ಇರ್ಜಿಕೊಡ್ಲು ಬಳಿ 3 ಚಿರತೆಗಳ ಪೈಕಿ 2 ಚಿರತೆ ಬೋನಿಗೆ

ಉಡುಪಿ, ಡಿಸೆಂಬರ್ 28: ಹಾಡಹಗಲೇ ಗುಂಪಾಗಿ ಬಂದು ದಾಳಿ ಮಾಡುತ್ತಿದ್ದ 3 ಚಿರತೆಗಳ ಪೈಕಿ 2 ಚಿರತೆ ಬೋನಿಗೆ ಬಿದ್ದಿವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಇರ್ಜಿಕೊಡ್ಲು ಎಂಬಲ್ಲಿ ಈ ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.

ಇಲ್ಲಿಯ ನಿವಾಸಿ ಗುಲಾಬಿ ಕುಲಾಲ್ತಿ ಎಂಬವರ ಮನೆಯ ಹಟ್ಟಿಯಲ್ಲಿದ್ದ ದನಕರುಗಳ ಮೇಲೆ 3 ಚಿರತೆ ಗುಂಪಾಗಿ ಇತ್ತೀಚೆಗೆ ದಾಳಿ ಮಾಡಿದ್ದವು. ಹಾಡಹಗಲೇ ದಾಳಿ ಮಾಡುತ್ತಿದ್ದ ಈ ಚಿರತೆಗಳು ಇದುವರೆಗೆ 20 ಹಸು ಮತ್ತು 15 ಸಾಕು ನಾಯಿ, ಬೆಕ್ಕುಗಳನ್ನು ಹಿಡಿದಿವೆ ಎಂದು ಹೇಳಲಾಗಿದೆ.

ಈ ಚಿರತೆಗಳು ಗುಂಪಾಗಿ ಬಂದು ದಾಳಿ ಮಾಡುತ್ತಿದ್ದದನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದರು. ಮೊಳಹಳ್ಳಿ ಪರಿಸರದಲ್ಲಿ ಜನರು ಒಂಟಿಯಾಗಿ ತಿರುಗಾಡುವುದು ಮತ್ತು ರಾತ್ರಿ ಸಂಚಾರ ಮಾಡುವುದನ್ನೇ ನಿಲ್ಲಿಸಿದ್ದರು.

Two Leopard captured by forest department in Udupi

ಚಿರತೆಗಳು ಗುಂಪಾಗಿ ದಾಳಿ ಮಾಡುತ್ತಿರುವ ಘಟನೆಯ ಕುರಿತು ಶಂಕರನಾರಾಯಣ ಅರಣ್ಯ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದರು. ಈ ಕುರಿತು ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಇಲಾಖೆ ಸಿಬ್ಬಂದಿಗಳ ತಂಡ ಗುಲಾಬಿ ಕುಲಾಲ್ತಿ ಮನೆಯ ಬಳಿ ಬೋನು ಇರಿಸಿತ್ತು. ಈ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ಎರಡು ಚಿರತೆಗಳು ಸೆರೆಯಾಗಿದ್ದು, ಮೂರನೇ ಚಿರತೆಗಾಗಿ ಬೋನಿರಿಸಲಾಗಿದೆ.

ಈ ಭಾಗದಲ್ಲಿ ನಿರಂತರವಾಗಿ ಚಿರತೆ ಹಾವಳಿಗೆ ಒಳಗಾಗುತ್ತಿರುವ ಹೈನು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಡು ಪ್ರಾಣಿಗಳು ನಾಡಿಗೆ ಬರದಂತೆ ಕ್ರಮಕ್ಕಾಗಿ ಸ್ಥಳೀಯರು ಆಗ್ರಹಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+