ಮುಖ್ಯಮಂತ್ರಿ ಕುಮಾರಸ್ವಾಮಿ ಕೊಲ್ಲೂರು ಭೇಟಿ ಕಾರ್ಯಕ್ರಮ ರದ್ದು
ಉಡುಪಿ, ಅಕ್ಟೋಬರ್.30: ಮುಖ್ಯಮಂತ್ರಿ ಕುಮಾರಸ್ವಾಮಿ ಕೊಲ್ಲೂರು ಭೇಟಿ ಕಾರ್ಯಕ್ರಮ ರದ್ದಾಗಿದೆ. ಶಿವಮೊಗ್ಗದ ಕಾರ್ಯಕ್ರಮಗಳು ವಿಳಂಬವಾದ ಹಿನ್ನಲೆಯಲ್ಲಿ ಕೊಲ್ಲೂರು ಭೇಟಿ ರದ್ದಾಗಿದೆ ಎಂದು ತಿಳಿದು ಬಂದಿದೆ.
ಇದೀಗ ನೇರವಾಗಿ ಬೈಂದೂರು ತ್ರಾಸಿಯಲ್ಲಿ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಕುಮಾರಸ್ವಾಮಿ ಪಾಲ್ಗೊಳಲಿದ್ದಾರೆ. ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಸಿಎಂ ಹೆಸರಲ್ಲಿ ಚಂಡಿಕಾ ಹೋಮ ಆಯೋಜಿಸಲಾಗಿತ್ತು. ಆದರೆ ಅದು ಕೊನೆ ಗಳಿಗೆಯಲ್ಲಿ ರದ್ದಾಗಿದೆ.
ಅರೆ ಶಿರೂರು ಹೆಲಿಪ್ಯಾಡ್ ನಿಂದ ಕುಮಾರಸ್ವಾಮಿ ನೇರ ತ್ರಾಸಿ ಸಭಾಭವನದತ್ತ ತೆರಳಲಿದ್ದು, ಕೆಲವೇ ಕ್ಷಣದಲ್ಲಿ ಪ್ರಚಾರ ಸಭೆ ಪ್ರಾರಂಭವಾಗಲಿದೆ. ಸಭೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಉಡುಪಿ ಜಿಲ್ಲಾ ನಾಯಕರು ಪಾಲ್ಗೊಳ್ಳುವರು.

ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ದೇವಸ್ಥಾನ ಭೇಟಿ ಮಹತ್ವ ಪಡೆದಿತ್ತು. ಪ್ರಚಾರ ಸಭೆಯ ಬಳಿಕ ಅಲ್ಲೇ ಭೋಜನ ಸ್ವೀಕರಿಸಿ 2 ಗಂಟೆಗೆ ಶಿವಮೊಗ್ಗಕ್ಕೆ ಹೆಲಿಕಾಪ್ಟರ್ ಮೂಲಕವೇ ಸಿಎಂ ವಾಪಾಸ್ ತೆರಳಲಿದ್ದಾರೆ ಎಂಬ ಮಾಹಿತಿ ಬಂದಿದೆ.












Click it and Unblock the Notifications