ಮತ ಚಲಾಯಿಸಿ ಅಭ್ಯರ್ಥಿಗಳಿಗೆ ಹಾರೈಸಿದ ಪೇಜಾವರ ಶ್ರೀಗಳು
ಉಡುಪಿ, ಮೇ 12 : ರಾಜ್ಯ ವಿಧಾನಸಭಾ ಚುನಾವಣೆಯ ಶೇಕಡ 50 ಮತದಾನ ಈಗಾಗಲೇ ನಡೆದಿದ್ದು, ಜಿಲ್ಲೆಯ ಮತದಾರರು ಹೆಚ್ಚಿನ ಉತ್ಸಾಹದಿಂದ ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ. ಹಿರಿಯ ಯತಿ ಪೇಜಾವರ ಶ್ರೀಗಳು ಸಹ ನಾರ್ತ್ ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, ನಾನು ದೇಶದ ಮತ್ತು ರಾಜ್ಯದ ಒಳಿತಿಗಾಗಿ ಮತ ಚಲಾಯಿಸಿದ್ದೇನೆ. ಈ ದೇಶಕ್ಕೆ ಒಳಿತಾಗಬೇಕು. ದೇಶದಲ್ಲಿರುವ ಅಭದ್ರತೆ ಹಾಗೂ ಸಮಸ್ಯೆಗಳು ಬಗೆಹರಿಯಬೇಕು ಎಂದು ಹೇಳಿದರು.
ಜಿಲ್ಲೆಯ ಅಭ್ಯರ್ಥಿಗಳಿಗೆ ಹಾರೈಸಿದ ಶ್ರೀಗಳು, ಎಲ್ಲರಿಗೂ ಒಳಿತಾಗಲಿ. ಅಹಿತಕರವಾಗಿ ಏನೂ ಸಂಭವಿಸದಿರಲಿ ಎಂದರು.













Click it and Unblock the Notifications