ಮುಖ್ಯಮಂತ್ರಿಗೆ ಪೇಜಾವರ ಶ್ರೀಗಳು ಕೇಳಿದ ಸಪ್ತ ಪ್ರಶ್ನೆ

ಉಡುಪಿ, ಜ 9: ಮೂಢನಂಬಿಕೆ ಆಚರಣೆಗಳ ಪ್ರತಿಭಂದಕ ವಿಧೇಯಕ ಜಾರಿಗೆ ತರಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ನಿಲುವಿಗೆ ಉಡುಪಿ ಹಿರಿಯ ಪೇಜಾವರ ಶ್ರೀಗಳು ಮತ್ತು ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ಭಾಯ್ ತೊಗಡಿಯಾ ಖಾರವಾಗಿ ಪ್ರತಿಕ್ರಿಯಸಿದ್ದಾರೆ.

ಬುಧವಾರ (ಜ 8) ಪೇಜಾವರ ಶ್ರೀಗಳನ್ನು ಭೇಟಿಯಾಗಿ ಮಾತನಾಡುತ್ತಿದ್ದ ತೊಗಾಡಿಯಾ, ರಾಜ್ಯದಲ್ಲಾಗಲಿ ಅಥವಾ ಕೇಂದ್ರದಲ್ಲಾಗಲಿ ಕಾಂಗ್ರೆಸ್ ಸರಕಾರ ಗಟ್ಟಿಯಾದ ನಿಲುವನ್ನು ಹೊಂದಿಲ್ಲ. ಬರೀ ಮತಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಸರಕಾರಕ್ಕೆ ಜಾತಿ ಜಾತಿ ನಡುವೆ ವಿಷಬೀಜ ಬಿತ್ತುವುದೇ ಕೆಲಸ ಎಂದು ಟೀಕಿಸಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರಕಾರ ಮೂಢನಂಬಿಕೆ ಪ್ರತಿಭಂದಕ ವಿಧೇಯಕ ಜಾರಿಗೆ ತರಲು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಸರಕಾರಕ್ಕೆ ಮೂಢನಂಬಿಕೆಯನ್ನು ನಿಜವಾಗಿಯೂ ಮಟ್ಟ ಹಾಕಬೇಕೆಂದಿದ್ದರೆ ಬೆಂಗಳೂರಿನಲ್ಲಿ ಬೆನ್ನಿಹಿನ್ ಪ್ರವಾಸಕ್ಕೆ ಅನುಮತಿ ನೀಡಿದ್ದು ಏನಕ್ಕೆ ಎಂದು ವಿಎಚ್ಪಿ ಅಂತರಾಷ್ಟೀಯ ಅಧ್ಯಕ್ಷ ತೊಗಾಡಿಯಾ ಸರಕಾರವನ್ನು ಪ್ರಶ್ನಿಸಿದ್ದಾರೆ. (ಬೆಂಗಳೂರಿನಲ್ಲಿ ಮತ್ತೆ ಬೆನ್ನಿ ಹಿನ್ ಕಣ್ ಕಟ್ ವಿದ್ಯೆ)

ಇದೇ ವರ್ಷ ಆಗಸ್ಟ್ ತಿಂಗಳಲ್ಲಿ ವಿಶ್ವ ಹಿಂದೂ ಪರಿಷತ್ ಸಂಘಟನೆ ಅಸ್ತಿತ್ವಕ್ಕೆ ಬಂದು ಐವತ್ತು ವರ್ಷಗಳಾಗುತ್ತದೆ. ದೇಶದಲ್ಲಿ ವಿಎಚ್ಪಿಯ ಸುಮಾರು ಮೂರು ಲಕ್ಷ ವಿವಿಧ ಸಂಘಟನೆಗಳಿವೆ. ಹಿಂದೂ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಯೋಜನೆಗೆ ವಿಎಚ್ಪಿ ಮುಂದಾಗಿದೆ ಎಂದು ತೊಗಡಿಯಾ ಹೇಳಿದ್ದಾರೆ.

ಮೂಢನಂಬಿಕೆ ಆಚರಣೆ ಪ್ರತಿಭಂದಕ ವಿಧೇಯಕದ ಬಗ್ಗೆ ಉಡುಪಿ ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ, ಸಿದ್ದರಾಮಯ್ಯನವರಿಗೆ ಕೇಳಿದ ಏಳು ಪ್ರಶ್ನೆಗಳು ಸ್ಲೈಡಿನಲ್ಲಿ..

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 1

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 1

ಬೆನ್ನಿಹಿನ್ ಹೀಲಿಂಗ್ ಕಾರ್ಯಕ್ರಮದ ಹಿಂದಿನ ಉದ್ದೇಶ ಮತಾಂತರ ಎಂದು ರಾಜ್ಯದ ಸಿಎಂ ಆಗಿ ನಿಮಗನಿಸುವುದಿಲ್ಲವೇ?

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 2

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 2

ಬೆನ್ನಿಹಿನ್ ಹೀಲಿಂಗ್ ಮೂಲಕ ರೋಗ ಗುಣ ಪಡಿಸುತ್ತಾನೆಂದರೆ ನೀವು ನಂಬುವಿರಾ?

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 3

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 3

ಹಿಂದೂ ದೇವಾಲಯ ಮತ್ತು ಮಠಗಳನ್ನು ಮಾತ್ರ ಮುಜರಾಯಿ ವ್ಯಾಪ್ತಿಗೆ ತರುವ ನಿಮಗೆ ಚರ್ಚ್ ಮತ್ತು ಮಸೀದಿಗಳನ್ನು ಸರಕಾರೀಕರಣಗೊಳಿಸುವ ಧೈರ್ಯವಿಲ್ಲವೇ?

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 4

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 4

ಸ್ಪರ್ಷ ಮೂಲಕ ಬೆನ್ನಿಹಿನ್ ರೋಗವನ್ನು ಗುಣ ಪಡಿಸುತ್ತಾನೆಂದರೆ ಅದು ಜನರಿಗೆ ಮಾಡುವ ವಂಚನೆಯಲ್ಲವೇ?

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 5

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 5

ಹಿಂದೂ ಕಾರ್ಯಕತರ ಮೇಲೆ ಐಪಿಸಿ ಪ್ರಕರಣ ದಾಖಲಿಸಿ ಕಿರುಕುಳ ನೀಡುವುದು ಸಮಂಜಸವೇ?

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 6

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 6

ಕ್ರಿಶ್ಚಿಯನ್ ಲಾಬಿಗೆ ಮಣಿದು ಬೆನ್ನಿಹಿನ್ ಕಾರ್ಯಕ್ರಮಕ್ಕೆ ನೀವು ಅನುಮತಿ ನೀಡಿದ್ದು ತಾನೆ?

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 7

ಪೇಜಾವರ ಶ್ರೀಗಳು ಮತ್ತು ತೊಗಾಡಿಯಾ ಪ್ರಶ್ನೆ 7

ಹಿಂದೂ ಮುಖಂಡರು ಭಾಷಣ ಮಾಡಿದರೆ ಪ್ರಚೋದನಕಾರಿ, ಮೌಲಿಗಳು ಮಾಡುವ ಭಾಷಣ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+