ಮಹಿಳಾ ದಿನಾಚರಣೆಯಂದೇ ತಂಗಿ ಸುಮಲತಾಗೆ ಅವಮಾನ:ಶ್ರೀನಿವಾಸ ಪೂಜಾರಿ
ಉಡುಪಿ, ಮಾರ್ಚ್ 08: ಸುಮಲತಾ ಬಗ್ಗೆ ರೇವಣ್ಣ ನೀಡಿರುವ ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಸೂಪರ್ ಸಿಎಂ ಹೀಗೆ ಹೇಳಬಾರದಿತ್ತು ಎಂದು ರೇವಣ್ಣ ಅವರನ್ನು ಕುಟುಕಿದರು.
ಸಚಿವ ರೇವಣ್ಣ ಸುಮಲತಾ ಬಗ್ಗೆ ಮನಸೋ ಇಚ್ಛೆ ಮಾತನಾಡಿದ್ದಾರೆ. ಮಹಿಳಾ ದಿನಾಚರಣೆಯಂದೇ ತಂಗಿ ಸುಮಲತಾಗೆ ಅವಮಾನ ಮಾಡಿದ್ದಾರೆ. ರೇವಣ್ಣ ಅವರಿಂದ ಇಂತಹ ಭಾಷೆ ನಿರೀಕ್ಷೆ ಮಾಡಿರಲಿಲ್ಲ. ಸುಮಲತಾ ಬಗ್ಗೆ ಆಡಿದ ಮಾತು ಹಿಂಪಡೆಯಿರಿ ಎಂದು ರೇವಣ್ಣ ಅವರನ್ನು ಒತ್ತಾಯಿಸಿದರು.

ರಾಮಮಂದಿರ ವಿವಾದಕ್ಕೆ ಸಂಧಾನ ಮೂಲಕ ಪರಿಹಾರ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀನಿವಾಸ ಪೂಜಾರಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಸುಪ್ರೀಂ ಕೋರ್ಟ್ ಸಮಿತಿ ರಚನೆ ಮಾಡಿರೋದು ಸ್ವಾಗತಾರ್ಹ ಎಂದರು.
ನ್ಯಾಯಾಂಗದ ಚೌಕಟ್ಟಿನೊಳಗೆ ಪರಿಹಾರ ಆಗಬೇಕು ಅನ್ನೊದು ಭಾರತೀಯರ ಬಯಕೆ. ರಾಮಜನ್ಮಭೂಮಿ ವಿವಾದ ಪರಿಹಾರವಾಗುವ ವಿಶ್ವಾಸವಿದೆ. ಶ್ರೀರಾಮ ಮಂದಿರ ಅಯೋಧ್ಯೆಯಲ್ಲೇ ನಿರ್ಮಾಣ ಆಗುತ್ತದೆ. ದಾರ್ಶನಿಕರು ಇರುವ ಸಮಿತಿ ಎಂಟೇ ವಾರದಲ್ಲಿ ಒಳ್ಳೆಯ ವರದಿಕೊಡುತ್ತೆ ಎಂದು ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications