ಮೋದಿ ವಿಶ್ವವಿದ್ಯಾಲಯದಲ್ಲಿ ಶೋಭಾ ಕರಂದ್ಲಾಜೆ ಫೇಲ್!

ಉಡುಪಿ, ಮಾರ್ಚ್ 10 : ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವವಿದ್ಯಾಲಯದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಫೇಲ್ ಆಗಿದ್ದಾರೆ. ಶೇ 28.43ರಷ್ಟು ಅಂಕಗಳನ್ನು ಮಾತ್ರ ಅವರು ಪಡೆದಿದ್ದಾರೆ.

ಹೌದು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ವಿರುದ್ಧ ಇಂತಹದ್ದೊಂದು ಅಭಿಮಾನ ಮಾಡಲಾಗುತ್ತಿದೆ. ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಟಿಕೆಟ್ ನೀಡಬಾರದು ಎಂದು ಪ್ರಚಾರ ಮಾಡಲಾಗುತ್ತಿದೆ.

Shobha Karandlaje fail in Narendra Modi university

'ಈ ಮೇಲಿನ ಫಲಿತಾಂಶ ಹೊಂದಿದ ಅಭ್ಯರ್ಥಿಗೆ ಮುಂದಿನ ಬಾರಿ ದಾಖಲಾತಿ ನಿರಾಕರಿಸಲಾಗಿದೆ' ಎಂದು ಶೋಭಾ ಕರಂದ್ಲಾಜೆ ಅವರ ಅಂಕಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ.

ಸಂಸದರ ನಿಧಿ ಬಳಕೆಯಲ್ಲಿ 55, ಕ್ಷೇತ್ರಕ್ಕೆ ಹಾಜರಾತಿಯಲ್ಲಿ 21, ಕಾರ್ಯಕರ್ತರೊಡನೆ ಸಂಪರ್ಕದಲ್ಲಿ 13, ಮತದಾರರೊಂದಿಗೆ ಸಂಪರ್ಕ 18, ರೈತರ ಸಮಸ್ಯೆಗೆ ಸ್ಪಂದಿಸುವುದರಲ್ಲಿ 16.5, ಕ್ಷೇತ್ರಕ್ಕೆ ಅನುದಾನದ ವಿಚಾರದಲ್ಲಿ 13 ಅಂಕಗಳನ್ನು ಶೋಭಾ ಕರಂದ್ಲಾಜೆ ಪಡೆದಿದ್ದಾರೆ.

ಒಟ್ಟು 480 ಅಂಕಗಳಿಗೆ ಶೋಭಾ ಕರಂದ್ಲಾಜೆ ಅವರು 136.5 ಅಂಕಗಳನ್ನು ಪಡೆದಿದ್ದಾರೆ. ಒಟ್ಟು 28.43 ಶೇ ಫಲಿತಾಂಶವನ್ನು ಪಡೆದಿದ್ದಾರೆ.

ಕಡಿಮೆ ಅಂಕಗಳಿಸಿ ಫೇಲ್ ಆಗಿರುವ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿಯ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಶೋಭಾ ಕರಂದ್ಲಾಜೆ ವಿರುದ್ಧ #ShobhaGoBack ಅಭಿಯಾನ ನಡೆಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+