Heart Attack: ನಮಾಜ್ ಮಾಡುವಾಗಲೇ ಹೃದಯಾಘಾತ, ವ್ಯಕ್ತಿ ಸಾವು
ಉಡುಪಿ, ಫೆಬ್ರವರಿ 10: ನಮಾಜ್ ಮಾಡುವಾಗಲೇ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉಡುಪಿ ನಗರದ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿಯಲ್ಲಿ ನಡೆದಿದೆ. ದೊಡ್ಡಣಗುಡ್ಡೆಯ ಕರಂಬಳ್ಳಿ ನಿವಾಸಿ ಮುಸ್ತಾಕ್ (55) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ ಎಂದು ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಮುಸ್ತಾಕ್ ಎಂದಿನಂತೆ ನಿನ್ನೆ (ಫೆಬ್ರವರಿ 09) ಮಸೀದಿಗೆ ತೆರಳಿದ್ದಾರೆ. ಬೆಳಗ್ಗೆ ಎಲ್ಲರೊಂದಿಗೆ ಸಾಲಿನಲ್ಲಿ ಕುಳಿತುಕೊಂಡು ಮೊದಲು ನಮಾಜ್ ಮಾಡಿದ್ದಾರೆ. ಖುತ್ಬಾ ಕೇಳಲು ಕುಳಿತಿರುವಾಗ ವ್ಯಕ್ತಿಗೆ ಹೃದಯಾಘಾತ ಸಂಭವಿಸಿದೆ. ಹೃದಯಾಘಾತವಾಗುವಾಗ ಮೊದಲು ನಿಧಾನಕ್ಕೆ ನೆಲಕ್ಕೆ ಬಿದ್ದಿದ್ದಾರೆ.

ಜೊತೆಯಲ್ಲಿದ್ದವರು ದೇವರಿಗೆ ನಮಸ್ಕಾರ ಮಾಡುತ್ತಿದ್ದಾರೆ ಎಂದು ತಿಳಿದಿದ್ದಾರೆ. ಆದರೆ ಮುಸ್ತಾಕ್ ವರ್ತನೆ ಕಂಡು ಜೊತೆಯಲ್ಲಿ ಪಕ್ಕದಲ್ಲಿದ್ದ ವ್ಯಕ್ತಿ ಕೈ ಹಿಡಿದು ಎತ್ತಿದ್ದಾರೆ. ಆದರೆ ದುರಾದೃಷ್ಟವಶಾತ್ ಮುಸ್ತಾಕ್ ಸಂಪೂರ್ಣವಾಗಿ ನೆಲಕ್ಕೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ನಮಾಜ್ ವೇಳೆ ವ್ಯಕ್ತಿ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೀನು ಹಿಡಿಯಲು ಹೋಗಿದ್ದ ತಂದೆ-ಮಗ ಸಾವು
ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದ ತಂದೆ-ಮಗ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಹಳ್ಳಿಗದ್ದೆ ಗ್ರಾಮದ ಖಲಂದರ್ ಫಕ್ರುಸಾಬ್, ಪುತ್ರ ತನ್ವೀರ್ ಮೃತಪಟ್ಟ ದುರ್ದೈವಿಗಳು.

ಖಲಂದರ್ ಫಕ್ರುಸಾಬ್ ಹಾಗೂ ತನ್ವೀರ್ನಿನ್ನೆ ಬೇಡ್ತಿ ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದರು. ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹಳ್ಳದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದೆ ಎನ್ನಲಾಗಿದೆ. ಸ್ಥಳೀಯರ ಸಹಾಯದಿಂದ ಪೊಲೀಸರು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಸಮೀಪ ನಿಲ್ಲಿಸಿದ್ದ ಕಾರಿನ ಮೇಲೆ ಆನೆ ದಾಳಿ: ಕಾರು ಸಂಪೂರ್ಣ ಜಖಂ
ಚಾಮರಾಜನಗರ: ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಚಲಕೇಬ್ಬೆ ಗ್ರಾಮದ ಮುತ್ತು ಕುಮಾರ್ ಎಂಬುವವರ ಕಾರಿನ ಮೇಲೆ ತಡ ರಾತ್ರಿ ಕಾಡಾನೆ ದಾಳಿ ಮಾಡಿದ ಪರಿಣಾಮ ಕಾರಿನ ಹಿಂಭಾಗ ಸಂಪೂರ್ಣ ಜಖಂ ಆಗಿದೆ.
ಹನೂರು ತಾಲೂಕಿನ ಮಹದೇಶ್ವರಬೆಟ್ಟ ಸಮೀಪದ ಪೊನ್ನಾಚ್ಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಈಚಲಕೆಬ್ಬೆ ಗ್ರಾಮದ ಮುತ್ತುಕು ಮಾರ್ ಅವರು
ಎಂದಿನಂತೆ ಕಾರು ನಿಲ್ಲಿಸಿ ಮನೆಗೆ ತೆರಳಿದ್ದಾರೆ. ತಡರಾತ್ರಿ ಸರಿ ಸುಮಾರು 2.30ರ ವೇಳೆ ಕಾಡಾನೆಯು ಕಾರಿನ ಹಿಂಭಾಗಕ್ಕೆ ಗುದ್ದಿದೆ. ಕಾರಿನಲ್ಲಿ ಸೆನ್ಸಾರ್ ಅಳವಡಿಸಿದ್ದ ಪರಿಣಾಮ ಸೌಂಡ್ ಬಂದ ಕೂಡಲೇ ಮನೆಯಿಂದ ಹೊರಬಂದ ನಾಗರಾಜು ಕೂಗಾಡಿ ಸದ್ದು ಮಾಡಿದಾಗ ಆನೆ ಪರಾರಿಯಾಗಿದ್ದಾರೆ. ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿರುವುದರ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಸ್ಥಳ ಮಹಜರು ನಡೆಸಿದ್ದಾರೆ.












Click it and Unblock the Notifications