ಉಡುಪಿ: ರಾಹುಲ್ ಗಾಂಧಿಗೆ ಅಂಜಲ್ ಮೀನು ಗಿಫ್ಟ್‌ ನೀಡಿದ ಮಹಿಳೆ

ಉಡುಪಿ, ಏಪ್ರಿಲ್‌ 27: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ರಂಗೇರಿದ್ದು, ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಇಂದು (ಏಪ್ರಿಲ್‌ 27) ರಂದು ಉಡುಪಿಗೆ ಭೇಟಿ ನೀಡಿದರು. ದಿಲ್ಲಿಯಿಂದ ಹೊರಟು ಶಿವಮೊಗ್ಗ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಆದಿ ಉಡುಪಿ ಹೆಲಿಪ್ಯಾಡ್‌ಗೆ ಬಂದಿಳಿದರು.

ಜಿಲ್ಲೆಗೆ ಆಗಮಿಸಿದ ರಾಹುಲ್ ಗಾಂಧಿಯನ್ನು ಜಿಲ್ಲಾ ಕಾಂಗ್ರೆಸ್ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿಕೊಂಡರು. ಕಾಪು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ರಾಹುಲ್ ಗಾಂಧಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಬಳಿ ತೆರಳಿದರು.ಈ ವೇಳೆ ರಾಹುಲ್ ಗಾಂಧಿ ಅವರನ್ನು ದೇವಾಲಯ ಆಡಳಿತ ಮಂಡಳಿ ಹೂವಿನ ಹಾರ ಹಾಕಿ, ಶಾಲು ಹೊದಿಸಿ ಗೌರವಿಸಿದ್ದಾರೆ.

Rahul Gandhi Udupi Visit: Interaction With Fishermen Community At Udupi District

ಬಳಿಕ ರಾಹುಲ್ ಗಾಂಧಿ ಕರಾವಳಿಯ ಮುಖ್ಯ ಕಸುಬಾದ ಮೀನುಗಾರಿಕೆ ಬಗ್ಗೆ ಮೀನುಗಾರ ಮಹಿಳೆಯರು, ಕಾರ್ಮಿಕರ ಜೊತೆಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿದ್ದಾರೆ. ದೇವಸ್ಥಾನ ಆವರಣದ ಸಭಾಂಗಣದಲ್ಲಿ ಎರಡು ಸಾವಿರದಷ್ಟು ಮೀನುಗಾರ ಪ್ರತಿನಿಧಿಗಳ ಜೊತೆ ರಾಹುಲ್ ಸಂವಾದ ನಡೆಸಿದರು. ಮೀನುಗಾರ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದುಲ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕನ್ನಡ- ಇಂಗ್ಲಿಷ್‌ನಲ್ಲಿ ವ್ಯವಹರಿಸಿ ಮೀನುಗಾರರ ಸಮಸ್ಯೆಯನ್ನು ರಾಹುಲ್ ಗಾಂಧಿಗೆ ವಿವರಿಸಿದರು.

ಮೀನುಗಾರರಿಗೆ ನೀಡುತ್ತಿರುವ ಸಾಲ ಸಬ್ಸಿಡಿಯನ್ನು ಐದು ಲಕ್ಷಕ್ಕೆ ಏರಿಸಬೇಕೆಂದು ಮೀನುಗಾರ ಮಹಿಳೆಯೊಬ್ಬರು ಬೇಡಿಕೆಯನ್ನು ರಾಹುಲ್‌ ಗಾಂಧಿ ಮುಂದಿಟ್ಟರು. ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದಲ್ಲಿ ನಿಮ್ಮೆಲ್ಲಾ ಸಮಸ್ಯೆಯನ್ನು ಬಗೆ ಹರಿಸುತ್ತೇವೆ ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ. ಸಂವಾದದಲ್ಲಿ ಮಂಗಳೂರು, ಉಡುಪಿ, ಬೈಂದೂರು ತಾಲೂಕಿನ ಮೀನುಗಾರ ಪ್ರತಿನಿಧಿಗಳು ಭಾಗವಹಿಸಿದ್ದರು.

ರಾಹುಲ್ ಗಾಂಧಿಗೆ ಅಂಜಲ್ ಮೀನು ಗಿಫ್ಟ್‌ ನೀಡಿದ ಮಹಿಳೆ

ಮೀನುಗಾರರ ಸಂವಾದದ ಬಳಿಕ ವೇದಿಕೆಯಲ್ಲಿ ಮೀನುಗಾರ ಮಹಿಳೆಯೊಬ್ಬರು ರಾಹುಲ್‌ ಗಾಂಧಿಗೆ ಅಂಜಲ್‌ ಮೀನು ಗಿಫ್ಟ್‌ ನೀಡಿದ್ದಾರೆ. ಮಹಿಳೆ ನೀಡಿದ ಉಡುಗೊರೆಯನ್ನು ಪಡೆದ ರಾಹುಲ್‌ ಗಾಂಧಿ ವೇದಿಕೆಯಲ್ಲಿ ತಮ್ಮೊಂದಿಗಿದ್ದ ಕಾಂಗ್ರೆಸ್‌ ಮುಖಂಡ ಪ್ರತಾಪ್‌ ಅವರಿಗೆ ಅಂಜಲ್ ಮೀನು ಹಸ್ತಾಂತರ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+