ಕ್ಯಾಟ್ ಪರೀಕ್ಷೆಯಲ್ಲಿ ಕನ್ನಡಿಗ ನಿರಂಜನ್ ಪ್ರಸಾದ್ ಟಾಪರ್

ಉಡುಪಿ, ಜನವರಿ 07: ಸಾಮಾನ್ಯ ಪ್ರವೇಶ ಪರೀಕ್ಷೆ (ಕ್ಯಾಟ್) ಫಲಿತಾಂಶ ಪ್ರಕಟಗೊಂಡಿದ್ದು, ಮಣಿಪಾಲದ ನಿರಂಜನ್ ಪ್ರಸಾದ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಪರೀಕ್ಷೆ ಬರೆದ ದೇಶದ 2.9 ಲಕ್ಷ ವಿದ್ಯಾರ್ಥಿಗಳಲ್ಲಿ 11 ಮಂದಿ ಮಾತ್ರ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ನಿರಂಜನ್ ಕರ್ನಾಟಕದ ಏಕೈಕ ವಿದ್ಯಾರ್ಥಿ ಎಂಬುದು ವಿಶೇಷ. ದೇಶದ ಪ್ರತಿಷ್ಠಿತ ಐಐಎಂ ಮತ್ತು ಬಿಸ್ನೆಸ್ ಸ್ಕೂಲ್‌ಗಳಲ್ಲಿ ಪ್ರವೇಶ ಪಡೆಯಲು 2018 ನವೆಂಬರ್‌ನಲ್ಲಿ ಕಲ್ಕತ್ತ ಐಐಎಂ ಕ್ಯಾಟ್ ಪರೀಕ್ಷೆ ನಡೆಸಿತ್ತು.

ಮಣಿಪಾಲದ ಲಕ್ಷ್ಮೀಂದ್ರ ನಗರದ ನಿವಾಸಿ ನಿರಂಜನ್ ಮದ್ರಾಸ್ ಐಐಟಿಯಲ್ಲಿ ಮೆಕಾನಿಕಲ್ ಡ್ಯುಯೆಲ್ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದಾರೆ.

Niranjan Prasad M scored a 100 percentile in CAT 2018

ನಿರಂಜನ್ ಪ್ರಸಾದ್, ಮೂಡುಬಿದಿರೆ ಮೈಟ್ ಇನ್ಸ್ ಟ್ಯೂಟ್‌ನಲ್ಲಿ ಎಂಬಿಎ ವಿಭಾಗ ಮುಖ್ಯಸ್ಥರಾದ ಜಯಪ್ರಸಾದ್ ಮೊಳೆಯಾರ್, ಮಣಿಪಾಲ ಮಾಹೆಯಲ್ಲಿ ಪ್ರಾಧ್ಯಾಪಕಿ ಕೀರ್ತನಾ ದಂಪತಿಗಳ ಪುತ್ರ. ಬ್ರಹ್ಮಾವರ ಲಿಟಲ್‌ ರಾಕ್ ಶಾಲೆಯಲ್ಲಿ 10 ಮತ್ತು 12 ನೇ ತರಗತಿಯಲ್ಲಿ ಉತ್ತಮ ಅಂಕಗಳಿಸಿ ಪದವಿ ಶಿಕ್ಷಣಕ್ಕೆ ಮದ್ರಾಸ್‌ ಐಐಟಿಗೆ ನಿರಂಜನ್ ಸೇರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+