ಉಡುಪಿ ಚರ್ಚ್ ಗಳಲ್ಲಿ ಕೊರೊನಾ ಜಾಗೃತಿಗೆ ಸೂಚನೆ
ಉಡುಪಿ, ಮಾರ್ಚ್ 15: ಉಡುಪಿಯ ಕ್ರೈಸ್ತ ಧರ್ಮ ಪ್ರಾಂತ್ಯದಲ್ಲಿ ಬರುವ ಎಲ್ಲ ಚರ್ಚ್ ಗಳಲ್ಲಿ ಕೊರೊನಾ ಜಾಗೃತಿ ಮೂಡಿಸಬೇಕೆಂದು ಉಡುಪಿ ಜೆರಾಲ್ಡ್ ಐಸಾಕ್ ಲೋಬೊ ಸೂಚನೆ ನೀಡಿದ್ದಾರೆ.
ಶನಿವಾರ ಮತ್ತು ಭಾನುವಾರದ ವಿಶೇಷ ಪ್ರಾರ್ಥನೆಯ ವೇಳೆ ಧರ್ಮಗುರುಗಳು ಚರ್ಚ್ ನಲ್ಲಿ ಜನ ಜಾಗೃತಿಯ ಬಗ್ಗೆ ಕಿವಿಮಾತು ಹೇಳಿದ್ದಾರೆ. ಚರ್ಚ್, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಗಳಲ್ಲಿ ಯಾವ ತರದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಪಾಠ ಮಾಡಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ ಇರುವ ಕ್ರೈಸ್ತ ಧರ್ಮೀಯರು ಕೆಲ ಕಾಲ ಅಲ್ಲೇ ಇದ್ದು ವೈರಸ್ ಭೀತಿ ನಿವಾರಣೆಯಾದ ಮೇಲೆ ಭಾರತಕ್ಕೆ ವಾಪಸ್ ಬರುವಂತೆ ಕರೆ ನೀಡಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ಮನುಷ್ಯರಿಗೆ ವಿಶೇಷ ಶಕ್ತಿ ಬರುವಂತೆ ಬೈಬಲ್ ನ ಕೆಲ ಅಧ್ಯಾಯಗಳ ಪಾಠವನ್ನು ಭಾನುವಾರದ ಪೂಜೆಯ ಸಂದರ್ಭ ಮಾಡಲಾಯಿತು. ಸ್ವತಃ ಉಡುಪಿಯ ಬಿಷಪ್ ಕೆಲ ಚರ್ಚ್ ಗಳಿಗೆ ಭೇಟಿ ಕೊಟ್ಟು ಕೊರೊನಾ ವಿರುದ್ಧ ಜನಜಾಗೃತಿ ಮೂಡಿಸಿದ್ದಾರೆ.
ಮುಂದಿನ ಶುಕ್ರವಾರ ಒಂದು ದಿನ ನಿರಂತರವಾಗಿ ಕೊರೊನಾ ವೈರಸ್ ನ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಭಕ್ತರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಚರ್ಚ್ ಗಳಲ್ಲಿ, ಕ್ರೈಸ್ತ ಸಂಸ್ಥೆಗಳಲ್ಲಿ ಕಾರ್ಯಾಗಾರವನ್ನು ನಡೆಸಲು ಧರ್ಮಪ್ರಾಂತ್ಯ ತೀರ್ಮಾನಿಸಿದೆ.












Click it and Unblock the Notifications