಂಡು ಮನೆಗೆ ಬಂದಿದ್ದ ನಾಗರಹಾವು ನುಂಗಿದ್ದು 7 ಮೊಟ್ಟೆ!
ಉಡುಪಿ, ಜೂನ್ 23 : ಅದು ಮಳೆಗಾಲಕ್ಕೆ ಬಂದ ಅಪರೂಪದ ಅತಿಥಿ; ಮನೆಗೆ ಬಂದ ಈ ಅತಿಥಿಗೆ ವಿಪರೀತ ಹಸಿವು. ಹೀಗಾಗಿ ಏಳು ಕೋಳಿ ಮೊಟ್ಟೆಯನ್ನು ನುಂಗಿದೆ. ಆದರೆ, ಮನೆಯವರಿಗೆ ಈ ಅಪರೂಪದ ಅತಿಥಿಯನ್ನು ನೋಡಿ ಗಾಬರಿ…
ಈ ಅತಿಥಿ ಬೇರಾರೂ ಅಲ್ಲ, ನಾಗರ ಹಾವು. ಹೌದು… ಇದು ಬಂದದ್ದು ಉಡುಪಿ ಜಿಲ್ಲೆಯ ಹಾವಂಜೆ ಗ್ರಾಮದ ಮನೆಯೊಂದಕ್ಕೆ. ಹೀಗೆ ಬಂದ ನಾಗರ ಹಾವು ಮನೆಯ ಹೇಂಟೆಯನ್ನು ಕೊಂದು 7 ಮೊಟ್ಟೆಗಳನ್ನು ಅನಾಮತ್ ನುಂಗಿದೆ.
ಗಾಬರಿಗೊಂಡ ಮನೆಯವರು ತಕ್ಷಣ ಉರಗ ತಜ್ಞ ಗುರುರಾಜ್ ಗೆ ಕರೆ ಮಾಡಿದ್ದಾರೆ. ಮೊಟ್ಟೆಯನ್ನು ನುಂಗಿ ಅಟ್ಟ ಏರಿದ ಹಾವನ್ನು ಗುರುರಾಜ್ ಉಪಾಯವಾಗಿ ಕೆಳಕ್ಕಿಳಿಸಿದ್ದಾರೆ. ಬಳಿಕ ಭಯಗೊಂಡ ಆ ಹಾವು, ನುಂಗಿದ್ದ ಮೊಟ್ಟೆಗಳನ್ನು ವಾಂತಿ ಮಾಡಿ ಪಲಾಯನ ಮಾಡಲು ಪ್ರಯತ್ನಿಸಿದೆ.

ಆದರೆ ಹಸಿವಿನಿಂದ ಬಂದಿದ್ದ ಹಾವನ್ನು ಹಾಗೆಯೇ ಉಪವಾಸ ಕಳಿಸಲು ಸಾಧ್ಯವೆ? ಇದನ್ನು ಗಮನಿಸಿದ ಉರುಗ ತಜ್ಞ ಗುರುರಾಜ್ ಅವರು, ಹಾವನ್ನು ರಕ್ಷಿಸುವುದರ ಜೊತೆಗೆ ಅದಕ್ಕೆ ಆಹಾರ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ನಂತರ ಅದನ್ನು ಕಾಡಿಗೆ ಬಿಡಲಾಗಿದೆ.












Click it and Unblock the Notifications