ಉಡುಪಿ ಶ್ರೀಕೃಷ್ಣನಿಗೆ ಪಟ್ಟಾಭಿರಾಮನ ಅಲಂಕಾರ
ಉಡುಪಿ, ಆಗಸ್ಟ್ 05: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಭೂಮಿಪೂಜೆ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣನಿಗೆ ಪಟ್ಟಾಭಿರಾಮ ಅಲಂಕಾರ ಮಾಡಲಾಯಿತು.
Recommended Video
SP Balasubrahmanyam tested positive for coronavirus | Oneindia Kannada
ಇಂದು ಕಾಣಿಯೂರು ವಿದ್ಯಾವಲ್ಲಭ ತೀರ್ಥರಿಂದ ವಿಶೇಷ ಅಲಂಕಾರ ಮಾಡಿದರು. ಶ್ರೀಕೃಷ್ಣನಿಗೆ ರಾಮಾಲಂಕಾರ ಮಾಡಿ, ಕಡಗೋಲ ಕೃಷ್ಣನನ್ನು ಬಿಲ್ಲು ಬಾಣ ಹಿಡಿದು ಸಿಂಹಾಸನದಲ್ಲಿ ಕುಳಿತ ಪಟ್ಟಾಭಿರಾಮನನ್ನಾಗಿಸಿದರು.

ರಾಮನ ಪಕ್ಕದಲ್ಲಿ ಹನುಮ, ಲಕ್ಷ್ಮಣ, ಸೀತೆ ಮೂರ್ತಿ ಇಟ್ಟು ಪರ್ಯಾಯಾ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಪಟ್ಟಾಭಿರಾಮನಾದ ಶ್ರೀಕೃಷ್ಣನಿಗೆ ಮಹಾಪೂಜೆಯನ್ನು ನೆರೆವೇರಿಸಿದರು.

ಉಡುಪಿ ಶ್ರೀಕೃಷ್ಣನು ಅಲಂಕಾರ ಪ್ರಿಯನಾಗಿದ್ದು, ಪ್ರತಿದಿನ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ದಿನದ ವಿಶೇಷತೆಗೆ ಹೊಂದಿಕೆಯಾಗುವಂತೆ ಅಲಂಕಾರ ಇರುತ್ತದೆ. ಶ್ರಾವಣ ಮಾಸದಲಲ್ಲಿ ಪ್ರತಿ ಶುಕ್ರವಾರ ಕೃಷ್ಣನಿಗೆ ದೇವಿಯ ಅಲಂಕಾರ ಮಾಡಲಾಗುತ್ತದೆ.












Click it and Unblock the Notifications