ಉಡುಪಿ ಶ್ರೀಕೃಷ್ಣ ಮಠದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

Posted By:
Subscribe to Oneindia Kannada

ಉಡುಪಿ, ಜೂನ್, 18 : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಂದು (ಭಾನುವಾರ) ಮಂಗಳೂರು ವಿಮಾನ ನಿಲ್ದಾಣದ ಮೂಲಕ ಉಡುಪಿಗೆ ತೆರಳಿ ಶ್ರೀಕೃಷ್ಣನ ದರ್ಶನ ಪಡೆದರು.

ಪ್ರಣಬ್ ಮುಖರ್ಜಿ ಅವರನ್ನು ಪೇಜಾವರ ಶ್ರೀ ಬರಮಾಡಿಕೊಂಡರು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ಪ್ರಣಬ್ ಮುಖರ್ಜಿ ಅವರಿಗೆ ಸಾಥ್ ನೀಡಿದರು.

ರಾಷ್ಟ್ರಪತಿಗಳ ಉಡುಪಿ ಭೇಟಿ: ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ

ಮಂಗಳುರು ವಿಮಾನ ನಿಲ್ದಾಣದಲ್ಲಿ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಸಚಿವ ಯು.ಟಿ.ಖಾದರ್, ಮೇಯರ್ ಕವಿತಾ ಸನಿಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಪೊಲೀಸ್ ಕಮೀಷನರ್ ಟಿ.ಆರ್. ಸುರೇಶ್ ಸ್ವಾಗತಿಸಿದರು.

'ಶ್ರೀಕೃಷ್ಣ ಮಠಕ್ಕೆ ಬರುವಂತೆ ಸಿಎಂಗೆ ಆಹ್ವಾನ, ಬರೋದು ಬಿಡೋದು ಅವರಿಷ್ಟ'

ಮಂಗಳೂರು ವಿಮಾನ ನಿಲ್ದಾಣದಿಂದ ಐಎಎಫ್ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಿದರು.

ರಾಷ್ಟಪತಿಗೆ ಹಲವರ ಸಾಥ್

ರಾಷ್ಟಪತಿಗೆ ಹಲವರ ಸಾಥ್

ಮಂಗಳೂರು ವಿಮಾನ ನಿಲ್ದಾಣದಿಂದ ಐಎಎಫ್ ರಾಷ್ಟಪತಿ ಪ್ರಣಬ್ ಮುಖರ್ಜಿ ಅವರ ಜತೆ ಸಚಿವ ಕೆ.ಜೆ.ಜಾರ್ಜ್, ಅಧಿಕಾರಿಗಳಾದ ಸುವರ ಘೋಷ್, ಮೇಜರ್ ಜನರಲ್ ಅನಿಲ್ ಕೋಸ್ಟ, ಅಶೋಕ್ ಕುಮಾರ್ ಮೆಹ್ತಾ, ಎನ್.ಕೆ.ಕಶಪ್ ಮೊದಲಾದವರು ಇದ್ದರು.

ಸಚಿವ ಪ್ರಮೋದ್ ಮಧ್ವರಾಜ್ ಸ್ವಾಗತಿಸಿದರು

ಸಚಿವ ಪ್ರಮೋದ್ ಮಧ್ವರಾಜ್ ಸ್ವಾಗತಿಸಿದರು

ಮಂಗಳೂರು ವಿಮಾನ ನಿಲ್ದಾಣದಿಂದ ಐಎಎಫ್ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಿದರು. ಉಡುಪಿ ಹೆಲಿಪ್ಯಾಡ್ ನಲ್ಲಿ ಪ್ರಣಬ್ ಮುಖರ್ಜಿ ಅವರನ್ನು ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸ್ವಾಗತಿಸಿದರು

ನೆರೆದಿದ್ದ ಜನರಿಗೆ ಕೈಮುಗಿದ ಪ್ರಣಬ್ ಮುಖರ್ಜಿ

ನೆರೆದಿದ್ದ ಜನರಿಗೆ ಕೈಮುಗಿದ ಪ್ರಣಬ್ ಮುಖರ್ಜಿ

ಬಿಗಿ ಭದ್ರತೆಯೊಂದಿಗೆ ಉಡುಪಿ ಬನ್ನಂಜೆ ಯಲ್ಲಿರುವ ಪ್ರವಾಸಿ ಬಂಗಲೆಗೆ ತೆರಳಿದರು. ಈ ವೇಳೆ ಕಾರಿನಲ್ಲಿ ಹೋಗುತ್ತಿದ್ದ ರಾಷ್ಟ್ರಪತಿ ಹೆಲಿಪ್ಯಾಡ್ ಬಳಿಯ ಎಪಿಎಂಸಿ ಆವರಣದಲ್ಲಿ ನೆರೆದಿದ್ದ ಜನರಿಗೆ ಕೈಮುಗಿದು ನಮಸ್ಕರಿಸಿದರು.

ಪ್ರವಾಸಿ ಮಂದಿರದಿಂದ ಕೃಷ್ಣ ಮಠಕ್ಕೆ

ಪ್ರವಾಸಿ ಮಂದಿರದಿಂದ ಕೃಷ್ಣ ಮಠಕ್ಕೆ

ಬನ್ನಂಜೆ ಯಲ್ಲಿರುವ ಪ್ರವಾಸಿ ಮಂದಿರದಿಂದ ನೇರವಾಗಿ ಶ್ರೀಕೃಷ್ಣ ಮಠಕ್ಕೆ ತೆರಳಿದರು. ಮಠದಲ್ಲಿ ಪೇಜಾವರ ಶ್ರೀಗಳು ಬರಮಾಡಿಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
President Pranab Mukherjee arrives to Udupi, Visits Sri Krishna Math is visiting Sri Krishna Mutt and Sri Mookambika Temple at Kollur in Udupi district today(June 18).
Please Wait while comments are loading...