ಉಡುಪಿ ಮಠದಲ್ಲಿ ಈ ಬಾರಿಯೂ ಇಫ್ತಾರ್ ಕೂಟ: ಪೇಜಾವರ ಶ್ರೀ
Recommended Video

ಉಡುಪಿ ಮಠದಲ್ಲಿ ಈ ಬಾರಿ ಕೂಡ ಇಫ್ತಾರ್ ಕೂಟ ಏರ್ಪಡಿಸಲಾಗುತ್ತೆ ಎಂದ ಪೇಜಾವರ ಶ್ರೀಗಳು | Oneindia Kannada
ಉಡುಪಿ, ಜೂನ್ 01: ಕಳೆದ ಬಾರಿ ಉಡುಪಿಯಲ್ಲಿ ಇಫ್ತಾರ್ ಕೂಟ ಆಯೋಜಿಸಿ ಪರ-ವಿರೋಧ ಟೀಕೆಗೆ ಗುರಿಯಾಗಿದ್ದರೂ ಸಹ ಈ ಬಾರಿಯೂ ರಂಜಾನ್ ಪ್ರಯುಕ್ತ ಇಫ್ತಾರ್ ಕೂಟ ಆಯೋಜಿಸುವುದಾಗಿ ಪೇಜಾವರ ಶ್ರೀಗಳು ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರ, ಮುಸಲ್ಮಾನ ಮುಖಂಡರು ಈ ಬಾರಿಯೂ ಇಫ್ತಾರ್ ಕೂಟ ಆಯೋಜಿಸುತ್ತೇವೆ ಎಂದು ಶ್ರೀಗಳು ಹೇಳಿದ್ದಾರೆ.
ಆದರೆ ಈ ಬಾರಿ ಮುಸಲ್ಮಾನ ನಾಯಕರಿಗೆ ಈ ಬಗ್ಗೆ ಉತ್ಸಾಹ ಇದ್ದಂತಿಲ್ಲ ಎಂದಿರುವ ಅವರು, 'ಮೂರ್ತಿ ಪೂಜೆ ನಡೆಯುವ ಕಡೆ ಕಾರ್ಯಕ್ರಮ ಆಯೋಜಿಸಲು ಒಪ್ಪುತ್ತಿಲ್ಲ, ಒಪ್ಪಿದರೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಸತ್ಕಾರ ಕೂಟ ಆಯೋಜಿಸುವ ಇರಾದೆ ಇದೆ' ಎಂದು ಅವರು ಹೇಳಿದ್ದಾರೆ.

ಕಳೆದ ಬಾರಿ ಮಠದ ವತಿಯಿಂದ ಇಫ್ತಾರ್ ಕೂಟ ಆಯೋಜನೆ ಮಾಡಿದ್ದಕ್ಕೆ ಪೇಜಾವರ ಶ್ರೀಗಳ ವಿರುದ್ಧ ಭಾರಿ ಟೀಕೆ ಕೇಳಿ ಬಂದಿತ್ತು. ಹಲವರು ಪೇಜಾವರ ಶ್ರೀಗಳನ್ನು ಬೆಂಬಲಿಸಿಯೂ ಮಾತನಾಡಿದ್ದರು.












Click it and Unblock the Notifications