ಉಡುಪಿಯಲ್ಲಿ ಜಾಗೃತಿಗೆ "ಕೊರೊನಾಸುರ" ವೇಷ...

ಉಡುಪಿ, ಏಪ್ರಿಲ್ 27: ನಗರದ ಮಾರುತಿ ವಿಥೀಕಾ ರಸ್ತೆಯಲ್ಲಿ ಇಂದು ವಿಚಿತ್ರ ವೇಷಧಾರಿಯೊಬ್ಬರು ಕಂಡುಬಂದರು. ದಿನಸಿ, ಇನ್ನಿತರ ಸಾಮಗ್ರಿಗಳನ್ನು ಖರೀದಿಸಲು ಬಂದ ಗ್ರಾಹಕರು ಒಮ್ಮೆಗೇ ಈ ವೇಷ ಕಂಡು ದಂಗಾದರು.

ಇದು, ಕೊರೊನಾ ಸೋಂಕು ಹರಡದಂತೆ ತಡೆಯಲು, ಜಾಗೃತಿ ಮೂಡಿಸಲು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮಾಡಿದ ಜಾಗೃತಿ ವೇಷವಾಗಿತ್ತು. ಸಾರ್ವಜನಿಕರಲ್ಲಿ ಕೊರೊನಾ ಕುರಿತು ತಿಳಿವಳಿಕೆ ಮೂಡಿಸಲು, "ಕೊರೊನಾಸುರ ಅಟ್ಟಹಾಸ" ಎನ್ನುವ ಅಣುಕು ಪ್ರದರ್ಶನ ನಡೆಯಿತು.

Udupi Person Dressed Like Coronavirus To Bring Awareness In People

ಕೊರೊನಾಸುರ ವೇಷವನ್ನು ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಧರಿಸಿದ್ದರು. ಮುಖಕ್ಕೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯು ಹೊರಡಿಸಿರುವ ಆರೋಗ್ಯ ಸುರಕ್ಷಾ ವಿಧಾನಗಳನ್ನು ಪಾಲಿಸುವಂತೆ ನಿತ್ಯಾನಂದ ಒಳಕಾಡು ಅವರು ಈ ವೇಷ ಹಾಕಿ ಅರಿವು ಮೂಡಿಸಿದರು. ಸಾಮಗ್ರಿ ಖರೀದಿಸಲು ರಸ್ತೆಗೆ ಬಂದಿದ್ದ ಜನರನ್ನು ಈ ವೇಷ ಗಮನ ಸೆಳೆದದ್ದು ಮಾತ್ರ ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+