ಮತ್ತೆ ಬಾಗಿಲು ತೆರೆಯುತ್ತಾ ಮಣಿಪಾಲದ ಐನಾಕ್ಸ್?
ಮಣಿಪಾಲ, ಅಕ್ಟೋಬರ್ 31 : ಮಣಿಪಾಲದಲ್ಲಿರುವ ಐನಾಕ್ಸ್ ಚಿತ್ರಮಂದಿರ ಮತ್ತೆ ಬಾಗಿಲು ತೆರೆಯುವುದೇ? ಎಂಬುದು ಸಿನಿ ಪ್ರಿಯರ ಪ್ರಶ್ನೆ. ಐನಾಕ್ಸ್ ಚಿತ್ರಮಂದಿರವನ್ನು ಮತ್ತೆ ಅರಭಿಸಲು ತಕ್ಷಣ ಅವಕಾಶ ನೀಡುವುದಿಲ್ಲ ಎಂದು ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಶಿರೂರು ಮಠಕ್ಕೆ ಸೇರಿದ ಮಣಿಪಾಲದ ಕುಂಡೇಲು ಕಾಡಿನ ಗುಡ್ಡದಲ್ಲಿರುವ ಐನಾಕ್ಸ್ ಸಿನೆಮಾ ಮಂದಿರದ ಬಳಿ 2015ರ ಜುಲೈನಲ್ಲಿ ಭಾರಿ ಭೂ ಕುಸಿತ ಉಂಟಾಗಿತ್ತು. ಇದರಿಂದಾಗಿ ಚಿತ್ರಮಂದಿರಕ್ಕೆ ಬೀಗ ಜಡಿಯಲಾಗಿದೆ. ಈಗ ಚಿತ್ರಮಂದಿರವನ್ನು ಪುನಃ ಆರಂಭಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. [ಮಣಿಪಾಲ ಗ್ಯಾಂಗ್ ರೇಪ್ : ಮೂವರಿಗೆ ಜೀವಾವಧಿ ಶಿಕ್ಷೆ]

ಐನಾಕ್ಸ್ ಚಿತ್ರಮಂದಿರವಿರುವ ಪ್ರದೇಶ ಅಪಾಯಕಾರಿಯಾಗಿದ್ದು, ಮಳೆಗಾಲದಲ್ಲಿ ಮತ್ತೆ ಸಮಸ್ಯೆಯಾಗಬಹುದು. ಆದ್ದರಿಂದ, ಮತ್ತೆ ಚಿತ್ರ ಪ್ರದರ್ಶನ ನೆಡೆಸಲು ಅವಕಾಶ ನೀಡಬಾರದು. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಬೇಕು ಎಂದು ಸಭೆಯಲ್ಲಿ ಸದಸ್ಯರು ಚರ್ಚೆ ನಡೆಸಿದ್ದಾರೆ. [ಮಣಿಪಾಲಕ್ಕೆ ಫ್ಲೈ ಬಸ್ ಸೇವೆ ವಿಸ್ತರಣೆ]
ಸಭೆಯಲ್ಲಿ ಈ ಕುರಿತು ಮಾತನಾಡಿರುವ ಪೌರಾಯುಕ್ತರು, 'ಐನಾಕ್ಸ್ ಸಂಸ್ಥೆಯವರಿಗೆ ಸುಲಭವಾಗಿ ಚಿತ್ರಮಂದಿರ ಮತ್ತೆ ಅರಭಿಸಲು ಅವಕಾಶ ನೀಡುವುದಿಲ್ಲ. ಬೇರೆ ಸ್ಥಳದಲ್ಲಿ ಚಿತ್ರಮಂದಿರ ಮಾಡುವುದಾದದರೆ ಅವಕಾಶ ನೀಡುತ್ತೇವೆ' ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಮಳೆಗಾಲದಲ್ಲಿ ಐನಾಕ್ಸ್ ಚಿತಮಂದಿರದ ಅನುಪಾಸು ಭೋಕುಸಿತ ಉಂಟಾಗಿ ಅಪಾಯದ ಪ್ರದೇಶವನ್ನು ಅವಿಘ್ನಾನಿಕ ಮಾದರಿಯಲ್ಲಿ ಕಾಡಿದ ಹಿನ್ನಲೆಯಲ್ಲಿ ಭೂಕುಸಿತ ಉಂಟಾಗಿತ್ತು . ಬಿಲ್ಡ್ ರಗಳ ನಿರ್ಲಕ್ಷತನ ಇದೀಗ ಉಡುಪಿಯ ಐನಾಕ್ಸ್ ಚಿತ್ರಮಂದಿರಕ್ಕೆ ಅಸ್ತಿತ್ವಕ್ಕೆ ಕುತ್ತು ತಂದಿದೆ.
ಸ್ಥಳಕ್ಕೆ ಭೇಟಿ ನೀಡಿದ್ದರು : ಜುಲೈ ತಿಂಗಳಿನಲ್ಲಿ ಐನಾಕ್ಸ್ ಚಿತ್ರಮಂದಿರಕ್ಕೆ ಹೋಗುವ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿತ್ತು. ಐನಾಕ್ಸ್ ಹಿಂದಿನ ಭಾಗದಲ್ಲಿಯೂ ಗುಡ್ಡ ಕುಸಿದಿತ್ತು. ಆಗ ಉಡುಪಿ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.












Click it and Unblock the Notifications