ಉಡುಪಿ ನೂತನ ಎಸ್‌ಪಿ ಆಗಿ ನಿಶಾ ಜೇಮ್ಸ್ ಅಧಿಕಾರ ಸ್ವೀಕಾರ
ಉಡುಪಿ, ಫೆಬ್ರವರಿ 23: ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ಐ ಪಿ ಎಸ್ ನಿಶಾ ಜೇಮ್ಸ್ ಇಂದು ಅಧಿಕಾರ ವಹಿಸಿಕೊಂಡರು. ಉಡುಪಿಯ ಎಸ್ಪಿ ಕಚೇರಿಯಲ್ಲಿ ನಿರ್ಗಮನ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ, ನೂತನ ಎಸ್ ಪಿಯಾಗಿ ನಿಯುಕ್ತಿಗೊಂಡಿರುವ ನಿಶಾ ಜೇಮ್ಸ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾಧ್ಯಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಸ್ಪಿ ನಿಶಾ ಜೇಮ್ಸ್, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ನನ್ನ ಆದ್ಯತೆಯಾಗಿದೆ. ಅಕ್ರಮ ಚಟುವಟಿಕೆ, ಕೋಮು ಸಂಘರ್ಷ, ರೌಡಿಸಂಗಳ ವಿರುದ್ಧ ಕಠಿಣ ಕ್ರಮ ಕಾನೂನು ರೀತಿಯಲ್ಲಿ ಜರುಗಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಮಹಿಳೆಯರಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅದಕ್ಕಾಗಿ ಜನರ ಸಹಕಾರ ಮುಖ್ಯವಾಗಿ ಬೇಕು. ಪ್ರಾಮಾಣಿಕವಾಗಿ ಹಾಗೂ ನಿಷ್ಪಕ್ಷವಾಗಿ ಕೆಲಸ ಮಾಡಲಾಗುವುದು. ಅಧಿಕಾರಿಗಳು ಸಿಬ್ಬಂದಿಯೆಲ್ಲ ಸೇರಿ ಕೆಲಸ ಮಾಡಬೇಕಾಗುತ್ತದೆ. ಅದರಲ್ಲಿ ಯಶಸ್ವಿಯಾಗುತ್ತೇವೆ. ಫೋನ್ ಇನ್ ಕಾರ್ಯಕ್ರಮ ಸೇರಿದಂತೆ ಹಿಂದಿನ ಎಸ್ಪಿ ಮಾಡಿರುವ ಒಳ್ಳೆಯ ಕೆಲಸಗಳನ್ನು ಮುಂದುವರಿಸುವುದಾಗಿ ಅವರು ತಿಳಿಸಿದರು.












Click it and Unblock the Notifications