ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ವಿದ್ಯಾರ್ಥಿ ಗಳ ಮುಡಿಗೆ 'ಗ್ರ್ಯಾಂಡ್' ಪ್ರಶಸ್ತಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜನವರಿ. 11 : ದಕ್ಷಿಣ ಭಾರತದ ಇಂಟೆಲ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಐ.ಆರ್ ಐ.ಎಸ್ ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗದಲ್ಲಿ ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ನ ಪಿಯುಸಿ ವಿದ್ಯಾರ್ಥಿಗಳಾದ ಚೈತನ್ಯ ಮತ್ತು ಜೀವಿ ''ಗ್ರಾಂಡ್'' ಎಂಬ ಮಹೋನ್ನತ ಪ್ರಶಸ್ತಿ ಗೆದ್ದಿದ್ದಾರೆ.

ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ನ ಪ್ರಾಂಶುಪಾಲ ಮ್ಯಾಥ್ಯೂ.ಸಿ ಈ ಕುರಿತು ಮಾಹಿತಿ ನೀಡಿದರು. ಈ ಸ್ಪರ್ಧೆಗೆ ಆನ್ ಲೈನ್ ನಲ್ಲಿ ಸುಮಾರು ಮೂರೂ ಲಕ್ಷ ಸ್ಪರ್ಧಿಗಳ ಪೈಕಿ 100 ಸ್ಪರ್ಧಾಳುಗಳು ಆಯ್ಕೆಯಾಗಿದ್ದರು.

Little Rock School boys of Udupi win the Grand Award by Intel

ಈ 100 ಸ್ಪರ್ಧಿಗಳ ಪೈಕಿ ಜೀವಿ ಮತ್ತು ಚೈತನ್ಯ 'ಸ್ಮಾರ್ಟ್ ಫೋನ್ ಏಡೆಡ್ ಇಮೇಜಿಂಗ್ ಸಿಸ್ಟಮ್' ಎಂಬ ತಮ್ಮ ಪ್ರಾಜೆಕ್ಟ್ ನ್ನು ಪುಣೆಯಲ್ಲಿ ಮಂಡಿಸಿದ್ದರು. ಈ ಪೈಕಿ 20 ಸ್ಪರ್ಧಿಗಳಿಗೆ 'ಗ್ರ್ಯಾಂಡ್ ಅವಾರ್ಡ್' ದೊರೆತಿದೆ. ಅವರಲ್ಲಿ ಜೀವಿ ಮತ್ತು ಚೈತನ್ಯ ಆಯ್ಕೆಗೊಂಡಿದ್ದಾರೆ ಎಂದು ತಿಳಿಸಿದರು.

ಈ ಪ್ರಶಸ್ತಿ ವಿಜೇತರ ತಂಡ ಭಾರತವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಹಂತದಲ್ಲಿ ಸ್ಪರ್ಧಿಸಲು ತಯಾರಾಗಿದೆ. ಇದಲ್ಲದೆ ಜೀವಿ ಅವರು 2015 ರಲ್ಲಿ ಗ್ರಾಮೀಣ ಐಟಿ ರಾಷ್ಟ್ರೀಯ ರಸಪ್ರಶ್ನೆ ಪ್ರಶಸ್ತಿಯನ್ನು ಕೂಡಾ ಗೆದ್ದಿದ್ದರು.

ಇನ್ನೊಂದು ಸಂತಸದ ವಿಷಯವೆಂದರೆ ಜೀವಿ ಮತ್ತು ಚೈತನ್ಯ ಅವರು ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾದಲ್ಲಿ 2017 ಮೇನಲ್ಲಿ ನಡೆಯಲಿರುವ ಇಂಟೆಲ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಮೇಳಕ್ಕೆ ಅರ್ಹರಾಗಿದ್ದಾರೆ. ಇವರಿಬ್ಬರು ಮುಂದಿನ ಸ್ಪರ್ಧೆಗಳಲ್ಲಿ ಜಯ ಶಾಲಿಯಾಗಿ ಬರಲಿ ಎಂದು ಶುಭ ಹಾರೈಸೋಣ

English summary
Chaitanya and Geeve, two students of Class XII of Little Rock Indian School, Brahmavar, have won the Grand Award from IRIS jointly sponsored by Intel South India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X