ಜೂನ್ 1ರಿಂದ ಉಡುಪಿಯಲ್ಲಿ ಕೃಷ್ಣನ ದರ್ಶನವಿಲ್ಲ

ಉಡುಪಿ, ಮೇ 28 : ಕರ್ನಾಟಕದಲ್ಲಿ ಜೂನ್ 1ರಿಂದ ಮುಜರಾಯಿ ಇಲಾಖೆ ವ್ಯಾಪ್ತಿಯ ಹಲವು ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಆದರೆ, ಉಡುಪಿಯಲ್ಲಿ ಶ್ರೀ ಕೃಷ್ಣನ ದರ್ಶನ ಪಡೆಯಲು ಇನ್ನೂ ಕೆಲವು ದಿನ ಕಾಯಬೇಕಿದೆ.

Recommended Video

      BJP ಅಂಗೈಯಲ್ಲಿ ಅರಮನೆ, ಮಾಯಾ ಬಜಾರ್ ತೋರಿಸಿದ್ದಾರೆ ಎಂದ ಈಶ್ವರ ಖಂಡ್ರೆ | Oneindia Kannada

      ರಾಜ್ಯದ ಇತರೆ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಿದರೂ ಉಡುಪಿಯಲ್ಲಿ 10 ರಿಂದ 15 ದಿನಗಳ ಬಳಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಈಶಪ್ರಿಯ ಸ್ವಾಮೀಜಿ ಈ ಕುರಿತು ಹೇಳಿಕೆ ನೀಡಿದ್ದಾರೆ.

      ಕೋವಿಡ್ - 19 ವಿಶ್ವವನ್ನೇ ತಲ್ಲಣಗೊಳಿಸಿರುವ ಸಂದರ್ಭದಲ್ಲಿ ಭಕ್ತರಿಗೆ ಮಠದ ಒಳಗೆ ಪ್ರವೇಶ ನೀಡಿಲ್ಲ. ಕೇಂದ್ರ ಸರ್ಕಾರ ಮತ್ತು ಉಡುಪಿ ಜಿಲ್ಲಾಡಳಿತ ನೀಡಿದ ಆದೇಶವನ್ನು ಪಾಲಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದ್ದಾರೆ.

      Lock Down Know About Udupi Krishna Temple Darshan

      ದೇವಾಲಯಗಳಲ್ಲಿ ಜೂನ್ 1ರಿಂದ ದರ್ಶನಕ್ಕೆ ಅವಕಾಶ ನೀಡಿದರೂ 10-15 ದಿನಗಳ ಬಳಿಕ ಸಂದರ್ಭಾನುಸಾರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಸ್ವಾಮೀಜೀಗಳು ಸ್ಪಷ್ಟಪಡಿಸಿದ್ದಾರೆ.

      ಕೃಷ್ಣ ಭಕ್ತರಿಗೆ ಹೊರಗಿನಿಂದಲೇ ದರ್ಶನ ವ್ಯವಸ್ಥೆ ಇದೆ. ಭಕ್ತರು ಸಹ ಸಹಕಾರ ನೀಡುತ್ತಿದ್ದಾರೆ. ಅಗತ್ಯದ ಸೇವಾ ಪರಿಚಾರಕರು ಮಾತ್ರ ಒಳಗೆ ಇದ್ದು, ಪೂಜೆಗಳು ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ.

      ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಮಠ ಈ ತೀರ್ಮಾನ ಕೈಗೊಂಡಿದೆ. ಭಕ್ತರು ಇದಕ್ಕೆ ಸಹಕಾರ ನೀಡಬೇಕು. ಸದ್ಯಕ್ಕೆ ಜೂನ್ 1ರಿಂದ ದರ್ಶನ ಆರಂಭಿಸುವುದಿಲ್ಲ ಎಂದು ಸ್ವಾಮೀಜಿಗಳು ಹೇಳಿದ್ದಾರೆ.

      ಲಾಕ್ ಡೌನ್ ಪರಿಣಾಮ ರಾಜ್ಯದ ಎಲ್ಲಾ ದೇವಾಲಯ, ಚರ್ಚ್, ಮಸೀದಿ ಮುಚ್ಚಲಾಗಿದೆ. ಜೂನ್ 1ರಿಂದ ದೇವಾಲಯಗಳಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+