Get Updates
Get notified of breaking news, exclusive insights, and must-see stories!

ವರಮಹಾಲಕ್ಷ್ಮೀ ವ್ರತ: ಉಡುಪಿಯಲ್ಲಿ ಮುಗಿಲು ಮುಟ್ಟಿದ ಭಕ್ತಿ

ಉಡುಪಿ, ಆಗಸ್ಟ್.24: ಇಂದು ಶುಕ್ರವಾರ ವರಮಹಾಲಕ್ಷ್ಮೀ ಪ್ರಯುಕ್ತ ಇಲ್ಲಿನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಮುಖ್ಯವಾಗಿ ಗೌಡ ಸಾರಸ್ವತ ಸಮುದಾಯದ ಮುತ್ತೈದೆಯರು ಸಾಮೂಹಿಕವಾಗಿ ಪೂಜೆ ,ಮಂತ್ರ ಪಠಣ ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಶ್ರಾವಣದ ಎರಡನೇ ಶುಕ್ರವಾರ ಬರುವ ಈ ಹಬ್ಬದ ದಿವಸ ಭಕ್ತರು ಕೇಳಿದ ವರವನ್ನು ಮಹಾಲಕ್ಷ್ಮಿ ನೀಡುತ್ತಾಳೆ ಎಂಬುದು ಭಕ್ತರಲ್ಲಿರುವ ನಂಬಿಕೆ. ಬೆಳಗ್ಗೆ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತಿ ಮುಗಿಲು ಮುಟ್ಟಿತ್ತು. ಸಾವಿರಾರು ಸುಮಂಗಲಿಯರು ಸೇರಿ ದೇವಸ್ಥಾನದಲ್ಲಿ ಸಾಮೂಹಿಕ ಲಕ್ಷ್ಮೀ ಪೂಜೆ ಮತ್ತು ಚೂಡಿ ಪೂಜೆ ನಡೆಸಿ ಕೃತಾರ್ಥರಾದರು.

ಈ ವೇಳೆ ದೇವಸ್ಥಾನದಲ್ಲಿ ವಿಶೇಷ ಅಲಂಕಾರವನ್ನೂ ಮಾಡಲಾಗಿತ್ತು. ಬೆಳಗ್ಗೆ ಗಂಗಾಪೂಜೆ ಬಳಿಕ ದೇವರನ್ನು ಪ್ರತಿಷ್ಠಾಪಿಸಲಾಯಿತು. ತದನಂತರ ದೇವರಿಗೆ ಅಲಂಕಾರ ನಡೆದು ಸಾಮೂಹಿಕ ಕುಂಕುಮಾರ್ಚನೆ ಸಂಪನ್ನಗೊಂಡಿತು.

Special worship was performed at Udupi temple

ಈ ವೇಳೆ ಮಹಿಳೆಯರ ಮಂತ್ರ ಪಠಣ ಮತ್ತು ಸ್ತೋತ್ರದ ಹಾಡು ಅನುರಣಗೊಳ್ಳುತ್ತಲೇ ಇತ್ತು. ನೂರಾರು ಸಂಖ್ಯೆಯಲ್ಲಿದ್ದ ಮುತ್ತೈದೆಯರು ತಮಗೆ ದೊರೆತ ಮುತ್ತೈದೆ ಭಾಗ್ಯವನ್ನು ಶಾಶ್ವತವಾಗಿಡು ಎಂದು ಕೇಳಿಕೊಂಡರು.

Special worship was performed at Udupi temple

ವರ್ಷಂಪ್ರತಿ ಈ ದಿವಸ 12 ಗಂಟಿನ ದಾರವನ್ನು ಧಾರಣೆ ಮಾಡುವ ಸಂಪ್ರದಾಯ ಜಿಎಸ್ಬಿ ಸಮುದಾಯದಲ್ಲಿದೆ. ಅಂತೆಯೇ ಹಿಂದಿನ ವರ್ಷದ ದಾರವನ್ನು ವಿಸರ್ಜಿಸಿ ಮುತ್ತೈದೆಯರು ಹೊಸ ದಾರ ಧಾರಣೆ ಮಾಡುವುದು ಈ ದಿನದ ವಿಶೇಷ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+