ಉಡುಪಿಯಲ್ಲೂ ಉಗ್ರರ ಸುಳಿವು; ರೈಲ್ವೇ ನಿಲ್ದಾಣದಲ್ಲಿ ಇಬ್ಬರು ಶಂಕಿತ ಉಗ್ರರ ಅರೆಸ್ಟ್
ಉಡುಪಿ, ಜನವರಿ 14: ತಮಿಳುನಾಡಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಹತ್ಯೆ ಮಾಡಿದ್ದ ಆರೋಪದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಇಂದು ನಸುಕಿನ ವೇಳೆ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಜನವರಿ 8ರಂದು ತಮಿಳುನಾಡಿನ ಕಲಿಯಿಕ್ಕಾವಿಲ ಚೆಕ್ ಪೋಸ್ಟ್ ಬಳಿ ಪೊಲೀಸ್ ಅಧಿಕಾರಿ ವಿಲ್ಸನ್ ಎಂಬುವರನ್ನು ಹತ್ಯೆಗೈಯಲಾಗಿತ್ತು. ಅದೇ ಉಗ್ರರು ಕೇರಳ ಮೂಲಕ ಕರ್ನಾಟಕದ ಕರಾವಳಿಗೆ ಆಗಮಿಸಿರುವ ಮಾಹಿತಿ ದೊರೆತಿದ್ದು, ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.
ಆರೋಪಿಗಳನ್ನು ತೀವ್ರವಾಗಿ ಶೋಧಿಸುತ್ತಿದ್ದ ಎನ್.ಐ.ಎ ತಂಡ, 12 ಜನರನ್ನೊಳಗೊಂಡ ಜಿಹಾದಿಗಳ ತಂಡಕ್ಕೆ ಬಲೆ ಬೀಸಿತ್ತು. ಈ ಪೈಕಿ ಹನೀಫ್ ಖಾನ್, ಇಮ್ರಾನ್ ಖಾನ್, ಘನಿ ಮೊಹಮ್ಮದ್ ಝೈದ್ ಎಂಬುವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.

ಉಡುಪಿಯಲ್ಲಿ ಬಂಧಿತರಾಗಿರುವ ಅಬ್ದುಲ್ ಶಮೀಮ್ ಮತ್ತು ತೌಫಿಕ್ ಅವರೂ ವಿಲ್ಸನ್ ಹತ್ಯೆಗೈದಿದ್ದ ಆರೋಪಿಗಳಾಗಿದ್ದರು. ಆರೋಪಿಗಳು ನೇಪಾಳ ಮೂಲಕ ವಿದೇಶಕ್ಕೆ ಹಾರಲು ಸಿದ್ಧರಾಗಿದ್ದರು ಎಂಬ ಮಾಹಿತಿ ದೊರೆತಿದೆ. ಬಂಧನದ ಕುರಿತು ಸ್ಥಳೀಯ ಪೊಲೀಸರು ಗೌಪ್ಯತೆ ಕಾಯ್ದುಕೊಂಡಿದ್ದಾರೆ.












Click it and Unblock the Notifications