ಉಡುಪಿಯಲ್ಲಿ ಶ್ರೀಕೃಷ್ಣನ ಜಪ ಮಾಡಿ ಕಾಂಗ್ರೆಸ್ ಅನ್ನು ಜರಿದ ಮೋದಿ
ಉಡುಪಿ, ಮೇ 01: ಚಾಮರಾಜನಗರದ ಬೃಹತ್ ಬಿಜೆಪಿ ಸಮಾವೇಶ ಮುಗಿಸಿ ನರೇಂದ್ರ ಮೋದಿ ಅವರು ಉಡುಪಿಗೆ ಆಗಮಿಸಿದ್ದಾರೆ.
* ಕನ್ನಡದಲ್ಲಿ ಭಾಷಣ ಆರಂಭಿಸಿದ ನರೇಂದ್ರ ಮೋದಿ, ಕೃಷ್ಣ ಜಪ ಮಾಡಿದ ಮೋದಿ
* ಹಿಂದಿ ಭಾಷಣದ ಕನ್ನಡ ಭಾಷಾಂತರ ಬೇಡ ಎಂದ ಕಾರ್ಯಕರ್ತರು, ಹಿಂದಿಯಲ್ಲಿ ಭಾಷಣ ಮುಂದುವರೆಸಿದ ಮೋದಿ
* ನಮ್ಮ ನಿಮ್ಮ ನಡುವಿನ ಪ್ರೀತಿಗೆ ಭಾಷೆ ಅಡ್ಡಿ ಪಡಿಸುವುದಿಲ್ಲ ಎಂದು ಚಪ್ಪಾಳೆ ಗಿಟ್ಟಿಸಿದ ಮೋದಿ
* ಪರುಶರಾಮ, ಶ್ರೀಕೃಷ್ಣ, ಪ್ರಕೃತಿ ಉಲ್ಲೇಖಗಳೊಂದಿಗೆ ಮುಂದುವರೆದ ಮೋದಿ ಮಾತು
* ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದ ಉಡುಪಿಯ ಗುರುರಾಜ್‌ನ ಉಲ್ಲೇಖಿಸಿದ ಮೋದಿ, ಗುರುರಾಜ್ ಉಡುಪಿಯ ಹೆಸರನ್ನು ವಿಶ್ವವಿಖ್ಯಾತಿ ಮಾಡಿದ್ದಾರೆ ಎಂದರು.
* ಉಡುಪಿ ಮತ್ತು ಜನಸಂಘದ ಸಂಬಂಧ ಇಂದು ನಿನ್ನೆಯದಲ್ಲ, ಅದು ಐತಿಹಾಸಿಕ ಪರಂಪರೆ.
* ಬ್ಯಾಂಕಿಂಗ್ ಕ್ಷೇತ್ರಕ್ಕೆ ವಿಶೇಷ ಯೋಗಧಾನ ಕೊಟ್ಟ ಉಡುಪಿಯ ದಿವಾನ್ ಶೆಟ್ಟಿ, ಹಾಜಿ ಸಾಹೇಬ್ ಅವರುಗಳನ್ನು ನೆನೆದ ಮೋದಿ
* ನಿರುದ್ಯೋಗ ಯುವಕರಿಗೆ, ರೈತರಿಗೆ ಬ್ಯಾಂಕ್‌ನ ಬಾಗಿಲುಗಳು ಬಂದ್ ಆಗಿದ್ದವು, ಆದರೆ ನಾವು ಬಂದು ಸಂಪೂರ್ಣ ಸ್ಥಿತಿಯನ್ನೇ ಬದಲಾಯಿಸಿಬಿಟ್ಟಿವಿ.
* ಮುದ್ರಾ ಯೋಜನೆಯಿಂದ 12000 ಕೋಟಿ ಸಾಲ ನೀಡಿದ್ದೇವೆ, ಕರ್ನಾಟಕವೊಂದರಲ್ಲಿ 1.50 ಜನರಿಗೆ ಸಾಲ ನೀಡಲಾಗಿದೆ.
* ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸೆಗೆ ಅವಕಾಶ ಇದೆಯೇ, ರಾಜಕೀಯ ವಿಷಯದಲ್ಲಿ ಭಿನ್ನ ಅಭಿಪ್ರಾಯ ಹೊಂದಿದವರನ್ನು ಕೊಲ್ಲಲಾಗುತ್ತದೆಯೇನು. ಆದರೆ 24 ಬಿಜೆಪಿಯ ಕಾರ್ಯಕರ್ತರನ್ನು ಕೊಲ್ಲಲಾಯಿತು.
* ಕರ್ನಾಟಕದ ಶಾಂತಿಯನ್ನು ಕಾಂಗ್ರೆಸ್ ಕದಡಿಬಿಟ್ಟಿದೆ, ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಹೆಸರಿಗೆ ಕಾಂಗ್ರೆಸ್ ಮಸಿ ಬಳಿದಿದೆ.
* ದೇವೇಗೌಡರು ನಮ್ಮ ಮನೆಗೆ ಅವರ ಕಾರಿನ ಬಾಗಿಲನ್ನು ನಾನೇ ತೆಗೆಯುತ್ತೇನೆ, ಅವರು ಹೊರಡುವಾಗ ನಾನೇ ಹೋಗಿ ಅವರನ್ನು ಕಾರು ಹತ್ತಿಸುತ್ತೇನೆ
* ದೇವೇಗೌಡ ಅವರನ್ನು ಹೊಗಳಿ ಅಟ್ಟಕ್ಕೇರಿಸಿದ ನರೇಂದ್ರ ಮೋದಿ, ಅವರು ಮಣ್ಣಿನ ಮಗ, ಅವರ ಸೇವೆಯನ್ನು ದೇಶ ಮರೆಯುವಂತೆಯೇ ಇಲ್ಲ
* ಕಾಂಗ್ರೆಸ್ ಪಕ್ಷ ದೇವೇಗೌಡರನ್ನೇ ಅವಮಾನಿಸುತ್ತಿದೆ, ದೇವೇಗೌಡ ಅವರು ದೆಹಲಿಗೆ ಬಂದಾಗಲೆಲ್ಲಾ, ಅವರು ನನ್ನ ಸಮಯ ಕೇಳಿದಾಗಲೆಲ್ಲಾ ಅವರನ್ನು ನಾನು ಭೇಟಿ ಮಾಡಿದ್ದೇನೆ, ಅವರಿಗೆ ನನ್ನ ಸಂಪೂರ್ಣ ಗೌರವ ಅರ್ಪಿಸುತ್ತೇನೆ.
* ಕರ್ನಾಟಕದಲ್ಲಿ ಲೋಕಾಯುಕ್ತದ ಮೇಲೆ ಹಲ್ಲೆ ಆಯಿತು, ಇಲ್ಲಿನ ಪೊಲೀಸ್ ಅಧಿಕಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದರು.
* ಮಾಧ್ಯಮದವರು ಕರ್ನಾಟಕದಲ್ಲಿ ನಡೆದ ಕೆಲವು ವಿಷಯಗಳನ್ನು ತೋರಿಸದಿದ್ದರೂ ಸಾಮಾಜಿಕ ಜಾಲತಾಣಗಳು ಆ ಕೆಲಸ ಮಾಡಿವೆ.
* ಕರ್ನಾಟಕದಲ್ಲಿ ಲೋಕಾಯುಕ್ತದ ಮೇಲೆ ಹಲ್ಲೆ ಆಯಿತು, ಇಲ್ಲಿನ ಪೊಲೀಸ್ ಅಧಿಕಾರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದರು.
* ಮಾಧ್ಯಮದವರು ಕರ್ನಾಟಕದಲ್ಲಿ ನಡೆದ ಕೆಲವು ವಿಷಯಗಳನ್ನು ತೋರಿಸದಿದ್ದರೂ ಸಾಮಾಜಿಕ ಜಾಲತಾಣಗಳು ಆ ಕೆಲಸ ಮಾಡಿವೆ.
* ಲ್ಯಾಂಡ್ ಮಾಫಿಯಾ, ಸ್ಯಾಂಡ್ ಮಾಫಿಯಾ ಮಾಡುವವರಿಗೆ ಸರ್ಕಾರದ ಬೆಂಬಲ ಇರುವುದು ಇಲ್ಲಿನ ನಾಯಿ, ಬೆಕ್ಕುಗಳಿಗೂ ಗೊತ್ತಿದೆ. ಇಂತಹಾ ಮಾಫಿಯಾಗಳನ್ನು ಸಾಕುವ ಸರ್ಕಾರ ಇರಬೇಕಾ?.
* ಕರ್ನಾಟಕದಲ್ಲಿ ಸಮೃದ್ಧವಾದ ತೀರಗಳಿವೆ, ಸಾಗರ ಮಾಲ ಯೋಜನೆ ಮೂಲಕ ತೀರಗಳ ಅಭಿವೃದ್ಧಿ ಮಾಡುತ್ತಿದ್ದೇವೆ, ಮೀನುಗಾರ ಜೀವನ ಸುಧಾರಣೆ ಮಾಡುತ್ತಿದ್ದೇವೆ. ಅವರಿಗೆ ಸೂಕ್ತ ಮೂಲ ಸೌಕರ್ಯ ಒದಗಿಸುತ್ತಿದ್ದೇವೆ.
* ಎಲ್ಲ ಮತದಾರರ ಮನೆ ತಲುಪಿ, ಬಿಜೆಪಿ ಪರ ಪ್ರಚಾರ ಮಾಡಿ, ಮತದಾರರನ್ನು ಪೋಲಿಂಗ್ ಬೂತ್ ವರೆಗೂ ಕರೆತರುವ ಜವಾಬ್ದಾರಿ ನಿಮ್ಮದು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಮೋದಿ.
* ಸ್ವಚ್ಛ ಸುಂದರ ಕರ್ನಾಟಕ ನಿರ್ಮಿಸೋಣ, ಬನ್ನಿ ಎಲ್ಲರೂ ಕೈಜೋಡಿಸಿ, ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ, ಎಲ್ಲರಿಗೂ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿ ಮಾತು ಮುಗಿಸಿದ ನರೇಂದ್ರ ಮೋದಿ.












Click it and Unblock the Notifications