ಭಾರತ ರತ್ನ ಕೊಟ್ಟು ಪ್ರಣವ್ ಮುಖರ್ಜಿಯನ್ನು ಹೈಜಾಕ್ ಮಾಡಲು ಸಾದ್ಯವಿಲ್ಲ: ಜಯಮಾಲ
ಉಡುಪಿ ಜನವರಿ 26: ಭಾರತ ರತ್ನ ಕೊಟ್ಟು ಪ್ರಣವ್ ಮುಖರ್ಜಿಯವರನ್ನು ಹೈಜಾಕ್ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಜಯಮಾಲಾ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರನ್ನು ಏನು ಮಾಡಲು ಸಾಧ್ಯವಿಲ್ಲ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ಅವರಿಗೆ ಭಾರತರತ್ನ ಪ್ರಶಸ್ತಿ ದೊರಕಿರುವುದು ಖುಷಿ ತಂದಿದೆ ಎಂದು ಹೇಳಿದರು.
ಅವರಿಗೆ ಭಾರತ ರತ್ನ ನೀಡಿದ್ದರಲ್ಲಿ ಯಾವುದೇ ರಾಜಕೀಯ ಇಲ್ಲ. ಅಂತಹ ಒಳ್ಳೇ ಕೆಲಸ ಮಾಡಿದ್ದಾರೆ.ಭಾರತ ರತ್ನಕ್ಕೆ ಪ್ರಣವ್ ಮುಖರ್ಜಿ ಅರ್ಹರು ಎಂದು ಅವರು ಹೇಳಿದರು.

ಸಿದ್ದಗಂಗಾ ಶ್ರೀ ಗಳಿಗೆ ಭಾರತ ರತ್ನ ಬರಬೇಕು ಅನ್ನೋದು ನಮ್ಮ ಆಶಯವಾಗಿತ್ತು. ಬಂದಿದ್ದರೆ ತುಂಬಾ ಸಂತೋಷ ಆಗ್ತಿತ್ತು. ಮುಂದಿನ ವರ್ಷವಾದರೂ ಸಿದ್ದಗಂಗಾ ಶ್ರೀ ಗಳಿಗೆ ಭಾರತ ರತ್ನ ಪ್ರಶಸ್ತಿ ದೊರೆಯಲಿ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅಭಿಪ್ರಾಯ ಪಟ್ಟಿದ್ದಾರೆ.
ಸಿದ್ದಗಂಗಾ ಶ್ರೀ ಗಳು ಭಾರತ ರತ್ನ ಪ್ರಶಸ್ತಿ ಮೀರಿ ಬೆಳೆದವರು. ಆ ದಿವ್ಯ ಚೇತನಕ್ಕೆ ನೆಪ ಮಾತ್ರ ಕ್ಕೆ ಭಾರತ ರತ್ನ ನೀಡಬೇಕು . ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಬರಬೇಕು ಅನ್ನೋದು ನಮ್ಮ ಆಶಯವಾಗಿತ್ತು. ಬಂದಿದ್ದರೆ ತುಂಬಾ ಸಂತೋಷ ಆಗ್ತಿತ್ತು. ಆದರೆ ಮುಂದಿನ ವರ್ಷವಾದರೂ ಪ್ರಶಸ್ತಿ ಬರಲಿ ಎಂದು ಅವರು ಹೇಳಿದರು .
ಈ ಬಾರಿ ಕರ್ನಾಟಕದ ಅನೇಕರಿಗೆ ಪದ್ಮ ಪ್ರಶಸ್ತಿ ಬಂದಿದೆ. ಸಾಲುಮರದ ತಿಮ್ಮಕ್ಕ, ಪ್ರಭುದೇವ ಅವರಿಗೆ ಅಭಿನಂದನೆ ಸಲ್ಲಿಸುತ್ತೆನೆ . ಕಲಾವಿದರಿಗೆ ಭಾಷೆಯ ಗಡಿ ಹಾಕಬೇಡಿ. ಚತ್ರರಂಗ ಬೆಳೆಸಿದವರು ಪ್ರಭುದೇವ ಕುಟುಂಬದವರು. ಅವರಿಗೆ ಪ್ರಶಸ್ತಿ ಬಂದದ್ದು ಖುಷಿಯಾಗಿದೆ.












Click it and Unblock the Notifications